ಜಾಗತಿಕ ಮಹಾಮಾರಿ ಝಿಕಾ ವೈರಾಣುಗೆ ಔಷಧಿ ಇದೆಯಂತೆ!

Posted By:
Subscribe to Oneindia Kannada

ಹೈದರಾಬಾದ್, ಫೆ. 04: ಜಾಗತಿಕ ಮಹಾಮಾರಿ ಝಿಕಾ ವೈರಾಣುವಿಗೆ ಔಷಧಿ ಕಂಡು ಹಿಡಿದಿರುವುದಾಗಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಹೇಳಿದೆ. ಈ ಕುರಿತಂತೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿರುವುದಾಗಿ ಸಂಸ್ಥೆಯ ಸಿಎಂಡಿ ಕೃಷ್ಣ ಇಲ್ಲಾ ಹೇಳಿದ್ದಾರೆ.

ಝಿಕಾ ವೈರಸ್ 23 ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಝಿಕಾ ವೈರಸ್​ಗಳು ಗರ್ಭಿಣಿಯರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ. ಜನಿಸುವ ಮಕ್ಕಳು ಮೈಕ್ರೋಸೆಫಲಿ ರೋಗಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಮದ್ಯೆ ಪ್ರವೇಶಿಸಿ ತ್ವರಿತ ಗತಿಯಲ್ಲಿ ಔಷಧಿಗಳಿಗೆ ಪೇಟೆಂಟ್ ದೊರಕಿಸಿಕೊಟ್ಟರೆ ಒಳ್ಳೆಯದು ಎಂದು ಕೃಷ್ಣ ಹೇಳಿದ್ದಾರೆ. [ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?]

Hyderabad-Based Firm Claims Breakthrough In Developing Zika Vaccine

ಬ್ರೆಜಿಲ್​ನಲ್ಲಿ ಮೊದಲಿಗೆ ಝಿಕಾ ವೈರಾಣು ಸೋಂಕು ಪತ್ತೆಯಾಗುತ್ತಿದ್ದಂತೆ ನಮ್ಮ ಸಂಸ್ಥೆ ಇದಕ್ಕೆ ಔಷಧ ಕಂಡುಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಎರಡು ಮಾದರಿಯ ಔಷಧ ರೂಪಿಸಿ ಪ್ರಯೋಗ ನಡೆಸಲಾಯಿತು. ಸದ್ಯ ಔಷಧಿಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದ್ದು, ಆರಂಭಿಕ ಯಶಸ್ಸು ದೊರೆತಿದೆ. ಪ್ರಯೋಗ ಹಾಗೂ ಫಲಿತಾಂಶ ಕಾಣಲು ಕನಿಷ್ಠ ಐದು ತಿಂಗಳಾದರೂ ಬೇಕು ಎಂದಿದ್ದಾರೆ.[ಅಸುರಕ್ಷಿತ ಲೈಂಗಿಕ ಸಂಪರ್ಕ ಝಿಕಾ ವೈರಸ್ ತರಬಹುದು]

ಆದರೆ, ಪೇಟೆಂಟ್ ಇಲ್ಲದ ಕಾರಣ ಇನ್ನೂ ಮಾನವರ ಮೇಲೆ ಪ್ರಯೋಗ ನಡೆಸಿಲ್ಲ. ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ.

Hyderabad-Based Firm Claims Breakthrough In Developing Zika Vaccine

ವಿಶ್ವದೆಲ್ಲ್ಡೆ ಸುಮಾರು 3,500 ಪ್ರಕರಣಗಳು ದಾಖಲಾಗಿದ್ದು, ಅಡೆಸ್ ಜೆನಸ್ ಎಂಬ ಸೊಳ್ಳೆಯಿಂದ ಸೋಂಕು ಹರಡುತ್ತದೆ. ಹೀಗಾಗಿ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಬೆಳಗ್ಗೆ ಹೊತ್ತು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿದೆ.[ಝಿಕಾ ವೈರಾಣು ಪತ್ತೆ ಕಿಟ್ ಗಾಗಿ ಮನವಿ: ಖಾದರ್]

ಲೈಂಗಿಕ ಸಂಪರ್ಕದಿಂದ ಝಿಕಾ ವೈರಸ್​ಗಳು ಹರಡಿರುವ ಪ್ರಕರಣ ಟೆಕ್ಸಾಸ್​ನಲ್ಲಿ ಪತ್ತೆಯಾಗಿದೆ. ವೆನುಜುವೆಲಾದಿಂದ ಮರಳಿದ ವ್ಯಕ್ತಿಯೊಬ್ಬನಿಂದ ಝಿಕಾ ವೈರಸ್ ದೈಹಿಕ ಸಂಪರ್ಕದಿಂದ ಹರಡಿದೆ ಎಂದು ಆರೋಗ್ಯ ಸಂಸ್ಥೆಗಳು ತಿಳಿಸಿವೆ.

ಮಾರ್ಚ್ ವೇಳೆಗೆ ಝಿಕಾ ಟೆಸ್ಟ್ ಕಿಟ್ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, 4,500 ರೂ. ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯಕ್ಕೆ ಕರ್ನಾಟಕದಿಂದ ಕೂಡಾ ಕಿಟ್ ಗಾಗಿ ಬೇಡಿಕೆ ಬಂದಿದೆ.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Hyderabad-based vaccines and bio-therapeutic manufacturer has claimed to have developed the world's first vaccine against the mosquito-borne Zika virus. Chairman and Managing Director of Bharat Biotech International Dr. Krishna Ella said they had been working on Zika vaccine for more than 15 months and have made the vaccine, which is under clinical trial. They claim to have filed a patent in July, 2015.
Please Wait while comments are loading...