ತೆಲುಗು ಖ್ಯಾತ ಹಾಸ್ಯನಟ ವೇಣುಮಾಧವ್ ತೀವ್ರ ಅಸ್ವಸ್ಥ

ಹೈದಬಾರಾಬ್, ಸೆಪ್ಟೆಂಬರ್ 25: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ವೇಣುಮಾಧವ್ ಅವರು ತೀವ್ರ ಅಸ್ವಸ್ಥರಾಗಿದ್ದು, ಜೀವ ರಕ್ಷಕ ಯಂತ್ರಗಳ ಸಹಾಯದಿಂದ ಉಸಿರಾಡುವ ಸ್ಥಿತಿ ತಲುಪಿದ್ದಾರೆ.

ವೇಣುಮಾಧವ್ ಅವರಿಗೆ ಯಕೃತ್ತಿನ ಸಮಸ್ಯೆಯಾಗಿ ಕಳೆದ ವಾರವೇ ಸಿಕಿಂದ್ರಾಬಾದ್‌ನ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ನಂತರ ಇದೇ ಭಾನುವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಮನೆಗೆ ತೆರಳಿದ್ದರು.

ಆದರೆ ನಂತರ ಅವರ ಆರೋಗ್ಯದಲ್ಲಿ ತೀವ್ರ ಏರು-ಪೇರಾದ ಕಾರಣ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೀವ ರಕ್ಷಕ ಯಂತ್ರಗಳನ್ನು ವೇಣುಮಾಧವ್ ಅವರಿಗೆ ಅಳವಡಿಸಲಾಗಿದೆ.

Famous Telugu Movie Artist Venu Madhav In Critical Condition

ವೇಣುಮಾಧವ್ ಅವರ ಯಕೃತ್ತು ತೀವ್ರ ಹಾನಿಗೆ ಒಳಗಾಗಿದ್ದು, ಯಕೃತ್‌ ಕಸಿ ಮಾಡುವ ಅವಶ್ಯಕತೆ ಇತ್ತು. ಪ್ರಸ್ತುತ ವೇಣುಮಾಧವನ್ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ವೇಣುಮಾಧವ್ ಅವರು ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟರಾಗಿದ್ದು, ಸುಮಾರು 170 ಸಿನಿಮಾಗಳಿಗಿಂತಲೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. 1996 ರಲ್ಲಿ ಸಿನಿರಂಗ ಪ್ರವೇಶಿಸಿದ ಅವರು 2016 ರಲ್ಲಿ ಕೊನೆಯದಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸತತವಾಗಿ ಆನೋರಾಗ್ಯ ಕಾಡಿದ ಕಾರಣ ಅವರು ಚಿತ್ರಗಳನ್ನು ನಟಿಸುವುದು ನಿಲ್ಲಿಸಿದ್ದರು.

ರಾಜಕೀಯದ ಬಗ್ಗೆಯೂ ಆಸಕ್ತಿ ಹೊಂದಿರುವ ಅವರು ಕಳೆದ ಡಿಸೆಂಬರ್‌ನಲ್ಲಿ ತೆಲಂಗಾಣದ ಕೋಡದ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರವನ್ನೂ ಸಲ್ಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+