ಇಸ್ರೋ ವಿಜ್ಞಾನಿಯನ್ನು ಕೊಂದಿದ್ದೇಕೆ? ಸತ್ಯ ಬಾಯ್ಬಿಟ್ಟ ಸಲಿಂಗಕಾಮಿ

ಹೈದರಾಬಾದ್, ಅಕ್ಟೋಬರ್ 05: ಹೈದರಾಬಾದಿನಲ್ಲಿ ನಡೆದ ಇಸ್ರೋ ವಿಜ್ಞಾನಿಯ ನಿಗೂಢ ಹತ್ಯೆ ಪ್ರಕರಣವನ್ನು ವಾರದೊಳಗೆ ಪೊಲೀಸರು ಭೇದಿಸಿದ್ದು, ಹಣಕಾಸಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯವೇ ಹತ್ಯೆಗೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.

ಅಕ್ಟೋಬರ್ 1 ರಂದು ಮಂಗಳವಾರ ರಾತ್ರಿ ಇಸ್ರೋ ವಿಜ್ಞಾನಿ ಸುರೇಶ್ ಕುಮಾರ್ ಅವರ ಹೈದರಾಬಾದಿನಲ್ಲಿ ಶವ ಅವರಿದ್ದ ಅಪಾರ್ಟ್ಮೆಂಟಿನಲ್ಲಿ ಪತ್ತೆಯಾಗಿತ್ತು.

ಲ್ಯಾಬ್ ಟೆಕ್ನಿಶಿಯನ್ ಶ್ರೀನಿವಾಸನ್ ಮತ್ತು ಸುರೇಶ್ ಕುಮಾರ್ ಅವರ ನಡುವೆ ಇದ್ದ ಸಲಿಂಗಕಾಮದ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಶ್ರೀನಿವಾಸ್ ಅವರ ಮೇಲೆ ಪೊಲೀಸರು ಅನುಮಾನ ಪಟ್ಟಿದ್ದರು. ಇದೀಗ ಅವರಿಬ್ಬರ ನಡುವೆ ನಡೆದ ಹಣಕಾಸಿಗೆ ಸಂಬಂಧಿಸಿದ ವೈಮನಸ್ಯವೇ ಈ ಕೊಲೆಗೆ ಕಾರಣ ಎಂಬುದು ದೃಢವಾಗಿದೆ.

ಕಾರಣ ಬಿಚ್ಚಿಟ್ಟ ಲ್ಯಾಬ್ ಟೆಕ್ನಿಶಿಯನ್

ಕಾರಣ ಬಿಚ್ಚಿಟ್ಟ ಲ್ಯಾಬ್ ಟೆಕ್ನಿಶಿಯನ್

39 ವರ್ಷ ವಯಸ್ಸಿನ ಲ್ಯಾಬ್ ಟೆಕ್ನೀಶಿಯನ್ ಶ್ರೀನಿವಾಸ್, 56 ವರ್ಷ ವಯಸ್ಸಿನ ಸುರೇಶ್ ಕುಮಾರ್ ಅವರೊಂದಿಗೆ ಸಲಿಂಗ ಸಂಬಮಧ ಹೊಂದಿದ್ದರು. ಅದಕ್ಕಾಗಿ ಅವರು ಹಣವನ್ನೂ ಪಡೆಯುತ್ತಿದ್ದರು. ಸೋಮವಾರ ರಾತ್ರಿ ಸುರೇಶ್ ಕುಮಾರ್ ಮತ್ತು ಶ್ರೀನಿವಾಸ್ ನಡುವೆ ಈ ಹಣದ ಬಗ್ಗೆಯೇ ಮಾತುಕತೆ ನಡೆದಿದೆ. ಮಂಗಳವಾರ ನಸುಕಿನವರೆಗೂ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದಕ್ಕೂ ಮುನ್ನವೂ ಹಣಕಾಸಿಗೆ ಸಂಬಂಧಿಸಿದಂತೆ ಇವರ ನಡುವೆ ಹಲವು ಭಾರಿ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಶ್ರೀನಿವಾಸ್ ಸುರೇಶ್ ಕುಮಾರ್ ಅವರನ್ನು ಕೊಲ್ಲಲು ಮೊದಲೇ ನಿರ್ಧರಿಸಿ, ತನ್ನೊಂದಿಗೆ ಚಾಕುವನ್ನೂ ತಂದಿದ್ದ. ಜಗಳ ವಿಪರೀತಕ್ಕೆ ತಿರುಗಿದ ನಂತರ ಚಾಕುವಿನಿಂದ ಸುರೇಶ್ ಕುಮಾರ್ ತಲೆಗೆ ಗಾಯಮಾಡಿದ್ದು, ಇದರಿಂದ ಸುರೇಶ್ ಕುಮಾರ್ ಮೃತರಾಗಿದ್ದರು.

