ಹೈದರಾಬಾದ್ ಐಟಿ ಕಂಪೆನಿಗಳ ಮೇಲೆ ಪಾಕಿಸ್ತಾನ್ ಹ್ಯಾಕರ್ಸ್ ದಾಳಿ

Posted By: Prithviraj
Subscribe to Oneindia Kannada

ಹೈದರಾಬಾದ್, ಅಕ್ಟೋಬರ್, 14 : ಭಾರತದ ಆರ್ಥಿಕ ಶಕ್ತಿಯನ್ನು ಕುಂದಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಶತ ಪ್ರಯತ್ನ ಮಾಡುತ್ತಿದೆ. ಪಾಕಿಸ್ತಾನಕ್ಕೆ ಸೇರಿದ ಕೆಲವು ಹ್ಯಾಕರ್ಸ್ ಹೈದರಾಬಾದ್ ನ ಸುಮಾರು 50 ಕಂಪೆನಿಗಳ ಮೇಳೆ ದಾಳಿ ಮಾಡಿದ್ದಾರೆ.

ಕಳೆದ 10 ದಿನಗಳಿಂದ ಕೆಲವು ಹ್ಯಾಕರ್ಸ್ ಐಟಿ ಕಂಪೆನಿಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಹೈದರಾಬಾದ್ ಸೆಕ್ಯುರಿಟಿ ಕೌನ್ಸಿಲ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸೈಬರ್ ದಾಳಿ ನಡೆದಿರುವ ಕುರಿತು ತನಿಖೆ ಆರಂಭವಾಗಿದ್ದು, 'ರಾನ್ಸಮ್ ವೇರ್' ಬಳಸಿ ಸಂಸ್ಥೆಗಳ ರಹಸ್ಯ ಸಮಾಚಾರಗಳನ್ನು ಹ್ಯಾಕ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. [ಐಟಿ ಕಂಪನಿಗಳ ನಿದ್ದೆ ಕೆಡಿಸಿರುವ ಸೈಬರ್ ದಾಳಿ]

ಹೈದರಾಬಾದ್ ಐಟಿ ಕಂಪೆನಿಗಳ ಮೇಲೆ ಪಾಕಿಸ್ತಾನ್ ಹ್ಯಾಕರ್ಸ್ ದಾಳಿ

ಟರ್ಕಿ, ಸೋಮಾಲಿಯಾ, ಸೌದಿ ಅರೇಬಿಯಾ ಮತ್ತಿತರ ದೇಶಗಳ ಸರ್ವರ್ ಗಳನ್ನು ಬಳಸಿ ಪಾಕಿಸ್ತಾನದ ಹ್ಯಾಕರ್ಸ್ ಸಂಸ್ಥೆಗಳ ಅಮೂಲ್ಯ ಮತ್ತು ರಹಸ್ಯ ಸಮಾಚಾರವನ್ನು ಹ್ಯಾಕ್ ಮಾಡಲಾಗಿದೆ.

ಡಿಸ್ಕ್ರಿಪ್ಷನ್ ಕೀ ತಿಳಿಸಲು ಕೋಟ್ಯಂತರ ರೂ. ಹಣಕ್ಕೆಹ್ಯಾಕರ್ಸ್ ಬೇಡಿಕೆ ಇಟ್ಟಿದ್ದಾರೆ ಎಂದು ಸೈಬರ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸೈಬರ್ ದಾಳಿಗಳನ್ನು ಗಂಭೀರವಾಗಿ ಪರಿಗಣಿಸಿ ಹ್ಯಾಕ್ ಮಾಡಲಾಗಿರುವ ಕೆಲವು ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಆದರೆ ಇನ್ನೂ ಕೆಲವು ಸಂಸ್ಥೆಗಳ ಸಮಸ್ಯೆ ಬಗೆಹರಿಸಬೇಕಿದೆ ಎಂದು ಸೈಬರ್ ಸೆಕ್ಯುರಿಟಿ ಪೋರಂ ಅಧ್ಯಕ್ಷ ದೇವರಾಜ್ ವಡೆಯರ್ ತಿಳಿಸಿದ್ದಾರೆ.

