ಹೆತ್ತ ಮಗಳ ಕತ್ತು ಕೊಯ್ದು ದೇವರಿಗೆ ಬಲಿ ನೀಡಿದ ವಿಕೃತ ದಂಪತಿ!

ಹೈದರಾಬಾದ್, ಫೆಬ್ರವರಿ 16: ಮೂಢನಂಬಿಕೆಯಿಂದ ಹೆಣ್ಣುಮಗುವನ್ನು ಸ್ವಂತ ತಂದೆ, ತಾಯಿಯೇ ಬಲಿ ನೀಡಿದ ಧಾರುಣ, ವಿಕೃತ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ತಾಂತ್ರಿಕನೊಬ್ಬನ ಸಲಹೆಯ ಮೇರೆಗೆ ಕ್ಯಾಬ್ ಚಾಲಕ ಕೆರುಕೊಂಡ ರಾಜಶೇಖರ್ ಮತ್ತು ಪತ್ನಿ ಶ್ರೀಲತಾ ಸೇರಿ ಸೂಪರ್ ಬ್ಲ್ಯೂ ಬ್ಲಂಡ್ ಮೂನ್ ದಿನ(ಜ.31)ದಂದು ತಮ್ಮ ಮಗಳನ್ನು ಬಲಿನೀಡಿದ್ದಾರೆ.

'ನಿಮ್ಮ ಮಗಳ ಕತ್ತು ಕೊಯ್ದು ದೇವರಿಗೆ ಬಲಿ ನೀಡಿದರೆ ನಿಮಗೆ ಒಳ್ಳೆಯದಾಗುತ್ತದೆ' ಎಂಬ ಮಂತ್ರವಾದಿಯೊಬ್ಬನ ಮಾತನ್ನು ಯಥಾವತ್ ಪಾಲಿಸಿದ ತಂದೆ ತಾಯಿ ಪುಟ್ಟ ಮಗುವಿನ ಕತ್ತು ಕೊಯ್ದು ಕೊಂದಿದ್ದಾರೆ.

Hyderabad couple arrested for beheading baby as sacrifice

ಕ್ಯಾಬ್ ಡ್ರೈವರ್ ಮನೆಯ ಟೆರೆಸ್ ನಲ್ಲಿ ಸಿಕ್ಕ ತಲೆಬುರುಡೆಯಿಂದಾಗಿ ಈ ಘಟನೆ ಬಯಲಿಗೆ ಬಂದಿದೆ. ಮಾಂತ್ರಿಕನ ಮಾತಿನಂತ ನದಿಯೊಂದರ ಬಳಿ ಮಗುವನ್ನು ಕರೆದೊಯ್ದು ಅದರ ಕತ್ತು ಕುಯ್ದು ಕೊಲೆ ಮಾಡಿ, ನಂತರ ಪೂಜೆಗಾಗಿ ಅದರ ತಲೆಯನ್ನು ತಂದೆ ಮನೆಗೆ ತಂದಿದ್ದಾನೆ!

ನಂತರ ಪತಿ- ಪತ್ನಿ ಇಬ್ಬರೂ ಸೇರಿ ಪೂಜೆ ನೆರವೇರಿಸಿದ್ದಾರೆ. ಪೂಜೆಯ ನಂತರ ಮೃತ ಮಗುವಿನ ತಲೆಯನ್ನು ಟೆರೆಸ್ ನಲ್ಲಿ ಮಾಂತ್ರಿಕ ಹೇಳಿದ ದಿಕ್ಕಿನಲ್ಲಿ ಇಟ್ಟಿದ್ದಾರೆ. ಇದು ನೆರೆಹೊರೆಯವರ ಗಮನಕ್ಕೆ ಬಂದು ಅವರು ಪೊಲೀಸರಿಗೆ ನೀಡಿದ ದೂರಿನನ್ವಯ ದಂಪತಿಯನ್ನು ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+