'ಮೂಲ ಮರೆಯಬೇಡಿ, ಟಿಡಿಪಿ ಇಲ್ಲದಿದ್ದರೆ, ಕೆಸಿಆರ್ ಎಲ್ಲಿರುತ್ತಿದ್ದರು?' ನಾಯ್ಡು ಪ್ರಶ್ನೆ!

ಹೈದರಾಬಾದ್, ನವೆಂಬರ್ 30: "ನಿಮ್ಮ ಮೂಲವನ್ನು ಎಂದಿಗೂ ಮರೆಯಬೇಡಿ. ತೆಲುಗು ದೇಶಂ ಪಕ್ಷ(ಟಿಡಿಪಿ) ಇಲ್ಲದಿದ್ದರೆ ಕೆ ಚಂದ್ರಶೇಖರ್ ರಾವ್ ಎಲ್ಲಿರುತ್ತಿದ್ದರು?" ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.

ತೆಲಂಗಾಣದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, 'ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷ ಮತ್ತು ನಾಯ್ಡು ಅವರಿಗೇನು ಕೆಲಸ? ಅವರು ಇಲ್ಲಿ ತಲೆ ಹಾಕುವ ಅಗತ್ಯವಿಲ್ಲ' ಎಂದಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಮಾತಿಗೆ ಪ್ರತಿಕ್ರಿಯಿಸಿದರು.

ತೆಲಂಗಾಣದಲ್ಲಿ ನಮಗೆ ಕೆಲಸವಿಲ್ಲ ಎಂದು ಕೆಸಿಆರ್ ಹೇಗೆ ಹೇಳುತ್ತಾರೆ. ತೆಲುಗುದೇಶಂ ಪಕ್ಷವಿಲ್ಲದೆ ಕೆಸಿಆರ್ ಎಲ್ಲಿರುತ್ತಿದ್ದರು? ಎಂದಿಗೂ ಮೂಲವನ್ನು ಮರೆಯಬಾರದು' ಎಂದು ನಾಯ್ಡು ಉತ್ತರಿಸಿದರು.

Don’t forget origins! Without TD, where is KCR? says, Chandrababu Naidu

119 ಕ್ಷೇತ್ರಗಳ ತೆಲಂಗಾಣ ವಿಧಾನಸಭೆ ಚುನಾವಣೆ ಡಿಸೆಂಬರ್ 7 ರಂದು ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ಇಲ್ಲಿ ಟಿಡಿಪಿಯು ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+