ಶಿಕ್ಷಕಿಯನ್ನು ಚುಡಾಯಿಸಿದ ಸಚಿವರ ಮಗ ಪೊಲೀಸರ ವಶಕ್ಕೆ

Posted By:
Subscribe to Oneindia Kannada

ಹೈದರಾಬಾದ್, ಮಾ. 06: ಆಂಧ್ರ ಪ್ರದೇಶದ ಸಮಾಜ ಕಲ್ಯಾಣ ಇಲಾಖೆ ಸಚಿವ ರವೆಲ ಕಿಶೋರ್ ಬಾಬು ಅವರ ಮಗ ಸುಶೀಲ್ ಕುಮಾರ್ ಮತ್ತು ಆತನ ಕಾರು ಚಾಲಕ ರಮೇಶ್ ಎಂಬುವವರನ್ನು ಭಾನುವಾರ ಬೆಳಗ್ಗೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಶಾಲಾ ಶಿಕ್ಷಕಿಯೊಬ್ಬರನ್ನು ಚುಡಾಯಿಸಿದ ಆರೋಪದ ಮೇಲೆ ಇವರಿಬ್ಬರ ಮೇಲೆ ಬಂಜಾರ್ ಹಿಲ್ಸ್ ಠಾಣೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. [ಪತ್ನಿ ಪೀಡನೆ, ಜನಪ್ರಿಯ ನಟ ಬಂಧನ, ಬಿಡುಗಡೆ]

Hyderabad Police arrest AP Minister Ravel Kishore's Son Susheel on Sunday Morning. AP minister Ravela Kishore Babu’s son Ravela Susheel and his car driver Appa Rao allegedly molested a teacher of a private school in Banjara Hills area on Friday.

ಭಾನುವಾರ ಬೆಳಗ್ಗೆ ಆರೋಪಿಗಳಿಬ್ಬರು ಠಾಣೆಗೆ ಖುದ್ದು ಬಂದು ಶರಣಾಗತರಾಗಿದ್ದಾರೆ. ಇಬ್ಬರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಸಚಿವರ ಮಗ ಸುಶೀಲ್ ಅವರು ಬಂಜಾರ ಹಿಲ್ಸ್ ಬಳಿ ತೆರಳುತ್ತಿದ್ದ ಶಿಕ್ಷಕಿಯೊಬ್ಬರನ್ನು ಚುಡಾಯಿಸಿದ್ದಾರೆ. ಸುಮಾರು 1 ಕಿ.ಮೀ ದೂರದ ತನಕ ಆಕೆಯನ್ನು ಹಿಂಬಾಲಿಸಿ ರೇಗಿಸಿದ್ದಾರೆ. ಕೊನೆಗೆ ಆಕೆಯನ್ನು ಕಾರಿನೊಳಗೆ ಹಾಕಿಕೊಳ್ಳಲು ಯತ್ನಿಸಿದ್ದಾರೆ. ಎಚ್ಚೆತ್ತುಕೊಂಡ ಶಿಕ್ಷಕಿ ಆಲ್ಲಿಂದ ಪರಾರಿಯಾಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

Hyderabad Police arrest AP Minister Ravel Kishore's Son Susheel on Sunday Morning. AP minister Ravela Kishore Babu’s son Ravela Susheel and his car driver Appa Rao allegedly molested a teacher of a private school in Banjara Hills area on Friday.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಘಟನೆಯ ಬಗ್ಗೆ ವಿವರ ಕಲೆಹಾಕಿದ ಬಳಿಕ ಸುಶೀಲ್ ಹಾಗೂ ರಮೇಶ್ ಅಲಿಯಾಸ್ ಅಪ್ಪ ರಾವ್ ಅವರನ್ನು ಬಂಧಿಸಲು ಮುಂದಾಗಿದ್ದಾರೆ. ಸೆಕ್ಷನ್ 354 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿತ್ತು. ಭಾನುವಾರ ಠಾಣೆಗೆ ಬಂದ 24 ವರ್ಷ ವಯಸ್ಸಿನ ಸುಶೀಲ್, ಪೊಲೀಸರ ಮುಂದೆ ಶರಣಾಗತರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hyderabad Police arrest AP Minister Ravel Kishore's Son Susheel on Sunday Morning. AP minister Ravela Kishore Babu’s son Ravela Susheel and his car driver Appa Rao allegedly molested a teacher of a private school in Banjara Hills area on Friday.
Please Wait while comments are loading...