ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಗಣೇಶ ಲಡ್ಡೂ ದಾಖಲೆ 61 ಲಕ್ಷ ರೂಪಾಯಿಗೆ ಹರಾಜು

|
Google Oneindia Kannada News

ಹೈದರಾಬಾದ್ ಸೆಪ್ಟೆಂಬರ್ 12: ಹೈದರಾಬಾದ್‌ನಲ್ಲಿ ಈ ಬಾರಿ ಗಣೇಶ ಹಬ್ಬಕ್ಕಾಗಿ ತಯಾರಿಸಲಾದ ಲಡ್ಡೂಗಳು ಒಂದಕ್ಕೊಂದು ಮೀರಿಸುವಂತಿವೆ. ಈ ಲಡ್ಡುಗಳ ಸಾಂಪ್ರದಾಯಿಕ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತವನ್ನು ಗಳಿಸಿವೆ. ಈ ಹಬ್ಬದಲ್ಲಿ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ 10-12 ಕೆಜಿ ಲಡ್ಡೂವನ್ನು ಲಕ್ಷಾಂತರ ರೂಪಾಯಿಗೆ ಪಡೆಯಲಾಗಿದೆ. ಈ ಲಡ್ಡುವನ್ನು ನಗರದ ಗೇಟೆಡ್ ಸಮುದಾಯವಾದ 100 ನಿವಾಸಿಗಳು 61 ಲಕ್ಷಕ್ಕೆ ಪಡೆದಿದ್ದಾರೆ. ಇದು ಅತೀ ಹೆಚ್ಚು ಹಣಕ್ಕೆ ಹರಾಜಾದ ಲಡ್ಡುವಾಗಿದೆ.

ಹೈದರಾಬಾದ್‌ನಲ್ಲಿ ಗಣೇಶನ ಪೂಜೆಯ ಸಮಯದಲ್ಲಿ ನೈವೇದ್ಯಕ್ಕೆ ಇಡಲಾದ ಲಡ್ಡೂಗಳು ಒಂದಕ್ಕಿಂತ ಒಂದು ಹೆಚ್ಚಿನ ಬೆಲೆಗೆ ಮಾರಾಟವಾಗಿವೆ. ಈ ವರ್ಷ ನಗರದ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾ ಸನ್ ಸಿಟಿಯಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಿತು. ಈ ವೇಳೆ ಆಯಾ ದೇವಸ್ಥಾನದಲ್ಲಿ ನೈವೇದ್ಯಕ್ಕಾಗಿ ಇಡಲಾದ ದೊಡ್ಡ ಲಡ್ಡುಗಳ ಹರಾಜು ಪ್ರಕ್ರಿಯೆ ನಡೆಯಿತು. ಹೈದರಾಬಾದ್ ಗಣೇಶ ಲಡ್ಡೂ ದಾಖಲೆಯ ಬೆಲೆಗೆ ಹರಾಜಾಗಿದೆ.

ಇವುಗಳಲ್ಲಿ ಮರಕಥೆ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಸುಮಾರು ₹ 46 ಲಕ್ಷಕ್ಕೆ ಮಾರಾಟವಾದರೆ, ಬಾಳಾಪುರ ಗಣೇಶ ಲಡ್ಡು ₹ 24.60 ಲಕ್ಷಕ್ಕೆ ಮಾರಾಟವಾಗಿದೆ. ವಾಸ್ತವವಾಗಿ ಇದು 1994 ರಲ್ಲಿ ಬಾಳಾಪುರದ ಪಂಡಲ್‌ನಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಸ್ಥಳೀಯ ರೈತ ಕೋಲನ್ ಮೋಹನ್ ರೆಡ್ಡಿ ಲಡ್ಡೂಗಾಗಿ ₹ 450 ಬಿಡ್ ಮಾಡಿದ್ದರು. ಗಣೇಶ ಲಡ್ಡುಗಳು ಅದೃಷ್ಟ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಸ್ಥಳೀಯ ನಿವಾಸಿಗಳು ನಂಬುತ್ತಾರೆ. ಲಡ್ಡೂಗಳ ಹರಾಜಿನಿಂದ ಹೈದರಾಬಾದ್‌ನಲ್ಲಿ ಬಾಲಾಪುರ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಆರಂಭವಾಗುತ್ತದೆ.

