ಚಿಕನ್ ಖಾದ್ಯ ತಡವಾಗಿದ್ದಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಕೊನೆ
ಹೈದರಾಬಾದ್, ಏಪ್ರಿಲ್ 2: ಚಿಕನ್ ಖಾದ್ಯ ಬಡಿಸುವುದು ತಡವಾಯಿತು ಎಂದು ಶುರುವಾದ ಜಗಳ ಕೊನೆಗೆ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಹೈದರಾಬಾದ್ ನಲ್ಲಿ ಭಾನುವಾರ ಮದುವೆ ನಿಶ್ಚಿತಾರ್ಥದ ಕಾರ್ಯಕ್ರಮವೊಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಚಾರ್ಮಿನಾರ್ ಹತ್ತಿರದ ಹುಸೇನಿ ಆಲಂ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಊಟದ ಸಮಯದಲ್ಲಿ ಚಿಕನ್ ಖಾದ್ಯ ಕೇಳಿದ ಗುಂಪೊಂದಕ್ಕೆ ಬಡಿಸುವುದು ತಡ ಆಗಿದೆ. ಇದನ್ನೇ ಅವಮಾನ ಎಂದು ಭಾವಿಸಿದ ಕೆಲ ಅತಿಥಿಗಳಿಗೆ ಮತ್ತೊಂದು ಗುಂಪು ಆಡಿದ ಮಾತು ಮತ್ತಷ್ಟು ಕೆರಳಿದೆ. ಊಟದ ನಂತರ ಹದಿನೈದು ಮಂದಿಯೊಂದಿಗೆ ವಾಪಸಾಗಿದೆ. ಅವರೆಲ್ಲರ ಬಳಿ ಮಾರಕ ಶಸ್ತ್ರಾಸ್ತ್ರಗಳು ಕೂಡ ಇದ್ದವು.

ಹಾಗೆ ಬಂದವರೇ ದಾಳಿ ಆರಂಭಿಸಿದ್ದಾರೆ. ಆಗ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಳಿಕೋರರು ಹೆಣ್ಣಮಕ್ಕಳಿದ್ದ ಅಂಗಣಕ್ಕೂ ಪ್ರವೇಶಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮೂವರನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಇತರ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.












Click it and Unblock the Notifications