• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಿಎಚ್‌ಎಂಸಿ ಚುನಾವಣೆ; ಮತದಾನ ಪ್ರಮಾಣದ ಮೇಲೆ ಅನುಮಾನ!

|

ಹೈದರಾಬಾದ್, ಡಿಸೆಂಬರ್ 04: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. 150 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ 46.55ರಷ್ಟು ಮತದಾನವಾಗಿತ್ತು. ಆದರೆ, ಮತದಾನದ ಪ್ರಮಾಣದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಲಾಗಿದೆ.

ಜಿಎಚ್‌ಎಂಸಿ ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. 150 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗಿತ್ತು. ಆದ್ದರಿಂದ, ಚುನಾವಣಾ ಫಲಿತಾಂಶದ ಘೋಷಣೆ ಸಂಜೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಜಿಎಚ್‌ಎಂಸಿ ಚುನಾವಣೆ; ಪ್ರಚಾರ ಮಾಡಿದವರು ಐಸೋಲೇಷನ್‌ಗೆ!

ಮಂಗಳವಾರ ಜಿಎಚ್‌ಎಂಸಿ ಚುನಾವಣೆ ಮತದಾನ ನಡೆದಿತ್ತು. ಬುಧವಾರ ರಾಜ್ಯ ಚುನಾವಣಾ ಆಯೋಗ ಶೇ 46.55ರಷ್ಟು ಮತದಾನ ನಡೆದಿದೆ ಎಂದು ಘೋಷಣೆ ಮಾಡಿತ್ತು. 2007ರಲ್ಲಿ ಜಿಎಚ್‌ಎಂಸಿ ರಚನೆಯಾದ ಬಳಿಕ ನಡೆದ ಅತ್ಯಧಿಕ ಪ್ರಮಾಣದ ಮತದಾನವಿದಾಗಿದೆ.

ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ!

ಬಿಜೆಪಿ ಮತ್ತು ಕಾಂಗ್ರೆಸ್ ಮತದಾನದ ಪ್ರಮಾಣದ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಸಂಜೆ 5 ಗಂಟೆ ಬಳಿಕ ಮತಗಟ್ಟೆ ಮುಂದೆ ಹೆಚ್ಚು ಜನರು ಇರಲಿಲ್ಲ. ವೃದ್ಧರು, ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಮತದಾನದ ಪ್ರಮಾಣ ಒಂದು ಗಂಟೆಯಲ್ಲಿ ಹೆಚ್ಚಾದ ಬಗ್ಗೆ ಅನುಮಾನವಿದೆ.

ಜಿಎಚ್‌ಎಂಸಿ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಗೆಲುವು; ಕೆ. ಕವಿತಾ

ಒಂದೇ ಗಂಟೆಯಲ್ಲಿ ಅತ್ಯಧಿಕ ಮತದಾನ

ಒಂದೇ ಗಂಟೆಯಲ್ಲಿ ಅತ್ಯಧಿಕ ಮತದಾನ

ಜಿಎಚ್‌ಎಂಸಿ ಚುನಾವಣೆಯಲ್ಲಿ ಸಂಜೆ 5 ಗಂಟೆಯ ತನಕ ಶೇ 37ರಷ್ಟು ಮತದಾನವಾಗಿತ್ತು. ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿತ್ತು. ಕೊನೆಯ ಒಂದು ಗಂಟೆಯಲ್ಲಿ ಹೆಚ್ಚು ಮತದಾನವಾಗಿದ್ದು, ಅಂತಿಮವಾಗಿ ಶೇ 46.55ರಷ್ಟು ಮತದಾನ ನಡೆದಿದೆ. ಕೊನೆಯ ಒಂದು ಗಂಟೆಯಲ್ಲಿ ಅತ್ಯಧಿಕ ಮತದಾನವಾದ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.

ತಳ್ಳಿಹಾಕಿದ ಟಿಆರ್‌ಎಸ್

ತಳ್ಳಿಹಾಕಿದ ಟಿಆರ್‌ಎಸ್

ಬಿಜೆಪಿ ಮತ್ತು ಕಾಂಗ್ರೆಸ್ ಮತದಾನದ ಪ್ರಮಾಣದ ಬಗ್ಗೆ ಎತ್ತಿದ ಪ್ರಶ್ನೆಯನ್ನು ಟಿಆರ್‌ಎಸ್ ತಳ್ಳಿ ಹಾಕಿದೆ. 5 ಗಂಟೆಯ ತನಕ ಶೇ 37ರಷ್ಟು ಮತದಾನ ನಡೆದಿದೆ ಅಧಿಕಾರಿಗಳು ಹೇಳಿದ್ದಾರೆ. ಪಕ್ಷಗಳು ಅದನ್ನು ನಂಬುತ್ತವೆ ಎಂದಾದರೆ ಶೇ 46.55ರಷ್ಟು ಮತದಾನವಾಗಿದ್ದನ್ನು ನಂಬಲೇಬೇಕು ಎಂದು ಹೇಳಿದೆ.

ಮತದಾನದ ಪ್ರಮಾಣದ ವಿವರ

ಮತದಾನದ ಪ್ರಮಾಣದ ವಿವರ

ಇದುವರೆಗೂ ನಡೆದ ಜಿಎಚ್‌ಎಂಸಿ ಚುನಾವಣೆಯಲ್ಲಿ ಶೇ 46.55ರಷ್ಟು ಮತದಾನವೇ ಅಧಿಕ ಎಂದು ಚುನಾವಣಾ ಆಯೋಗವೇ ಹೇಳಿದೆ. 2016ರಲ್ಲಿ ಶೇ 45.29, 2009ರಲ್ಲಿ ಶೇ 42.04ರಷ್ಟು ಮತದಾನವಾಗಿತ್ತು. ಹಿಂದಿನ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಕೆ ಮಾಡಲಾಗಿತ್ತು. ಈ ಬಾರಿ ಬ್ಯಾಲೆಟ್ ಮೂಲಕ ಚುನಾವಣೆ ನಡೆದಿದೆ.

ಅಕ್ರಮ ನಡೆಯುವ ಸಾಧ್ಯತೆ ಕಡಿಮೆ

ಅಕ್ರಮ ನಡೆಯುವ ಸಾಧ್ಯತೆ ಕಡಿಮೆ

ಪ್ರತಿ ಮತಗಟ್ಟೆಯಲ್ಲಿ ಕ್ಯಾಮರಾ ಇತ್ತು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು. ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ ಇದ್ದರು. ಮತದಾನದ ಪ್ರಮಾಣ ಹೆಚ್ಚು ಮಾಡಲು ಅಕ್ರಮ ನಡೆದಿರುವ ಸಾಧ್ಯತೆ ಕಡಿಮೆ ಇದೆ ಎಂದು ಹಲವು ರಾಜಕೀಯ ಪಕ್ಷಗಳು ಹೇಳಿವೆ.

English summary
46.55 per cent voting held for Greater Hyderabad Municipal Corporation (GHMC) election on December 2, 2020. BJP and Congress expressed doubts over spike in voting in last one hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X