ಭದ್ರಾಚಲಂನ ಸೀತಾರಾಮನ ದರ್ಶನ ಪಡೆದ ದೇವೇಗೌಡ-ಚೆನ್ನಮ್ಮ

Posted By:
Subscribe to Oneindia Kannada

ವಿಜಯವಾಡ,ಆಗಸ್ಟ್ 29: ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪತ್ನಿ ಸಮೇತ ತೆಲಂಗಾಣದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.

ಭಕ್ತ ರಾಮದಾಸರಿಗೆ ಶ್ರೀರಾಮಚಂದ್ರ ಪ್ರತ್ಯಕ್ಷವಾದ ಸ್ಥಳ ಎಂದು ಪ್ರತೀತಿ ಇರುವ ಭದ್ರಾಚಲಂ ಹಾಗೂ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ವಿಜಯವಾಡಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮನವರು, ಭದ್ರಾಚಲಂ ರಾಮಾಲಯ ಹಾಗೂ ಕನಕ ದುರ್ಗಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Former PM Deve Gowda offers prayers at Bhadrachalam temple

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯಿಂದ ಗೌಡರನ್ನು ಬರಮಾಡಿಕೊಳ್ಳಲಾಯಿತು. ದೇವರ ದರ್ಶನ ಪಡೆದ ನಂತರ ಗೌಡರು ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದಿನಿಂದಲೂ ಭದ್ರಾಚಲಂ ರಾಮಾಲಯಕ್ಕೆ ಬರಬೇಕೆಂದುಕೊಂಡಿದ್ದೆ. ಈಗ ಬಂದಿದ್ದೇನೆ ಎಂದು ಹೇಳಿದ್ದಾರೆ.

'ನಾನು ದ್ವಾರಕಾದಿಂದ ಶ್ರೀರಂಗಂ ತನಕ ಎಲ್ಲಾ ವೈಷ್ಣವ ದೇಗುಲಗಳನ್ನು ನೋಡಿದ್ದೇನೆ. ಉತ್ತರದಿಂದ ದಕ್ಷಿಣದವರೆಗೆ ದೇಶದ ಬಹುತೇಕ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಶ್ರೀರಾಮನ ದೇವಾಲಯಗಳಲ್ಲಿ ಒಂದಾದ ಭದ್ರಾಚಲಂ ದೇವಾಲಯಕ್ಕೆ ಇದೇ ಮೊದಲ ಬಾರಿಗೆ ಬಂದಿದ್ದೇನೆ'ಎಂದು ಗೌಡರು ತಿಳಿಸಿದ್ದಾರೆ.

ರಾಮದಾಸುಲು ಅವರು ರಾಮನಾಮ, ಭಕ್ತ ರಾಮದಾಸ ವಿತ್ರವನ್ನು ನೋಡಿದ್ದೇನೆ. ಇದು ದೇಗುಲ
ಪಕ್ಷದ ಸಂಘಟನೆ ಸೇರಿದಂತೆ ಮುಂದಿನ ಹೋರಾಟಕ್ಕೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ಗೌಡರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Prime Minister H D Deve Gowda today offered prayers at the famous Sri Sitaramachandra Swamy temple in Bhadrachalam in Khammam district of Telangana.
Please Wait while comments are loading...