ಹೈದರಾಬಾದ್: ಬಿಸಿ ತವಾದ ಮೇಲೆ ಹೆತ್ತ ಮಗಳನ್ನು ಕೂರಿಸಿದ ನಿರ್ದಯಿ ತಾಯಿ!

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 04: ನಾಲ್ಕು ವರ್ಷದ ಮಗಳನ್ನು ಉರಿಯುತ್ತಿದ್ದ ಒಲೆಯ ಮೇಲಿದ್ದ ಬಿಸಿ ಬಿಸಿ ತವಾದ ಮೇಲೆ ಕೂರುವಂತೆ ಸ್ವಂತ ತಾಯಿಯೇ ಬಲವಂತಪಡಿಸಿ, ನಂತರ ಮಗುವನ್ನು ತವಾದ ಮೇಲೆ ಒತ್ತಾಯಪೂರ್ವಕವಾಗಿ ಕೂರಿಸಿದ ವಿಕೃತ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಹಾಲು ಕುಡಿಯದ 3 ವರ್ಷದ ಮಗುವನ್ನು ಮನೆಯಿಂದ ಹೊರಹಾಕಿದ ತಂದೆ!

ಮನೆಗೆಲಸ ಮಾಡುತ್ತಿದ್ದ ಲಲಿತಾ ಎಂಬ ಇಬ್ಬರು ಮಕ್ಕಳ ತಾಯಿ, ತನ್ನ ಪತಿಯಿಂದ ದೂರವಾಗಿ, ನಂತರ ಪ್ರಕಾಶ್ ಎಂಬ ಬೇರೊಬ್ಬ ಪುರುಷನೊಂದಿಗೆ ಸಂಸಾರ ನಡೆಸುತ್ತಿದ್ದಳು. ಆತ ಅಪಾರ್ಟ್ ಮೆಂಟ್ ವೊಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಅವರಿಗೆ ಮತ್ತೊಬ್ಬ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗುವನ್ನು ಕಂಡರೆ ಪ್ರಕಾಶ್ ಗೆ ಸಿಟ್ಟು. ಇದರಿಂದ ಬೇಸತ್ತು ಹೋಗಿದ್ದ ಲಲಿತಾ, ಸದಾ ಆ ಮಗುವಿಗೆ ಹಿಂಸೆ ನೀಡುತ್ತಿದ್ದಳು.

Hyderabad: Mother forces her 4-year-old daughter to sit on hot frying Pan!

ಇತ್ತೀಚೆಗೆ ಮಗು ಅಪಾರ್ಟ್ ಮೆಂಟಿನ ಪರಿಚಿತರೊಬ್ಬರ ಲ್ಯಾಪ್ ಟಾಪ್ ಅನ್ನು ಕೆಡಗಿ ಹಾಳುಮಾಡಿತ್ತು. ಆ ಲ್ಯಾಪ್ ಟಾಪ್ ಮಾಲೀಕರು ಲಲಿತಾ ಅವರಿಗೆ ಹಣ ನೀಡುವಂತೆ ಪೀಡಿಸುತ್ತಿದ್ದರು. ಇದರಿಂದ ಕೋಪಗೊಂಡ ಲಲಿತಾ, ಮನೆಗೆ ಬಂದು ಉರಿಯುತ್ತಿದ್ದ ತವಾದ ಮೇಲೆ ಪುಟ್ಟ ಮಗುವನ್ನು ಕೂರಿಸಿದ್ದಾರೆ!

ಪಾಟ್ನಾ: ಅಮ್ಮನ ಚಿಕಿತ್ಸಾವೆಚ್ಚ ಭರಿಸುವುದಕ್ಕೆ ಭಿಕ್ಷೆ ಬೇಡಿದ ಪುಟ್ಟಕಂದ

ಮಗುವಿನ ಎಳೆಯ ಚರ್ಮ ಪೂರ್ತಿ ಸುಟ್ಟು, ಮಗು ಚಿಂತಾಜನಕ ಸ್ಥಿತಿಯಲ್ಲಿದೆ. ಮಗುವಿನ ಹಿಂಭಾಗ ಮತ್ತು ಕಾಲಿನ ಭಾಗ ಸಂಪೂರ್ಣ ಸುಟ್ಟಿದೆ. ಈ ಕುರಿತು ಬಾಲ ನ್ಯಾಯ ಕಾಯ್ದೆಯನ್ವಯ ದಂಪತಿಗಳ ವಿರುದ್ಧ ದೂರುದಾಖಲಿಸಲಾಗಿದ್ದು, ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Mother who forces her 4-year-old daughter to sit on hot frying Pan, in Hyderabad has been now charged with Juvenile justice act.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