ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವ ಆಟೋದಲ್ಲಿ ಸಾಗಣೆ

ಹೈದರಾಬಾದ್, ಜುಲೈ 12 : ಕೊರೊನಾ ವೈರಸ್ ಸೋಂಕಿತರು ಮೃತಪಟ್ಟರೆ ಶವ ಸಂಸ್ಕಾರ ಮಾಡುವ ವಿಧಾನದ ಕುರಿತು ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಹೈದರಾಬಾದ್‌ನಲ್ಲಿ ಶವವನ್ನು ಆಟೋದಲ್ಲಿ ತೆಗೆದುಕೊಂಡು ಹೋದ ಪ್ರಕರಣವೊಂದು ನಡೆದಿದೆ.

ತೆಲಂಗಾಣದ ನಿಜಾಮುದ್ದೀನ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಆಟೋದಲ್ಲಿ ಸಾಗಣೆ ಮಾಡಲಾಗಿದೆ. ಆದರೆ, ಶವ ತೆಗೆದುಕೊಂಡು ಹೋದ ಸಂಬಂಧಿಕರು ಪಿಪಿಇ ಕಿಟ್ ಧರಿಸಿರಲಿಲ್ಲ.

ನಿಜಾಮುದ್ದೀನ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಿಂದ ಸಂಬಂಧಿಕರು ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅಂಬ್ಯುಲೆನ್ಸ್‌ಗಾಗಿ ಕಾಯದೇ ಶವವನ್ನು ತೆಗೆದುಕೊಂಡು ಹೋಗಿದ್ದಾರೆ.

body

ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ. ಎನ್. ರಾವ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಮೃತ ವ್ಯಕ್ತಿಯ ಸಂಬಂಧಿಕರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಶವವನ್ನು ಕೊಡುವಂತೆ ಮನವಿ ಮಾಡಿದ್ದರು. ಆದರೆ, ಅವರು ಅಂಬ್ಯುಲೆನ್ಸ್ ಬರುವ ತನಕ ಕಾಯಲಿಲ್ಲ" ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 33,402. 348 ಜನರು ಇದುವರೆಗೂ ಮೃತಪಟ್ಟಿದ್ದಾರೆ. ಹೈದರಾಬಾದ್ ನಗರದಲ್ಲಿಯೇ 25,774 ಸೋಂಕಿತರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+