ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ತಾಯಿ ಬಳಿ ಸುಳ್ಳು ಹೇಳಿದ್ದ ಆರೋಪಿ

|
Google Oneindia Kannada News

Recommended Video

Public talk on Dr Priyanka Reddy case | OneIndia Kannada

ಹೈದರಾಬಾದ್, ಡಿಸೆಂಬರ್ 2: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬೆಂಕಿ ಹಚ್ಚಿ ಕೊಂದು ಮನೆಗೆ ಬಂದು ಆರೋಪಿ ಕಥೆ ಕಟ್ಟಿದ್ದೇ ಬೇರೆ.

ವೈದ್ಯೆಯ ಮೇಲೆ ಸ್ನೇಹಿತರೆಲ್ಲಾ ಸೇರಿ ಸಾಮೂಹಿಕ ಅತ್ಯಾಚಾರವೆಸಗಿ ಮನೆಗೆ ಬಂದಿದ್ದ ಪೊಲೀಸರು ಆತನನ್ನು ಹುಡುಕಿ ಮನೆಗೆ ಬಂದಾಗ, ಆರೋಪಿ ಚೆನ್ನಕೇಶವುಲು ತಾಯಿಯ ಬಳಿ ಟ್ರಕ್‌ಗೆ ಸಿಕ್ಕಿ ಮಹಿಳೆಯೊಬ್ಬಳು ಸತ್ತುಹೋಗಿದ್ದಳು ಎಂದು ಸುಳ್ಳು ಹೇಳಿದ್ದ.

ವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿ

ಲಾರಿ ಚಾಲಕ ಮೊಹಮ್ಮದ್ ಪಾಷಾ, ಮೂವರು ಲಾರಿ ಕ್ಲೀನರ್ ಗಳಾದ ನವೀನ್, ಚೆನ್ನಕೇಶವಲು ಮತ್ತು ಶಿವ ಎಂಬುವವರು ಸೇರಿಕೊಂಡು ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿದ್ದರು.

ವೈದ್ಯೆಯಂತೆ ನನ್ನ ಮಗನನ್ನು ಸುಟ್ಟುಬಿಡಿ

ವೈದ್ಯೆಯಂತೆ ನನ್ನ ಮಗನನ್ನು ಸುಟ್ಟುಬಿಡಿ

ಅತ್ಯಾಚಾರವೆಸಗಿದ ಮರುಕ್ಷಣವೇ ಆತ ನನ್ನ ಪಾಲಿಗೆ ಸತ್ತು ಹೋದ, ವೈದ್ಯೆಯಂತೆಯೇ ಆತನನ್ನು ಸುಟ್ಟು ಬಿಡಿ ಇಲ್ಲಾ ಗಲ್ಲಿಗೇರಿಸಿ ಎಂದು ಚೆನ್ನಕೇಶವುಲು ತಾಯಿ ಕಣ್ಣೀರಿಟ್ಟಿದ್ದಾರೆ. ಎಂಥಾ ಮಗನಿಗೆ ನಾನು ಜನ್ಮ ನೀಡಿಬಿಟ್ಟೆ ಎಂದು ಹೇಳಿದ್ದಾರೆ.

ಮನೆಗೆ ಬಂದು ತಾಯಿಯ ಬಳಿ ಸುಳ್ಳು ಹೇಳಿದ್ದ ಆರೋಪಿ

ಮನೆಗೆ ಬಂದು ತಾಯಿಯ ಬಳಿ ಸುಳ್ಳು ಹೇಳಿದ್ದ ಆರೋಪಿ

ಪೊಲೀಸರು ಮನೆಗೆ ಪರಿಶೀಲನೆಗೆಂದು ಬಂದಾಗ ಯಾಕೆ ಏನಾಯಿತು ಎಂದು ತಾಯಿ ಕೇಳಿದಾಗ ಚೆನ್ನಕೇಶವುಲು ಇಲ್ಲ ನಮ್ಮ ಟ್ರಕ್‌ಗೆ ಸಿಕ್ಕಿ ಮಹಿಳೆಯೊಬ್ಬರು ಸತ್ತು ಹೋಗಿದ್ದಾರೆ. ಇದೇ ವಿಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸುಳ್ಳು ಹೇಳಿ ನಂಬಿಸಿದ್ದ. ಬಳಿಕ ಪೊಲೀಸರು ಅವರ ತಾಯಿಗೆ ವಿಷಯ ತಿಳಿಸಿದ್ದರು.

