ಕಾಂಗ್ರೆಸ್ ನಾಯಕಿ ವಿರುದ್ಧ 1 ಕೋಟಿ ವಂಚನೆ ಆರೋಪ
ಹೈದರಾಬಾದ್, ಮಾ. 22 : ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಅವರು 1.10ಕೋಟಿ ರೂ. ವಂಚನೆ ಮಾಡಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿದಂತೆ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸುವುದಾಗಿ ಅಭ್ಯರ್ಥಿಯೊಬ್ಬರಿಂದ ಹಣ ಪಡೆದಿದ್ದ ಅವರು ನಂತರ ವಂಚಿಸಿದ್ದಾರೆ ಎಂಬುದು ಆರೋಪ.
ಮಾಜಿ ಕೇಂದ್ರ ಸಚಿವೆ, ರಾಜ್ಯಸಭಾ ಸದಸ್ಯೆ ರೇಣುಕಾ ಚೌಧರಿ ಅವರ ವಿರುದ್ಧ ತೆಲಂಗಾಣದ ಖಮ್ಮಂ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮ್ ಜಿ ಎಂಬುವವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವುದಾಗಿ ನಂಬಿಸಿ 1.10 ಕೋಟಿ ರೂ. ಹಣ ಪಡೆದಿದ್ದಾರೆ, ಹಣ ವಾಪಸ್ ಹೇಳಿದ್ದಕ್ಕೆ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ರಾಮ್ ಜಿ ಅವರಿಗೆ ಟಿಕೆಟ್ ಕೈ ತಪ್ಪಿದಾಗ ಹಣ ವಾಪಸ್ ನೀಡುವಂತೆ ಅವರ ಪತ್ನಿ ಕಲಾವತಿ ರೇಣುಕಾ ಚೌಧರಿ ಅವರನ್ನು ಕೇಳಿದ್ದಾರೆ. ಆಗ ಅವರು ಜಾತಿ ನಿಂದನೆ ಮಾಡಿದ್ದಾರೆ ಮತ್ತು ಹಣವನ್ನು ವಾಸಪ್ ನೀಡದೆ ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ. ರಾಮ್ ಜಿ ಅವರು ನಿಧನ ಹೊಂದಿದ ಬಳಿಕ ಕಲಾವತಿ ಅವರು ಚೌಧರಿ ಅವರ ಬಳಿ ಹಣ ನೀಡುವಂತೆ ಮನವಿ ಮಾಡಿದ್ದರು.[ತೆಲಂಗಾಣ ಉದಯ, ಸಿಂಗಾರಗೊಂಡ ಹೈದರಾಬಾದ್]
ರೇಣುಕಾ ಚೌಧರಿ ಅವರು ಹಣ ವಾಪಸ್ ನೀಡಲು ನಿರಾಕರಿಸಿ, ಜಾತಿ ನಿಂದನೆ ಮಾಡಿದ ನಂತರ ಕಲಾವತಿ ಅವರು ಹೈದರಾಬಾದ್ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಆದೇಶ ನೀಡಿದೆ. ಕೋರ್ಟ್ ಆದೇಶದ ಅನ್ವಯ ಜಾತಿನಿಂದನೆ ಪ್ರಕರಣದ ಜೊತೆಗೆ ವಂಚನೆ ಪ್ರಕರಣವನ್ನೂ ದಾಖಲಿಸಿಕೊಳ್ಳಲಾಗಿದೆ.












Click it and Unblock the Notifications