• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟಿ ಶ್ವೇತಾ ಬಸು ಪ್ರಸಾದ್ ಗೆ ಬಿಡುಗಡೆ ಭಾಗ್ಯ

By Mahesh
|

ಹೈದರಾಬಾದ್, ಅ.30: ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ನಟಿ ಶೇತಾ ಬಸು ಪ್ರಸಾದ್ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಪುನರ್ವಸತಿ ಕೇಂದ್ರದಲ್ಲಿರುವ ಶ್ವೇತಾ ಅವರು ಮನೆಗೆ ತೆರಳಬಹುದು ನಾಂಪಲ್ಲಿಯ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.

23 ವರ್ಷ ವಯಸ್ಸಿನ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಶ್ವೇತಾ ಅವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪ ಹೊತ್ತಿದ್ದಾರೆ. ಕೆಳ ಹಂತದ ನ್ಯಾಯಾಲಯ ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸುವಂತೆ ಸೆ.30,2014ರಂದು ಆದೇಶಿಸಿತ್ತು.

ಆದರೆ, ಶ್ವೇತಾ ಅವರ ತಾಯಿ ಆಕೆಯನ್ನು ತಮ್ಮ ಬಳಿ ಇರಿಸಿಕೊಳ್ಳಲು ಅವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಶ್ವೇತಾಗೆ ಮುಕ್ತಿ ನೀಡಿದೆ. [ವೇಶ್ಯಾಗೃಹದಲ್ಲಿದ್ದ ನಟಿ ಶ್ವೇತಾ ಬಸು ಬಂಧನ]

ಹೈದರಾಬಾದಿನ ಬಂಜಾರ ಹಿಲ್ಸ್ ನ ಸ್ಟಾರ್ ಹೋಟೆಲ್ ವೊಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಶ್ವೇತಾ ಬಸು ಸಿಕ್ಕಿಬಿದ್ದಿದ್ದರು. ಶ್ವೇತಾ, ಪಿಂಪ್ ಬಾಲು, ಉದ್ಯಮಿ ಸೇರಿದಂತೆ ಅನೇಕರನ್ನು ಹೈದರಾಬಾದಿನ ಬಂಜಾರಾ ಹಿಲ್ಸ್ ಠಾಣೆ ಪೊಲೀಸರು ಬಂಧಿಸಲಾಗಿತ್ತು.

ಈ ಹಿಂದೆ ದಕ್ಷಿಣದ ಹಿರಿಯ ನಟಿ ಕಿನ್ನೆರಾ, ಯಮುನಾ ಸೇರಿದಂತೆ ಭುವನೇಶ್ವರಿ, ಸಯೀರಾ ಭಾನು, ಜ್ಯೋತಿ,ತೆಲುಗು ಕಿರುತೆರೆ ನಟಿ ಶ್ರಾವಣಿ ಸೇರಿದಂತೆ ಹಲವು ಹತ್ತು ಮಂದಿ ತಾರೆಗಳು ವೇಶ್ಯಾವಾಟಿಕೆ ಜಾಲದಲ್ಲಿ ಸಿಕ್ಕಿಬಿದ್ದಿದ್ದರು.

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಅವರು ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಆರು ತಿಂಗಳ ಕಾಲ ಗೃಹ ಬಂಧನ ಅನುಭವಿಸಿದರೆ ನನ್ನ ಮಗಳ ವೃತ್ತಿ ಬದುಕಿನ ಕಥೆ ಏನು ಎಂದು ಶ್ವೇತಾ ಅವರ ತಾಯಿ ಶರ್ಮಿಷ್ಠಾ ಅವರು ಕೋರ್ಟ್ ಮೊರೆ ಹೊಕ್ಕಿದ್ದು ಫಲ ನೀಡಿದೆ.

ಟಾಲಿವುಡ್ ಹಾಗೂ ಬಾಲಿವುಡ್ ನ ಅನೇಕ ನಟ, ನಟಿಯರು, ಗಣ್ಯರು ಶ್ವೇತಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಶ್ವೇತಾ ಬಸು ಅವರ ಪ್ರಕರಣದ ಬಗ್ಗೆ ಮಾಧ್ಯಮಗಳು ಅತಿಯಾಗಿ ಸ್ಪಂದಿಸಿವೆ ಎಂದು ಕಿಡಿಕಾರಿದ್ದರು.

ಶ್ವೇತಾಗೆ ಬಾಯ್ಬಿಡದಂತೆ ಬೆದರಿಕೆ?: ಮುಂಬೈ ಮೂಲದ ಉದ್ಯಮಿ ಜೊತೆ ಸಿಕ್ಕಿಬಿದ್ದ ನಂತರ ಶ್ವೇತಾ ತನ್ನ ಗೋಳಿನ ಕಥೆ ಹೇಳಿಕೊಂಡು ಚಿತ್ರರಂಗದಲ್ಲಿ ನನ್ನಂತೆ ಅನೇಕ ನಾಯಕಿಯರ ಬದುಕು ಹಾಳಾಗಿದೆ. ಇದೆಕ್ಕೆಲ್ಲ ಕಾರಣರಾದವರು ನಮ್ಮ ಇಂಡಸ್ಟ್ರಿಯಲ್ಲೇ ಇದ್ದಾರೆ ಇವರಿಗೆ ರಾಜಕಾರಣಿಗಳ ಬೆಂಬಲವಿದೆ ಎಂದಿದ್ದರು. ಅದರೆ, ವಿಚಾರಣೆ ವೇಳೆ ಶ್ವೇತಾ ತನ್ನನ್ನು ಈ ಪಾಪಕೂಪಕ್ಕೆ ತಳ್ಳಿದವರ ಹೆಸರು ಬಹಿರಂಗಪಡಿಸಿದರೋ ಇಲ್ಲವೋ ಎಲ್ಲೂ ವರದಿಯಾಗಿಲ್ಲ. ಶ್ವೇತಾ ಬಾಯ್ಬಿಟ್ಟರೆ ಅನೇಕ ಗಣ್ಯರ ಮನೆ ಹೊತ್ತಿ ಉರಿಯುವ ಶಂಕೆಯಂತೂ ಇದ್ದೆ ಇದೆ. ಪುನರ್ವಸತಿ ಕೇಂದ್ರದಿಂದ ಮನೆಗೆ ತೆರಳುವ ಶ್ವೇತಾಗೆ ಪುಢಾರಿಗಳ ಬೆದರಿಕೆಯೂ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National award winning actress Shweta Basu Prasad, who was held on charges of prostitution by the Hyderabad police, can now heave a sigh of relief, as sessions court in Nampally has ordered her release from the rescue house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more