• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳ ಬಗ್ಗೆ ಹೊರಬಿತ್ತು ಸ್ಫೋಟಕ ಮಾಹಿತಿ

|

ಹೈದರಾಬಾದ್, ಡಿಸೆಂಬರ್ 19: ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಹಂತಕರು ಕರ್ನಾಟಕದಲ್ಲೂ ಆರು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನುವ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ನವೆಂಬರ್ 27ರಂದು ಹೈದರಾಬಾದಿನಲ್ಲಿ ನಡೆದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಇನ್ನೂ 9 ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರು.

ಹೈದರಾಬಾದ್ ನಲ್ಲಿ ರೇಪಿಸ್ಟ್ ಗಳ ಎನ್ಕೌಂಟರ್: ಕಾಡುವ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ?

ಈ 9 ಪ್ರಕರಣಗಳಲ್ಲಿ ಆರು ಪ್ರಕರಣಗಳು ತೆಲಂಗಾಣ ಗಡಿಗೆ ಹೊಂದಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ನಡೆದಿತ್ತು ಎಂಬ ಮಾಹಿತಿ ದೊರೆತಿದೆ.

ಒಮ್ಮೆ ನಾಲ್ವರು ಆಪಾದಿತರನ್ನು ಕಸ್ಟಡಿಗೆ ತೆಗೆದುಕೊಂಡು ನಂತರ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಕೊಲೆ ರೀತಯಲ್ಲೇ ನಡೆದ 15 ಕೃತ್ಯಗಳ ಬಗ್ಗೆ ವಿಚಾರಣೆ ನಡೆಸಿದವು.

ಹೈದರಾಬಾದ್ ಎನ್ಕೌಂಟರ್, ಪೊಲೀಸ್ ಕ್ರಮ ಖಂಡಿಸಿದ ಕಾರ್ಯಕರ್ತೆ

ಆಗ ಆರಿಫ್ ಹಾಗೂ ಚೆನ್ನಕೇಶವುಲು, ತಾವು 9 ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದರು. ಪಶುವೈದ್ಯೆ ರೀತಿಯಲ್ಲೇ 9 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅವರನ್ನು ಸುಟ್ಟುಹಾಕಿದ್ದರು.

ನಾಲ್ವರು ಆರೋಪಿಗಳ ಎನ್‌ಕೌಂಟರ್

ನಾಲ್ವರು ಆರೋಪಿಗಳ ಎನ್‌ಕೌಂಟರ್

ನಾಲ್ವರು ದುರುಳರನ್ನು ಪೊಲೀಸರು ಎನ್‌ ಕೌಂಟರ್‌ನಲ್ಲಿ ಸಾಯಿಸಿದ್ದರು. ಅದಕ್ಕೂ ಮುನ್ನ ಅವರನ್ನು ವಿಚಾರಣೆಗ ಒಳಪಡಿಸಿದ ವೇಳೆ, ಆರೋಪಿಗಳಾದ ಲಾರಿ ಚಾಲಕ ಮೊಹಮ್ಮದ್ ಆರಿಫ್(26) ಹಾಗೂ ಚಿಂತಕುಂಟ್ಲ ಚೆನ್ನಕೇಶವುಲು(20) ತಾವು ಇನ್ನೂ 9 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದರು.

ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಕೃತ್ಯ

ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಕೃತ್ಯ

ಇನ್ನೂ ಬೆಚ್ಚಿಬೀಳಿಸುವ ಅಂಶವೇನೆಂದರೆ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಇವರು ಈ ಕೃತ್ಯ ಎಸಗಿದ್ದರು. ಮೂರು ಕೃತ್ಯಗಳನ್ನು ತೆಲಂಗಾಣದ ರಂಗಾರೆಡ್ಡಿ, ಸಂಗಾರೆಡ್ಡಿ ಹಾಗೂ ಮೆಹಬೂಬನಗರ ಜಿಲ್ಲೆಗಳ ಹೆದ್ದಾರಿಗಳಲ್ಲಿ ಎಸಗಿದ್ದರೆ , ಇನ್ನಾರು ಕೃತ್ಯಗಳನ್ನು ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಎಸಗಿದ್ದರು. ಈ ಹಿನ್ನೆಲೆಯಲ್ಲಿ ಕೃತ್ಯಗಳ ಮಾಹಿತಿ ಸಂಗ್ರಹಿಸಲು ಹೈದರಾಬಾದ್ ಬಳಿಯ ಸೈಬರಾಬಾದ್ ಪೊಲೀಸರು ಕರ್ನಾಟಕಕ್ಕೆ ಆಗಮಿಸಿದ್ದು, ರಾಯಚೂರು, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಪಶುವೈದ್ಯೆ ಅತ್ಯಾಚಾರ ಮಾಡುವಾಗ ಗಂಗಾವತಿಗೆ ಹೊರಟಿದ್ದರು

ಪಶುವೈದ್ಯೆ ಅತ್ಯಾಚಾರ ಮಾಡುವಾಗ ಗಂಗಾವತಿಗೆ ಹೊರಟಿದ್ದರು

ಪಶುವೈದ್ಯೆ ಮೇಲೆ ನವೆಂಬರ್ 27ರಂದು ಅತ್ಯಾಚಾರವೆಸಗಿ ಕೊಲೆ ಮಾಡುವ ವೇಳೆ ನಾಲ್ವರು ಆರೋಪಿಗಳು ತಮ್ಮ ಲಾರಿಯಲ್ಲಿ ಇಟ್ಟಿಗೆಯನ್ನು ಹೇರಿಕೊಂಡು ಹೈದರಾಬಾದ್‌ನಿಂದ ಕರ್ನಾಟಕದ ಕೊಪ್ಪಳ ಜಿಲ್ಲೆ ಗಂಗಾವತಿಗೆ ಹೊರಟಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಹೈದರಾಬಾದ್ ಅತ್ಯಾಚಾರಿಗಳ ಎನ್‌ಕೌಂಟರ್

ಹೈದರಾಬಾದ್ ಅತ್ಯಾಚಾರಿಗಳ ಎನ್‌ಕೌಂಟರ್

ಹೈದರಾಬಾದ್ ಹೊರವಲಯದ ಶಂಶಾಬಾದ್‌ನಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸ್ಥಳಪರಿಶೀಲನೆಗೆಂದು ಶುಕ್ರವಾರ ಬೆಳಗಿನ ಜಾವ ಕರೆದುಕೊಂಡು ಹೋದ ಸಂದರ್ಭದಲ್ಲಿ ಆರೋಪಿಗಳು ಪೊಲೀಸ್‌ರ ಮೆಲೆ ಹಲ್ಲೆ ನಡೆಸಿ ಪರಾರಿಯಾಗುವ ಹಂತದಲ್ಲಿ ಪೊಲೀಸ್‌ರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾರೆ.

English summary
Two suspects in the recent gang rape and murder of a Hyderabad woman veterinarian,confessed to nine similar crimes while in police custody, Telangana Police sources with knowledge of the investigation said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X