ರನ್ಸಮ್ ವೇರ್ ದಾಳಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಕಳೆದ ಹತ್ತು ದಿನಗಳಿಂದ ಪಾಕಿಸ್ತಾನ ಮೂಲದ ಹ್ಯಾಕರ್ಸ್ ಹೆಚ್ಚು ದಾಳಿ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭದ್ರತಾ ದೃಷ್ಟಿಯಿಂದ ಯಾವ ಯಾವ ಸಂಸ್ಥೆಗಳ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ವಿಚಾರವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಕೆಲವು ಸಂಸ್ಥೆಗಳು ಸೈಬರ್ ಸೆಲ್ ಗೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.

ಹೈದರಾಬಾದ್ ಪರಿಧಿಯಲ್ಲಿ ಒಟ್ಟು 2500ಕ್ಕೂ ಹೆಚ್ಚು ಐಟಿ ಕಂಪೆನಿಗಳಿದ್ದು, ಇವುಗಳಲ್ಲಿ 1300 ಕಂಪೆನಿಗಳು ದೊಡ್ಡ ಮಟ್ಟದ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಹ್ಯಾಕರ್ಸ್ ಸರ್ವರ್ ಗಳನ್ನು ಪ್ರತಿ ಐದು ನಿಮಿಷಕ್ಕೊಮ್ಮೆ ಬದಲಾಯಿಸುತ್ತಿದ್ದು, ನಮ್ಮ ದೇಶದಲ್ಲಿ ದಾಳಿ ನಡೆಸುತ್ತಿರುವ ಎಥಿಕಲ್ ಹ್ಯಾಕರ್ಸ್ ಯಾರೆಂಬುದನ್ನು ಅವರು ಬಳಸಿರುವ ಪೋರ್ಟ್ ನೆಟ್ ವರ್ಕ್ ಮತ್ತು ಐಪಿ ವಿಳಾಸಗಳ ಮೂಲಕ ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲದೇ ನೆಟ್ ವರ್ಕ್ ನೋಡ್ ಸಮೇತ ಎಲ್ಲ ವಿವರಗಳನ್ನು ಪತ್ತೆಹಚ್ಚಲಾಗಿದೆ ಎಂದು ಸೈಬರ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪ್ರತೀಕಾರವಾಗಿ ಭಾರತದ 7ಸಾವಿರ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ಪಾಕಿಸ್ತಾನದ ಹ್ಯಾಕರ್ಸ್ ಪ್ರಕಟಿಸಿದ್ದಾರೆ.

ಸೈಬರ್ ದಾಳಿಗೆ ತುತ್ತಾಗಿರುವ ಬಹುತೇಕ ಸಂಸ್ಥೆಗಳು ಆರ್ಥಿಕಾಂಶಗಳನ್ನು ಅವಲಂಬಿಸಿದ್ದು, ತಮ್ಮ ನೆಟ್ ವರ್ಕ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ ಇದರಿಂದ ವ್ಯಾಪರ ವಹಿವಾಟು ಸರಿಯಾಗಿ ನಡೆಯುತ್ತಿಲ್ಲ ಎಂದು ಸಂಸ್ಥೆಯ ಮಾಲೀಕರು ಸೈಬರ್ ತಜ್ಞರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದಷ್ಟೇ ಅಲ್ಲದೇ ಒಂದು ಸಂಸ್ಥೆಯ ಸಂಪೂರ್ಣ ಮಾಹಿತಿಯನ್ನು ಹ್ಯಾಕರ್ಸ್ ಲಾಕ್ ಮಾಡಿದ್ದು, ಅನ್ ಲಾಕ್ ಮಾಡಬೇಕಾದಲ್ಲಿ 420ಕೋಟಿರೂ. ಹಣ ನೀಡಬೇಕೆಂದು ಒತ್ತಾಯಿಸಿದ್ದಾರೆ. ಹಣ ನೀಡಿದರೂ ಸಂಪೂರ್ಣ ಮಾಹಿತಿ ಹಿಂತಿರಿಗಿಸುವ ಯಾವುದೇ ಭರವಸೆ ಇಲ್ಲ ಎಂದು ಸೈಬರ್ ತಜ್ಞರು ಹೇಳುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least 50 information technology companies have come under a wave of cyber attacks from Pakistan-based hackers over 10 days, the Society for Cyberbad Security Council(SCSC) comprising Hyderabad's top IT companies and police, said on Thursday.
Please Wait while comments are loading...