Hyderabad Ganesh Laddoo auctioned for 61 lakhs

ಸುದ್ದಿಗಾರರೊಂದಿಗೆ ಮಾತನಾಡಿದ ರಿಚ್‌ಮಂಡ್ ವಿಲ್ಲಾ ಸನ್ ಸಿಟಿಯ ನಿವಾಸಿ ಡಾ ಸಾಜಿ ಡಿಸೋಜಾ, ಸುಮಾರು 100 ನಿವಾಸಿಗಳು ಲಡ್ಡೂ ಖರೀದಿಸಲು ಒಟ್ಟಾಗಿ ಸೇರಿದ್ದರು. ನಮ್ಮಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಇದ್ದಾರೆ. ಆದರೆ ನಾವೆಲ್ಲರೂ ನಂಬುವ ಏಕೈಕ ಧರ್ಮವೆಂದರೆ ಅದು ಮಾನವೀಯತೆಯಾಗಿದೆ. ಗಣೇಶ ಹಬ್ಬ ನಾವೆಲ್ಲರೂ ಒಗ್ಗೂಡಿ ಮಾನವೀಯತೆಯನ್ನು ಆಚರಿಸುವ ಹಬ್ಬವಾಗಿದೆ ಎಂದು ಅವರು ಹೇಳಿದರು.

ಇಲ್ಲಿನ ನಿವಾಸಿಗಳು ಐದು ವರ್ಷಗಳ ಹಿಂದೆ ಗಣೇಶ ಲಡ್ಡೂವಿಗೆ ₹ 25 ಸಾವಿರ ನೀಡಿ ಹರಾಜು ಹಾಕುವ ಸಂಪ್ರದಾಯ ಆರಂಭಿಸಿದ್ದರು. ವ್ಯತ್ಯಾಸವೆಂದರೆ ಲಡ್ಡೂವನ್ನು ಅತಿ ಹೆಚ್ಚು ಬಿಡ್ ಮಾಡಿದವರಿಗೆ ನೀಡುವ ಬದಲು, ಲಡ್ಡೂಗಾಗಿ ಪಾವತಿಸಲು ಕ್ರೌಡ್‌ಫಂಡಿಂಗ್‌ನಂತಹ ಎಲ್ಲಾ ನಿವಾಸಿಗಳಿಂದ ಕೊಡುಗೆಗಳನ್ನು ಸ್ವೀಕರಿಸಲು ಪೂಜಾ ಸಂಘಟಕರು ನಿರ್ಧರಿಸಿದರು.

ಪ್ರತಿ ವರ್ಷ ಬೆಳೆಯುತ್ತಿರುವ ಕೊಡುಗೆದಾರರ ಸಂಖ್ಯೆಯೊಂದಿಗೆ, RV ದಿಯಾ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು. ಅದು ಈಗ 17 NGO ಗಳಿಗೆ ಕಡಿಮೆ ಸೌಲಭ್ಯವಿರುವವರಿಗೆ ಶಿಕ್ಷಣ ಮತ್ತು ವೈದ್ಯಕೀಯ ಅಗತ್ಯಗಳನ್ನು ಬೆಂಬಲಿಸಲು ಧನಸಹಾಯ ನೀಡುತ್ತದೆ.

ಈ ವರ್ಷ ಬಾಲಾಪುರ ಲಡ್ಡೂವನ್ನು ಸ್ಥಳೀಯ ರೈತ ವಿ ಲಕ್ಷ್ಮ ರೆಡ್ಡಿ ₹ 24.60 ಲಕ್ಷಕ್ಕೆ ಖರೀದಿಸಿದ್ದರು. ಹರಾಜಿನಿಂದ ಬಂದ ಹಣವನ್ನು ಬಾಳಾಪುರದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ಉತ್ಸವವನ್ನು ಆಯೋಜಿಸಿದ್ದ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಕಾನಜಿಗುಡ ಮರಕಾಟದ ಶ್ರೀ ಲಕ್ಷ್ಮೀ ಗಣಪತಿ ಲಡ್ಡೂವನ್ನು ಯಶಸ್ವಿಯಾಗಿ ಬಿಡ್ ಮಾಡಿದ ದಂಪತಿಗಳಾದ ಗೀತಪ್ರಿಯ ಮತ್ತು ವೆಂಕಟರಾವ್ ಅವರು ತಮ್ಮ ಅಮೂಲ್ಯ ಆಸ್ತಿಯೊಂದಿಗೆ ಪೋಸ್ ನೀಡುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊಗಳು ತೋರಿಸಿವೆ. ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾನಿಲಯದೊಂದಿಗೆ ಸಂಬಂಧ ಹೊಂದಿರುವ ಶ್ರೀ ರಾವ್ ಅವರು ತಮ್ಮ ತಲೆಯ ಮೇಲೆ ಲಡ್ಡೂವನ್ನು ಹೊತ್ತುಕೊಂಡಿರುವುದು ಕಂಡುಬಂದಿದೆ. ಹರಾಜಿನಲ್ಲಿ ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
A laddoos prepared for Ganesh festival in Hyderabad has been auctioned for 61 lakhs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X