ನನ್ನ ಮಗನನ್ನು ಸುಟ್ಟುಬಿಡಿ: ಅತ್ಯಾಚಾರಿಯ ತಾಯಿಯ ಆಕ್ರೋಶನನ್ನ ಮಗನನ್ನು ಸುಟ್ಟುಬಿಡಿ: ಅತ್ಯಾಚಾರಿಯ ತಾಯಿಯ ಆಕ್ರೋಶ

ದೇಹ ಸುಟ್ಟಿದೆಯೋ ಇಲ್ಲವೋ ಎಂದು ನೋಡಲು ಹೋಗಿದ್ದ

ದೇಹ ಸುಟ್ಟಿದೆಯೋ ಇಲ್ಲವೋ ಎಂದು ನೋಡಲು ಹೋಗಿದ್ದ

ವೈದ್ಯೆಯ ಮೇಲೆ ಚೆನ್ನಕೇಶವುಲು ಹಾಗೂ ಸ್ನೇಹಿತರು ಸೇರಿ ಅತ್ಯಾಚಾರವೆಸಗಿ ಒಂದು ಸೈಟಿನಲ್ಲಿ ಆಕೆಯನ್ನು ಸುಟ್ಟಿದ್ದರು. ವೈದ್ಯೆ ಶವ ಸಂಪೂರ್ಣವಾಗಿ ಸುಟ್ಟಿದೆಯೋ ಇಲ್ಲವೋ ಎಂದು ನೋಡಲು ಬೆಳಗಿನ ಜಾವ ಸುಮಾರು 2 ಗಂಟೆಯ ಹೊತ್ತಿಗೆ ಚೆನ್ನಕೇಶವುಲು ಮತ್ತೆ ಆ ಸ್ಥಳಕ್ಕೆ ತೆರಳಿದ್ದ. ಗಾಡಿಯನ್ನು ಸರಿಪಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ನವೀನ್, ಪಾಷಾ, ಚೆನ್ನಕೇಶವುಲು, ಶಿವ ಸೇರಿಕೊಂಡು ಅತ್ಯಾಚಾರವೆಸಗಿದ್ದರು.

ಎರಡು ವರ್ಷದಿಂದ ಪರವಾನಗಿ ಇಲ್ಲದೆ ಟ್ರಕ್ ಚಾಲನೆ

ಎರಡು ವರ್ಷದಿಂದ ಪರವಾನಗಿ ಇಲ್ಲದೆ ಟ್ರಕ್ ಚಾಲನೆ

ಚೆನ್ನಕೇಶವುಲು ಎರಡು ವರ್ಷಗಳಿಂದ ಪರವಾನಗಿ ಇಲ್ಲದ ಟ್ರಕ್ ಚಲಾಯಿಸುತ್ತಿದ್ದ ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಚಿಂತಕುಂಟ ಚೆನ್ನಕೇಶವುಲು ಹಳ್ಳಿಯಿಂದ ಸ್ಟೀಲ್‌ನ್ನು ಹೊತ್ತು ಹಿಂದಿರುಗುತ್ತಿದ್ದ. ಸ್ಟೀಲ್ ಲೋಡ್ ಮಾಡಿದ ಬಳಿಕ ಚಿಂತಕುಂಟ ಮನೆಗೆ ಹಿಂತಿರುಗಿದ್ದ. ಹೆಚ್ಚಿನ ಸ್ಟೀಲ್ ನ್ನು ಅಕ್ರಮವಾಗಿ ಸಾಗಣೆ ಮಾಡುವ ಉದ್ದೇಶವನ್ನು ಆತ ಹೊಂದಿದ್ದ. ಆದರೆ ಗುಡಗಂಡ್ಲಾದಿಂದ ಹಿಂದಿರುಗುತ್ತಿದ್ದಾಗ ಮೆಹಬೂಬ್ ನಗರದ ಸಮೀಪ ಪೊಲೀಸರು ಟ್ರಕ್‌ನ್ನು ಹಿಡಿದು ತಪಾಸಣೆ ನಡೆಸಿದ್ದರು.

ತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತುತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತು

English summary
Other than the story of the accused who raped a veterinarian, set fire to body and come to Home and Lied His mother.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X