ಹೈದರಾಬಾದ್: ಕಾಂಗ್ರೆಸ್ ಮುಖಂಡನ ಪುತ್ರನ ಮೇಲೆ ಗುಂಡಿನ ದಾಳಿ

Posted By:
Subscribe to Oneindia Kannada

ಹೈದರಾಬಾದ್, ಜುಲೈ 28: ಹೈದರಾಬಾದಿನ ಕಾಂಗ್ರೆಸ್ ಮುಖಂಡ ಮುಖೇಶ್ ಗೌಡ್ ಎಂಬುವವರ ಪುತ್ರ ವಿಕ್ರಂ ಗೌಡ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಇಂದು (ಜುಲೈ 28) ಗುಂಡಿನ ದಾಳಿ ನಡೆಸಿದ್ದಾರೆ.

RSS ಮುಖ್ಯಸ್ಥರ ಮೇಲೆ ಕಾಂಗ್ರೆಸ್ ನಡೆಸಿದ್ದ ಭಾರೀ ಸಂಚು ಬಹಿರಂಗ!

ದಾಳಿಯಿಂದಾಗಿ ವಿಕ್ರಂ ಗೌಡ್ ಅವರ ಕೈಗೆ ಎರಡು ಗುಂಡುಗಳು ತಗುಲಿದ್ದು, ಗಂಭೀರ ಗಾಯವಾಗಿದೆ. ಅವರನ್ನು ಹೈದರಾಬಾದಿನ ಜುಬಿಲಿ ಹಿಲ್ಸ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದೆ.

Hyderabad: Congress leader Mukesh Goud's son shot at on 28th July

'ಯಾರೋ ತಮ್ಮ ಪತಿಯನ್ನು ಕೊಲೆ ಮಾಡುವುದಕ್ಕೆ ಸಂಚುಹೂಡುತ್ತಿದ್ದಾರೆ' ಎಂದು ವಿಕ್ರಂ ಗೌಡ ಅವರ ಪತ್ನಿ ಶಿಪಾಲಿಯವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ.

ಇಂದು(ಜುಲೈ 28) ಬೆಳಗ್ಗಿನ ಜಾವ 2:30 ರ ಸಮಯದಲ್ಲಿ, ಪತ್ನಿ ಶಿಪಾಲಿ ಅವರೊಂದಿಗೆ, ತಮ್ಮ ಮನೆಯ ಬಳಿಯ ಹಖಿ ಬಾಬಾ ದರ್ಗಾಕ್ಕೆ ತೆರಳಿ, ಅಲ್ಲಿದ್ದ ಬಡವರಿಗೆ ಆಹಾರ ಹಂಚಲು ತೆರಳಿದ್ದ ವಿಕ್ರಂ ಗೌಡ್ ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress leader Mukesh Goud's son Vikram Goud was shot at by unidentified assailant at his residence in Hyderabad's Banjara Hills on early ours of July 28th. Goud, who suffered two bullet injuries in his hands, was admitted to Jubilee Hills Apollo Hospital and is undergoing treatment.
Please Wait while comments are loading...