ತಂದೆ ವ್ಯವಹಾರದ ಲಾಭಕ್ಕಾಗಿ 68 ದಿನ ಉಪವಾಸ: ಬಾಲಕಿ ಸಾವು

Posted By:
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 8: ಕ್ರೌರ್ಯ, ಅಜ್ಞಾನ, ಅಮಾನವೀಯತೆ, ಅತಿಯಾಸೆ ಎಲ್ಲ ಒಟ್ಟು ಸೇರಿದರೆ ಎಂಥ ಅನಾಹುತ ಮಾಡಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ವ್ಯಾಪಾರದಲ್ಲಿ ಲಾಭವಾಗಬೇಕು ಅಂದರೆ ಮಗಳು ಉಪವಾಸ ಮಾಡಬೇಕು ಅಂತ ಅದು ಯಾರು ಹೇಳಿದರೋ, ಪುಣ್ಯಾತ್ಮನೊಬ್ಬ ಮಗಳಿಗೆ 68 ದಿನ ಅನ್ನಾಹಾರ ಕೊಡದೆ, ಆಕೆ ಸಾವಿಗೆ ಕಾರಣನಾಗಿದ್ದಾನೆ.

ತಂದೆಯ ಆಭರಣ ವ್ಯಾಪಾರ ಚೆನ್ನಾಗಿ ಆಗಲಿ ಅನ್ನೋ ಕಾರಣಕ್ಕೆ 13 ವರ್ಷದ ಹೆಣ್ಣುಮಗಳು ಆರಾಧನಾ 68 ದಿನ ಉಪವಾಸ ಮಾಡಿ, ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಈ ಘಟನೆ ಅಕ್ಟೋಬರ್ 2ರಂದೇ ಸಂಭವಿಸಿದೆ. ಆದರೆ ಶುಕ್ರವಾರ ಸಂಘವೊಂದರ ಅಧ್ಯಕ್ಷರು ಬಾಲಕಿಯ ಪೋಷಕರ ವಿರುದ್ಧ ಹೈದರಾಬಾದ್ ಕಮಿಷನರ್ ಗೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ.[ಚಿತ್ರದುರ್ಗದ ಹಳ್ಳಿಯಲ್ಲಿ ಬಾಲಕನ ಬೆತ್ತಲೆ ಮೆರವಣಿಗೆ ಮಾಡಿದವರಿಗೆ ಧಿಕ್ಕಾರ]

girl dies after dad puts her on fast to aid business

ಸಿಕಂದರಾಬಾದ್ ನ ಸೇಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಆರಾಧನಾ ಮೃತಪಟ್ಟವಳು. ಲಕ್ಷ್ಮಿಚಂದ್ ಹಾಗೂ ಮನಿಷಾ ದಂಪತಿಗೆ 'ನಿಮ್ಮ ಮಗಳು ನಾಲ್ಕು ತಿಂಗಳು ಉಪವಾಸ ಮಾಡಿದರೆ ವ್ಯಾಪಾರದಲ್ಲಿ ಲಾಭವಾಗುತ್ತದೆ' ಅಂತ ಚೆನ್ನೈ ಮೂಲದ ಪುರೋಹಿತನೊಬ್ಬ ಸಲಹೆ ನೀಡಿದ್ದನಂತೆ. ಆತನ ಸಲಹೆಯಂತೆ 68 ದಿನಗಳ ಕಾಲ ಆರಾಧನಾಳನ್ನ ಬಲವಂತವಾಗಿ ಉಪವಾಸ ಕೆಡವಿದ್ದಾರೆ.[ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]

ಆರಾಧನಾ ತಲೆ ಸುತ್ತಿ ನೆಲಕ್ಕೆ ಬಿದ್ದವಳು ತಕ್ಷಣವೇ ಕೋಮಾಗೆ ಹೋದಳು. ಹತ್ತಿರದ ಆಸ್ಪತ್ರೆಗೆ ಅವಳನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ಖಚಿತಪಡಿಸಿದ್ದಾರೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 13 year old girl, Aradhana who was fasting for around 68 days only to bring profits to her father’s jewellery business, allegedly died due to ill health.
Please Wait while comments are loading...