ಪತ್ನಿಗೆ ಅನುಮಾನ

ಪತ್ನಿಗೆ ಅನುಮಾನ

ಸುರೇಶ್ ಕುಮಾರ್ ಅವರ ಪತ್ನಿ ಇಂದಿರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರಿಂದ ಚೆನ್ನೈಯಲ್ಲಿ ವಾಸವಿದ್ದರು. ಮಂಗಳವಾರ ಬೆಳಿಗ್ಗೆಯಿಂದ ನಿರಂತರವಾಗಿ ಸುರೇಶ್ ಅವರಿಗೆ ಇಂದಿರಾ ಫೋನಾಯಿಸಿದ್ದಾರೆ. ಆದರೆ ಪತಿ ಫೋನ್ ರೀಸೀವ್ ಮಾಡದೆ ಇರುವುದರಿಂದ ಅನುಮಾನಗೊಂಡು ಅಪಾರ್ಟ್ಮೆಂಟಿನಲ್ಲಿಯೇ ಇದ್ದ ಇನ್ನೊಬ್ಬ ಪರಿಚಯಸ್ಥರಿಗೆ ಫೋನ್ ಮಾಡಿ, ಮನೆಗೆ ತೆರಳಿ ವಿಚಾರಿಸುವಂತೆ ಹೇಳಿದ್ದಾರೆ. ಅವರು ಸುರೇಶ್ ಅವರ ಮನೆಗೆ ತೆರಳಿ ಎಷ್ಟು ಬಾರಿ ಬಾಗಿಲು ಟ್ಟಿದರೂ ಸುರೇಶ್ ಅವರು ಬಾಗಿಲು ತೆರೆದಿಲ್ಲ. ಅದನ್ನೇ ಪರಿಚಯಸ್ಥರು ಇಂದಿರಾ ಅವರಿಗೆ ಹೇಳಿದ್ದಾರೆ. ಆತಂಕಗೊಂಡ ಇಂದಿರಾ ಕೂಡಲೇ ಚೆನ್ನೈಯಿಂದ ಹೊರಟು ಹೈದರಾಬಾದಿನ ಅಪಾರ್ಟ್ಮೆಂಟಿಗೆ ಬಂದಿದ್ದಾರೆ. ನಂತರ ಪೊಲೀಸರ ಸಹಾಯದ ಮೇರೆಗೆ ಮನೆಯ ಬಾಗಿಲನ್ನು ಒಡೆದು ತೆಗೆದಾಗ ಸುರೇಶ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸಿದೆ.

ಆರೋಪಿ ಪತ್ತೆಗೆ ನೆರವಾದ ವಾಚ್ಮನ್ ಹೇಳಿಕೆ

ಆರೋಪಿ ಪತ್ತೆಗೆ ನೆರವಾದ ವಾಚ್ಮನ್ ಹೇಳಿಕೆ

ಪೋಸ್ಟ್ ಮಾರ್ಟಮ್ ವರದಿಯಲ್ಲಿ ಸುರೇಶ್ ಕುಮಾರ್ ತಲೆಗೆ ಬಲವಾದ ಏಟು ಬಿದ್ದಿರುವುದು ತಿಳಿದುಬಂದಿದ್ದರಿಂದ ಅದು ಕೊಲೆ ಎಂದು ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಾರ್ಟ್ಮೆಂಟಿನ ಸಿಸಿಟಿವಿ ಕ್ಯಾಮರಾ ವಶಪಡಿಸಿಕೊಂಡು ವಾಚ್ಮನ್ ಅನ್ನೂ ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಸುರೇಶ್ ಕುಮಾರ್ ಅವರನ್ನು ನೋಡಲು ಕಳೆದ ಎರಡು ತಿಂಗಳಿನಿಂದ ವ್ಯಕ್ತಿಯೊಬ್ಬರು ಬರುತ್ತಿದ್ದರು. ಸೋಮವಾರವೂ ಅವರು ಬಂದಿದ್ದರು, ರಾತ್ರಿ ತಡವಾಗಿ ಹೊರಟರು ಎಂಬ ವಿಷಯವನ್ನು ವಾಚ್ಮನ್ ತಿಳಿಸಿದ್ದರು. ಈ ಹೇಳಿಕೆಯನ್ನೇ ಆಧರಿಸಿಕೊಂಡು ಶ್ರೀನಿವಾಸ್ ನೇ ಆವತ್ತು ಸುರೇಶ್ ಮನೆಗೆ ಬಂದಿದ್ದು ಎಂಬುದನ್ನು ಪೊಲೀಸರು ಸುಲಭವಾಗಿ ಪತ್ತೆ ಮಾಡಿದ್ದರು. ಸಿಸಿಟಿವಿ ಕ್ಯಾಮರಾ ಫೂಟೇಜ್ ಅವರ ನೆರವಿಗೆ ಬಂದಿತ್ತು.

ನಾಪತ್ತೆಯಾಗಿದ್ದ ಶ್ರೀನಿವಾಸ್

ನಾಪತ್ತೆಯಾಗಿದ್ದ ಶ್ರೀನಿವಾಸ್

ಕೊಲೆ ಮಾಡಿದ ನಂತರ ನಾಪತ್ತೆಯಾಗಿದ್ದ ಸುರೇಶ್ ಕುಮಾರ್ ನನ್ನು ಹಿಡಿಯಲು ಪೊಲೀಸರು ನಾಲ್ಕು ಅಧಿಕಾರಿಗಳ ತಂಡವನ್ನು ರಚಿಸಿದ್ದರು. ನಂತರ ಶುಕ್ರವಾರ ಶ್ರೀನಿವಾಸ್ ನನ್ನು ಪೊಲೀಸರು ಬಂಧಿಸಿದ್ದರು. ಹಣಕಾಸಿನ ವಿಷಯವೇ ತಾನು ಈ ಕೆಲಸ ಮಾಡುವುದಕ್ಕೆ ಕಾರಣ ಎಂದು ಆತನೇ ಒಪ್ಪಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+