ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್‌

|
Google Oneindia Kannada News

ಹೈದರಾಬಾದ್, ಡಿಸೆಂಬರ್ 11: ತಮ್ಮ ಪಕ್ಷ ಟಿಆರ್‌ಎಸ್‌ ಅನ್ನು ಭಾರಿ ಅಂತರದಲ್ಲಿ ಗೆಲ್ಲಿಸಿದ ತೆಲಂಗಾಣ ರಾಜ್ಯದ ಜನರಿಗೆ ಕೆಸಿಆರ್‌ ಅವರು ಭಾರಿ ಉಡುಗೊರೆಯ ಘೋಷಣೆ ಮಾಡಿದ್ದಾರೆ.

ಗೆದ್ದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ಆರ್ ಅವರು, ತೆಲಂಗಾಣವನ್ನು ಆರೋಗ್ಯವಂತ ತೆಲಂಗಾಣವನ್ನಾಗಿಸಲು ಬಹು ದೊಡ್ಡ ಉಚಿತ ಆರೋಗ್ಯ ಯೋಜನೆಯನ್ನು ಹೊರತರುವುದಾಗಿ ಅವರು ಘೋಷಿಸಿದರು.

ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ ಸಮೀಕ್ಷೆಗಳಿಗೂ ಅಚ್ಚರಿ ಮೂಡಿಸಿದ ತೆಲಂಗಾಣ ಫಲಿತಾಂಶ

ಆ ಯೋಜನೆಯ ಮೂಲಕ ತೆಲಂಗಾಣ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ 'ಆರೋಗ್ಯ ಪ್ರೊಫೈಲ್‌' (ಹೆಲ್ತ್‌ ಪ್ರೊಫೈಲ್‌) ಮಾಡಲಾಗುವುದು ಪ್ರತಿ ವ್ಯಕ್ತಿಯ ಆರೋಗ್ಯದ ಬಗ್ಗೆ ಸರ್ಕಾರವೇ ನಿಗಾ ವಹಿಸುವುದು ಎಂದು ಅವರು ಹೇಳಿದರು.

ದಂತ ವೈದ್ಯರ ವೃಂದ, ಮೂಳೆ ತಜ್ಞರ ವೃಂದ ಹೀಗೆ ಎಲ್ಲ ರೀತಿಯ ತಜ್ಞ ವೈದ್ಯರೂ ಸರ್ಕಾರದ ಆದೇಶದಂತೆ ರಾಜ್ಯದಾದ್ಯಂತ ಸಂಚರಿಸಿ ಎಲ್ಲರ ಪರೀಕ್ಷೆ ಮಾಡಿ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮಾಹಿತಿ ಗುಚ್ಛ ಮಾಡಿ ಜನರ ಆರೋಗ್ಯ ಕಾಳಜಿ ಮಾಡುತ್ತಾರೆ ಎಂದು ಅವರು ಹೇಳಿದರು.

'ಗೆಲುವು ದೊಡ್ಡದು, ಜವಾಬ್ದಾರಿಯೂ ದೊಡ್ಡದು'

'ಗೆಲುವು ದೊಡ್ಡದು, ಜವಾಬ್ದಾರಿಯೂ ದೊಡ್ಡದು'

ಚುನಾವಣಾ ಗೆಲುವಿನ ಬಗ್ಗೆ ಮಾತನಾಡಿದ ಅವರು, ಗೆಲುವು ಎಷ್ಟು ದೊಡ್ಡದಾಗಿ ಇದೆಯೋ ಅಷ್ಟೆ ದೊಡ್ಡ ಜವಾಬ್ದಾರಿಯನ್ನೂ ಸಹ ಗೆಲುವು ನಮ್ಮ ಹೆಗಲ ಮೇಲೆ ಏರಿದೆ ಎಂದ ಅವರು, ಶಾಂತಿಯುತ, ಅಭಿವೃದ್ಧಿಪರ, ಸುಭದ್ರ, ಸ್ವಾಭಿಮಾನಿ ತೆಲಂಗಾಣ ರಾಜ್ಯ ನಿರ್ಮಾಣ ಮಾಡುವ ಕಾರ್ಯವನ್ನು ನಾವು ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.

ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುತ್ತೇವೆ: ಕೆಸಿಆರ್‌

ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುತ್ತೇವೆ: ಕೆಸಿಆರ್‌

ರಾಷ್ಟ್ರ ರಾಜಕಾರಣದಲ್ಲಿ ನಾವು ಅತ್ಯಂತ ಸಕ್ರಿಯವಾಗಿ ಪಾಲ್ಗೊಳ್ಳುತ್ತೇವೆ ಎಂದು ಇದೇ ಸಮಯದಲ್ಲಿ ಹೇಳಿದ ಚಂದ್ರಶೇಖರ ರಾವ್ ಅವರು, ನಾವು ಕೇವಲ ಪ್ರೇಕ್ಷಕರಾಗಿ ಇರುವುದಿಲ್ಲ ಬದಲಿಗೆ ದೇಶದ ರಾಜಕೀಯವನ್ನು ಬದಲಾಯಿಸುವ ಕಾರ್ಯ ಮಾಡುತ್ತೇವೆ. ನಿನ್ನೆ ಒವೈಸಿ ಅವರೊಂದಿಗೆ ಭೇಟಿ ಮಾಡಿದ್ದು ಸಹ ಇದೇ ಕಾರಣಕ್ಕೆ ಎಂದು ಅವರು ಹೇಳಿದರು.

ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ

'ಕಾಂಗ್ರೆಸ್-ಬಿಜೆಪಿ ಹೊರತಾದ ರಾಜ್ಯ ತೆಲಂಗಾಣ'

'ಕಾಂಗ್ರೆಸ್-ಬಿಜೆಪಿ ಹೊರತಾದ ರಾಜ್ಯ ತೆಲಂಗಾಣ'

ತೆಲಂಗಾಣವು ಕಾಂಗ್ರೆಸ್ ಅಥವಾ ಬಿಜೆಪಿ ಹೊರತಾದ ರಾಜ್ಯ. ದೇಶವೂ ಸಹ ಬಿಜೆಪಿ-ಕಾಂಗ್ರೆಸ್ ಹೊರತಾದ ಆಡಳಿತಕ್ಕೆ ದೊರಕಬೇಕು ಎಂದ ಅವರು, ಈ ನಿಟ್ಟಿನಲ್ಲಿ ನಾವು ಟಿಆರ್‌ಎಸ್‌ ಕೆಲಸ ಮಾಡುತ್ತದೆ. ನಾವು ಪಕ್ಷಗಳನ್ನು ಜೋಡಿಸುವುದಿಲ್ಲ. ನಾವು ದೇಶದ ಜನರನ್ನು ಜೋಡಿಸುತ್ತೇವೆ ಎಂದು ಟಿಎಸ್‌ಆರ್ ಆತ್ಮವಿಶ್ವಾಸದಿಂದ ನುಡಿದರು.

ಸೋತವರಿಗೆ ಅವಕಾಶ ಮುಗಿದಿಲ್ಲ: ಕೆಸಿಆರ್

ಸೋತವರಿಗೆ ಅವಕಾಶ ಮುಗಿದಿಲ್ಲ: ಕೆಸಿಆರ್

ನಮ್ಮದೇ ಕೆಲವು ಸ್ವಯಂಕೃತ ಅಪರಾಧಗಳಿಂದ ಗೆಲ್ಲಲೇ ಬೇಕಿದ್ದ ಕೆಲವರು ಸೋತಿದ್ದಾರೆ. ಇಬ್ಬರು ಮಂತ್ರಿಗಳು ಸೋತಿದ್ದಾರೆ. ಒಬ್ಬರು ಸಭಾಧ್ಯಕ್ಷರು ಸೋತಿದ್ದಾರೆ, ಇದಕ್ಕೆ ನಮ್ಮ ಸ್ವಯಂಕೃತ ಅಪರಾಧಗಳೇ ಕಾರಣ. ಆದರೆ ಅವರಿಗೆ ಅವಕಾಶಗಳು ಮುಗಿದಿಲ್ಲ ಎಂದು ಕೆಸಿಆರ್‌ ಭರವಸೆ ನೀಡಿದರು.

1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಟಿಆರ್‌ಎಸ್ ಅಭ್ಯರ್ಥಿ1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಟಿಆರ್‌ಎಸ್ ಅಭ್ಯರ್ಥಿ

ಶಾಂತಿಯುತವಾಗಿ ಮತದಾನ

ಶಾಂತಿಯುತವಾಗಿ ಮತದಾನ

ಒಂದೇ ಒಂದು ಗಲಾಟೆ ಇಲ್ಲದೆ ರಾಜ್ಯದ ಚುನಾವಣೆ ಮುಗಿದಿದೆ. ಎಲ್ಲ ಪಕ್ಷಗಳ ಪ್ರಮುಖ ಮುಖಂಡರು ಇಲ್ಲಿ ಬಂದು ಪ್ರಚಾರ ಮಾಡಿದ್ದಾರೆ. ಎಲ್ಲೂ ಒಂದು ಬೂತ್‌ನಲ್ಲೂ ಸಹ ಮರು ಮತದಾನ ಆಗಿಲ್ಲ. ದೇಶಕ್ಕೆ ಮಾದರಿಯಾಗುವಂತಹಾ ಚುನಾವಣೆ ತೆಲಂಗಾಣದಲ್ಲಿ ಆಗಿದೆ. ಚುನಾವಣಾ ಆಯೋಗಕ್ಕೆ ಧನ್ಯವಾದ ಎಂದು ಅವರು ಹೇಳಿದರು.

ತೆಲಂಗಾಣದಲ್ಲಿ ಬಿಜೆಪಿಯ ಮಾನ ಉಳಿಸಿದ ರಾಜಾ ಸಿಂಗ್‌ತೆಲಂಗಾಣದಲ್ಲಿ ಬಿಜೆಪಿಯ ಮಾನ ಉಳಿಸಿದ ರಾಜಾ ಸಿಂಗ್‌

English summary
K Chandrashekhar Rao thanks Telangana people for believing in him. He also announces a big health scheme for telangana people who made him CM again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X