ಒಂದೇ ಬಾರಿಗೆ 103 ಉಪಗ್ರಹ ಉಡಾವಣೆನಾ ! ಇಸ್ರೋಗೆ ಜೈ!

Posted By:
Subscribe to Oneindia Kannada

ತಿರುಪತಿ, ಜನವರಿ 5: ಪಿಎಸ್ ಎಲ್ ವಿ ಉಡಾವಣಾ ವಾಹನದ ಮೂಲಕ ಒಂದೇ ಬಾರಿಗೆ 103 ಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಲಿಕ್ವಡ್ ಪ್ರೋಪಲ್ಶನ್ ಎಂಜಿನ್ ವಿಭಾಗದ ನಿರ್ದೇಶಕ ತಿಳಿಸಿದ್ದಾರೆ.

ಒಂದೇ ಬಾರಿಗೆ ನೂರಕ್ಕಿಂತ ಹೆಚ್ಚು ಉಪಗ್ರಹ ಉಡಾವಣೆಯಾಗಲಿದೆ ಅವುಗಳಲ್ಲಿ ಹೆಚ್ಚಿನವು ಅಮೆರಿಕ, ಜರ್ಮನಿ, ಇಸ್ತ್ರೇಲ್, ಸ್ವಿಡ್ಜರ್ಲೆಂಡ್ ಮತ್ತು ನೆದರ್ಲಂಡ್ ನವು ಅದರೊಂದಿಗೆ ಭಾರತೀಯ ಉಪಗ್ರಹಗಳೂ ಉಡಾವಣೆಯಾಗಲಿವೆ ಎಂದು 104ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಸೋಮನಾಥ್ ತಿಳಿಸಿದರು.[ಇಸ್ರೋದಿಂದ ಜಿಎಸ್‌ಎಲ್‌ವಿಎಂ-3 ರಾಕೆಟ್‌ ಉಡಾವಣೆ]

Isro has been launched 103 satellite in february

ಈ ಉಡಾವಣೆಯಲ್ಲಿ ಭಾರತದ ಕಾರ್ಟೋಸ್ಯಾಟ್ 2ಡಿ, ಐಎನ್ ಎಸ್‌-1ಎ ಮತ್ತು ಐಎನ್ ಎಸ್ -1ಬಿ ಉಪಗ್ರಹಗಳು ಉಡಾವಣೆಯಾಗಲಿವೆ. ಇಸ್ರೋ ಈ ವರೆಗೆ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಇದರ ನಂತರ ದೊಡ್ಡ ಪ್ರಮಾಣದಲ್ಲಿ ಉಪಗ್ರಹಗಳ ಉಡಾವಣೆ ಮಾಡುತ್ತಿರುವುದು ವಿಶ್ವದ ಗಮನ ಸೆಳೆದಿದೆ.[ಶ್ರೀಹರಿಕೋಟ :ಭಾರತದ ಮಂಗಳಯಾನ ಯಶಸ್ವಿ]

ಗುರು,ಶುಕ್ತ ಯಾನಕ್ಕೂ ಇಸ್ರೋ ಚಿಂತನೆ:
2018 ರಲ್ಲಿ ಚಂದ್ರಯಾನ-2 ಮತ್ತು ಸೂರ್ಯನನ್ನು ಅಧ್ಯಯನ ಮಾಡಲು 2019ರಲ್ಲಿ ಆದಿತ್ಯಾ-ಎಲ್‌1 ಎಂಬ ಉಪಗ್ರಹ ಉಡಾವಣೆಗೆ ಇಸ್ರೋ ಮನಸ್ಸು ಮಾಡಿದ್ದು, ಮಂಗಳಯಾನ (ಮಾಮ್) ನಂತರ ಶುಕ್ರ ಮತ್ತು ಗುರು ಗ್ರಹಗಳಿಗೆ ಉಪಗ್ರಹ ಉಡಾವಣೆ ಮಾಡಲು ಇಸ್ರೊ ಚಿಂತನೆ ನಡೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Isro will launch a record 103 satellites in one go using its workhorse PSLV-C37 in the first week of February. The launch will be a major feat in country's space history as no exercise on this scale has been attempted before.
Please Wait while comments are loading...