• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

600 ಹುಡುಗಿಯರ ಅರೆಬೆತ್ತಲೆ ಫೋಟೊ ಸಂಗ್ರಹಿಸಿ ಬ್ಲಾಕ್ ಮೇಲ್; ಕೊನೆಗೂ ಸಿಕ್ಕಿಬಿದ್ದ ಟೆಕ್ಕಿ

By ಪ್ರತಿನಿಧಿ
|

ಹೈದರಾಬಾದ್, ಆಗಸ್ಟ್ 24: ಕೆಲಸ ಕೊಡಿಸುತ್ತೇನೆಂದು ನೆಪ ಹೇಳಿ ಹುಡುಗಿಯರ ಅರೆಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಟೆಕ್ಕಿಯೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸೈಬೆರಾಬಾದ್ ಪೊಲೀಸರು, ಸ್ಥಳೀಯ ಯುವತಿಯೊಬ್ಬರು ನೀಡಿದ ದೂರಿನ ಮೇರೆಗೆ ಚೆನ್ನೈನಲ್ಲಿ ಪ್ರದೀಪ್ (33) ಎಂಬಾತನನ್ನು ಬಂಧಿಸಿದ್ದಾರೆ. ಈತ ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಸುಮಾರು 600 ಯುವತಿಯರಿಗೆ ಕೆಲಸ ಕೊಡಿಸುತ್ತೇನೆ ಎಂದು ಮೋಸ ಮಾಡಿರುವುದಾಗಿ ತಿಳಿದುಬಂದಿದೆ.

ಪಬ್ಜಿಯಿಂದ ಆರಂಭವಾದ ಪ್ರೇಮ, ಬ್ಲಾಕ್‌ಮೇಲ್, ಬಂಧನ

ಚೆನ್ನೈನ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಪ್ರದೀಪ್, ತಾನು ಫೈವ್ ಸ್ಟಾರ್ ಹೋಟೆಲೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಎಂದು ಹೇಳಿಕೊಂಡು, ಸುಂದರ ಹುಡುಗಿಯರನ್ನು ನೇಮಕ ಮಾಡಿಕೊಳ್ಳುವಂತೆ ಕಂಪನಿ ಸೂಚಿಸಿದೆ ಎಂದು ಕರೆ ಮಾಡಿ ಯುವತಿಯರ ಸಂದರ್ಶನ ಮಾಡುತ್ತಿದ್ದ. ಆ ಹುಡುಗಿಯರು ಈತನ ಮಾತನ್ನು ನಂಬುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ, ನಮ್ಮ ಕಂಪನಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಹೀಗಾಗಿ ನಿಮ್ಮ ವಿವಿಧ ಭಂಗಿಗಳ, ದೇಹದ ಸಂಪೂರ್ಣ ವಿಡಿಯೋ ಕಳುಹಿಸಿ ಎಂದು ಕೇಳುತ್ತಿದ್ದ. ಬಳಿಕ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಬಟ್ಟೆ ತೆಗೆಯುವಂತೆ ಹೇಳುತ್ತಿದ್ದ. ಹುಡುಗಿಯರು ಬಟ್ಟೆ ತೆಗೆಯುವುದನ್ನು ಸಾಫ್ಟ್ ವೇರ್ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.

ನಂತರ ಆ ಫೋಟೊಗಳನ್ನು ಇಟ್ಟುಕೊಂಡು ಹುಡುಗಿಯರಿಗೆ ಕಾಲ್ ಮಾಡಿ ಬ್ಲಾಕ್ ಮೇಲೆ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಮದುವೆಯಾಗಿದ್ದ ಪ್ರದೀಪ್, ಹೆಂಡತಿ ಕೆಲಸಕ್ಕೆ ಹೋಗುತ್ತಿದ್ದಂತೆ, ಕ್ಲಾಸಿಫೈಡ್ ಪೋರ್ಟಲ್ ಒಂದರಲ್ಲಿ ಪ್ರಕಟಗೊಳ್ಳುತ್ತಿದ್ದ ಯುವತಿಯರ ಫೋನ್ ನಂಬರ್ ಗಳನ್ನು ಪಡೆದು ಅವರಿಗೆ ಕರೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಮೊಬೈಲನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದ ವಿಚಾರವನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ವಂಚನೆಗೆ ಒಳಗಾದ ಯುವತಿಯರಿಂದ ಲಕ್ಷಗಟ್ಟಲೆ ಹಣ ತೆಗೆದುಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ.

English summary
Techie,who was blackmailing by colloecting nude photes of girls now arrested by cyberabad police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X