ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಗೆ ಇವಾಂಕಾ ಟ್ರಂಪ್ ಪತ್ರ

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 19: ತಾವು ಹೈದರಾಬಾದಿಗೆ ಬಂದಿದ್ದಾಗ ತಮಗೆ ತೋರಿದ ಆತ್ಮೀಯ ಆತಿಥ್ಯವನ್ನು ಕೊಂಡಾಡಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಪತ್ರ ಬರೆದಿದ್ದಾರೆ.

ಮುತ್ತಿನ ನಗರಿಯ ಮತ್ತೇರಿಸಿದ ಚೆಲುವೆ ಇವಾಂಕಾ ಟ್ರಂಪ್!

"ಪ್ರೀತಿಯ ಮುಖ್ಯಮಂತ್ರಿ ರಾವ್ ಅವರೇ, ನಾವು ಜಾಗತಿಕ ಉದ್ದಿಮೆದಾರರ ಸಮಾವೇಶಕ್ಕೆಂದು ಹೈದರಾಬಾದಿಗೆ ಬಂದಿದ್ದಾಗ ನೀವು ನೀಡಿದ ಆತ್ಮೀಯ ಆಹ್ವಾನಕ್ಕೆ ನಾನು ಆಭಾರಿಯಾಗಿದ್ದೇನೆ. ಹೈದರಾಬಾದ್ ಭೇಟಿ ನನಗೆ ಅತ್ಯಮೂಲ್ಯ ಅನುಭವ. ಅಷ್ಟೇ ಅಲ್ಲ, ಭೇಟಿಯ ಸಮಯದಲ್ಲಿ ನೀವು ನನಗೆ ನೀಡಿದ ಸುಂದರ ಉಡುಗೊರೆಗಾಗಿ ನನ್ನ ಅನಂತ ಧನ್ಯವಾದಗಳು. ನಿಮ್ಮ ಈ ಸೌಜನ್ಯದ ನಡೆಯಿಂದ ನನಗೆ ಬಹಳ ಸಂತಸವಾಯಿತು. ಮತ್ತು ತೆಲಂಗಾಣದ ಜನರ ಪ್ರೀತಿ ವಿಶಸ್ವಾಸಕ್ಕೂ ನಾನು ಋಣಿ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಯಾರು ಈ ಚೆಂದುಳ್ಳಿ ಚೆಲುವೆ ಇವಾಂಕಾ ಟ್ರಂಪ್..?

Ivanka Trump writes a letter to Hyderabad CM KC Rao

ಕಳೆದ ನವೆಂಬರ್ 28 ರಿಂದ ನಡೆದ ಮೂರು ದಿನಗಳ ಜಾಗತಿಕ ಉದ್ಯಮಶೀಲ ಸಮಾವೇಶಕ್ಕಾಗಿ ಭಾರತಕ್ಕೆ ಆಗಮಿಸಿದ್ದ, ಅಮೆರಿಕ ಅಧ್ಯಕ್ಷರ ಹಿರಿಯ ಸಲಹಾಗಾರ್ತಿಯೂ ಆಗಿರುವ ಇವಾಂಕಾ, ಭಾರತೀಯರು ನೀಡಿದ್ದ ಆಪ್ತ ಆತಿಥ್ಯವನ್ನು ಮೆಚ್ಚಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ivanka Trump pens down letter to Telangana Chief Minister K Chandrashekhar Rao, thanks him for his warm hospitality during her Hyderabad visit last month

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