ಇನ್ಮುಂದೆ ಆಂಧ್ರದ ಸಂಕ್ರಾಂತಿ ಹಬ್ಬದಲ್ಲಿ ಕೋಳಿ ಅಂಕವಿಲ್ಲ

Posted By:
Subscribe to Oneindia Kannada

ಹೈದ್ರಾಬಾದ್, ಡಿಸೆಂಬರ್, 26: ಸಂಕ್ರಾಂತಿ ವೇಳೆಯಲ್ಲಿ ಕೋಳಿ ಅಂಕವನ್ನು ನಡೆಸಿ ದುಡ್ಡು ಮಾಡಿಕೊಳ್ಳುತ್ತಿದ್ದ ಆಂಧ್ರ, ಕರ್ನಾಟಕ ಮಂದಿಗೆ ಇದು ಕಹಿಸುದ್ದಿ. ಕೋಳಿಕಾಳಗವನ್ನು ಯಾವುದೇ ಮೋಜು ಹಾಗು ಜೂಜಿಗಾಗಿ ಆಚರಣೆ ಮಾಡುವಂತಿಲ್ಲ ಎಂದು ಹೈದ್ರಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಪ್ರಾಣಿಗಳ ಮೇಲೆ ಹಣವನ್ನು ಕಟ್ಟಿ ಜೂಜಿನಲ್ಲಿ ತೊಡಗುವುದು ತಪ್ಪೆಂದು ಹೇಳಿರುವ ಹೈಕೋರ್ಟ್ ಮುಂದಿನ ಸಂಕ್ರಾಂತಿಯಿಂದಲೇ ಆದೇಶವನ್ನು ಜಾರಿಯಾಗುವಂತೆ ತಿಳಿಸಿದೆ. ಈ ಆದೇಶದಿಂದ ಕರ್ನಾಟಕದ ಕೆಲವು ಕಡೆ ಮತ್ತು ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆ, ತೆಲಂಗಾಣ ಸೇರಿಂದಂತೆ ಬಹಳಷ್ಟು ಕಡೆಗಳಲ್ಲಿ ನಡೆಯುತ್ತಿದ್ದ ಕೋಳಿಕಾಳಗಕ್ಕೆ ಬ್ರೇಕ್ ಬೀಳಲಿದೆ.[ಚಾಮರಾಜನಗರ ಕೋಳಿ ಕಾಳಗಕ್ಕೆ ಬಂದು ಜೈಲು ಸೇರಿದ್ರು]

Hyderabad High Court ordered to stop cock fight

ಕೋಳಿಕಾಳಗದಿಂದ ಆಂಧ್ರದಲ್ಲಿ ನಡೆಯುತ್ತಿದ್ದ 100 ಕೋಟಿಗೂ ಅಧಿಕ ವಹಿವಾಟಿಗೆ ಪಟ್ಟು ಬೀಳಲಿದೆ ಎನ್ನಲಾಗಿದೆ. ಹಾಗಾದರೆ ಇನ್ನು ಮುಂದೆ ಆಂಧ್ರ ಮುಂತಾದ ಪ್ರದೇಶದಲ್ಲಿ ಹಬ್ಬಕ್ಕೆಂದೇ ನಡೆಯುತ್ತಿದ್ದ ಕೋಳಿಕಾಳಗ ಮೋಜು, ಜೂಜು ನಡೆಯುವುದಿಲ್ಲವೇ ಅನ್ನುವುದನ್ನು ನೋಡಲು ಮುಂದಿನ ಸಂಕ್ರಾಂತಿವರೆಗೆ ಕಾಯಬೇಕು.

ಕರ್ನಾಟದಲ್ಲಿ ಕೋಳಿ ಕಾಳಗವನ್ನು 'ಕೋಳಿ ಅಂಕ' ಎಂದು ಕರೆಯುತ್ತಾರೆ. ಆದರೆ ಇದು ಕೋಳಿ ಪರವಾದ ಒಡೆಯರ ಪ್ರತಿಷ್ಠೆಯೂ ಅಗುತ್ತದೆ. ಇದನ್ನು ಉಳಿಸಿ ಕೊಡಲು ಹಾಗು ಮೋಜಿಗಾಗಿ ಕೋಳಿ ಮಾಡುವ ಯುದ್ಧ, ಅಥವಾ ಕ್ರೀಡೆ ಎಂದು ಕರೆಯಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hyderabad High Court ordered to stop cock fight . Andhra Pradesh, Telangana, Godavari district cock fight gambling that takes place in other parts of fall break.
Please Wait while comments are loading...