ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲ್‌ಗಾಗಿ ಡೀಲ್ ಪ್ರಕರಣದಲ್ಲೂ ರೆಡ್ಡಿಗೆ ಜಾಮೀನು

By Kiran B Hegde
|
Google Oneindia Kannada News

ಹೈದರಾಬಾದ್, ಡಿ. 18: ಜೈಲಿನಿಂದ ಹೊರಬರಲು ಜಾಮೀನು ಪಡೆಯಲೆಂದೇ ನ್ಯಾಯಾಧೀಶರೊಂದಿಗೆ ಡೀಲ್ ನಡೆಸಿ ಸಿಕ್ಕಿಬಿದ್ದಿದ್ದ ಪ್ರಕರಣದಲ್ಲಿ ಆರೋಪಿ ಜನಾರ್ದನ ರೆಡ್ಡಿಗೆ ಜಾಮೀನು ದೊರೆತಿದೆ.

reddy

ಏನಿದು ಪ್ರಕರಣ: ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿಗೆ 2012ರ ಮೇ11 ರಂದು ಜಡ್ಜ್ ಪಟ್ಟಾಭಿರಾಮರಾವ್ ಅವರು ಜಾಮೀನು ನೀಡಿದ್ದರು. ಆದರೆ, ಈ ಜಾಮೀನಿನ ಹಿಂದೆ ಜಡ್ಜ್ ಹಾಗೂ ಗಾಲಿ ರೆಡ್ಡಿ ನಡುವೆ ಡೀಲ್ ನಡೆದಿದೆ ಎಂಬುದನ್ನು ಸಿಬಿಐ ಸಾಕ್ಷಿ ಸಮೇತ ಬಹಿರಂಗಪಡಿಸಿತ್ತು. ಆಗ ಪಟ್ಟಾಭಿರಾಮರಾವ್ ಅವರನ್ನು ಅಮಾನತುಗೊಳಿಸಿ ಬಂಧಿಸಲಾಗಿತ್ತು. [ಬೇಲ್ ಗಾಗಿ ಡೀಲ್ : 3ನೇ ಜಡ್ಜ್ ಅಮಾನತು]

ನಂತರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿರುವ ಆರೋಪಿಯಾಗಿರುವ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಡಿ. ಪ್ರಭಾಕರ ರಾವ್‌ ಅವರನ್ನು ಹೈಕೋರ್ಟ್‌ ಅಮಾನತುಗೊಳಿಸಿತ್ತು. ನಂತರ ಸಿಟಿ ಸಿವಿಲ್ ತ್ವರಿತಗತಿ ಕೋರ್ಟ್ ನ್ಯಾ. ಲಕ್ಷ್ಮಿನರಸಿಂಹರಾವ್ ಅವರನ್ನು ಅಮಾನತುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಹೊರಡಿಸಿತ್ತು. [ಬೆಂಗಳೂರು ಮನೆ ಕಳೆದುಕೊಂಡ ರೆಡ್ಡಿ]

ಇನ್ನೊಂದೇ ಪ್ರಕರಣ ಬಾಕಿ : ಆದರೆ, ಬಿಡುಗಡೆಗಾಗಿ ಜನಾರ್ದನ ರೆಡ್ಡಿ ಇನ್ನೂ ಕಾಯಬೇಕಾಗಿದೆ. ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿಯೂ ಜಾಮೀನು ಸಿಕ್ಕರೆ ಜನಾರ್ದನ ರೆಡ್ಡಿ ಜೈಲಿನಿಂದ ಹೊರಬರಲು ಸಾಧ್ಯವಿದೆ. [ರೆಡ್ಡಿ 650 ಕೋಟಿ ಆಸ್ತಿಗೆ ಕಂಟಕ]

English summary
Janardhana Reddy gets bail in Deal for Bail case from Hyderabad high court on Thursday. But still he must get the bail in one more case which is in supreme court to come out from jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X