ಅಪ್ರಾಪ್ತ ಯುವತಿಯರ ಮಾರಾಟ ಜಾಲ ಪತ್ತೆ, 8 ಅರಬ್ ಶೇಖ್ ಗಳ ಬಂಧನ

Subscribe to Oneindia Kannada

ಹೈದರಾಬಾದ್, ಸೆಪ್ಟೆಂಬರ್ 21: ಮದುವೆ ಮಾಡುವ ನೆಪದಲ್ಲಿಅಪ್ರಾಪ್ತ ಹೆಣ್ಣು ಮಕ್ಕಳನ್ನು ಅರಬ್ ಶೇಖ್ ಗಳಿಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಹೈದರಾಬಾದ್ ಪೊಲೀಸರು ಭೇದಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 80 ವರ್ಷದ ವೃದ್ಧ ಶೇಖ್ ಸೇರಿ 8 ಮಂದಿ ಅರಬ್ ಶೇಖ್‌ಗಳು, 4 ಜನ ಮುಸ್ಲಿಂ ಧರ್ಮಗುರುಗಳು, 4 ಮಂದಿ ಲಾಡ್ಜ್ ಮಾಲೀಕರು ಹಾಗೂ ಮದುವೆ ಬ್ರೋಕರ್‌ಗಳನ್ನು ಬಂಧಿಸಲಾಗಿದೆ. ಬಂಧಿತ ಶೇಖ್‌ಗಳಲ್ಲಿ ಐವರು ಒಮನ್ ಹಾಗೂ ಮೂವರು ಕತಾರ್ ನಿವಾಸಿಗಳು ಎಂದು ತಿಳಿದು ಬಂದಿದೆ.

ಈ ಶೇಖ್‌ಗಳು ಒಪ್ಪಂದದ ಆಧಾರದ ಮೇಲೆ ಅಪ್ರಾಪ್ತರನ್ನು ವರಿಸುತ್ತಿದ್ದರು ಎಂದು ಗೊತ್ತಾಗಿದೆ. ಮುಸ್ಲಿಂ ಧರ್ಮದ ಬಡ ಹೆಣ್ಣು ಮಕ್ಕಳನ್ನು ಹಣದ ಆಮಿಷಕ್ಕೆ ಬೀಳಿಸಿ ಮದುವೆ ಬ್ರೋಕರ್ ಗಳು ಅರಬ್ ಶೇಖ್ ಗಳಿಗೆ ಮದುವೆ ಮಾಡಿ ಮಾರಾಟ ಮಾಡುತ್ತಿದ್ದರು. ಇವರಿಗೆ ಮುಸ್ಲಿಂ ಧರ್ಮಗುರುಗಳು ಸಾಥ್ ನೀಡುತ್ತಿದ್ದರು ಎನ್ನಲಾಗಿದೆ.

 'Contract marriage' racket busted in Hyderabad, 8 sheikhs arrested

ಮಾರಾಟ ಜಾಲ ಹೊರ ಬಂದಿದ್ದೇಗೆ?

ಸೌದಿ ಅರೇಬಿಯಾದ ಒಮಾನಿ ಶೇಖ್ ಫಲಕುಮ್ಮಾ ಮತ್ತು ಚಂದ್ರಾಯನ್ ಗುತ್ತಾ ಎಂಬ ಇಬ್ಬರು ಅಪ್ರಾಪ್ತೆಯರನ್ನು ಮದುವೆಯಾಗಿದ್ದರು.

   Hyderabad : Good News For Telangana State Government Employees | Oneindia Kananda

   ಒಮಾನಿ ಶೇಖ್ ವೀಸಾ ಪಡೆದುಕೊಳ್ಳಲು ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರಲಿಲ್ಲ. ಈ ಸಂಬಂಧ ಮುಂಬೈನ ಖಾಜಿ ಮುಖ್ಯಸ್ಥ ಫರೀದ್ ಅಹ್ಮದ್ ಖಾನ್‌ ರನ್ನು ಸೋಮವಾರ ವಶಕ್ಕೆ ಪಡೆದುಕೊಳ್ಳಲಾಗಿತ್ತು.

   ಇದನ್ನು ಬೆನ್ನತ್ತಿದ ಪೊಲೀಸರಿಗೆ ಭಯಾನಕ ವಿಚಾರಗಳು ಗೊತ್ತಾಗಿವೆ. ಮದುವೆಯಾಗಿದ್ದ ಅಪ್ರಾಪ್ತ ಹುಡುಗಿಯರ ಪೋಷಕರು ಮದುವೆ ಮಾಡಿಕೊಡುವ ಒಪ್ಪಂದಕ್ಕೆ ಶೇಖ್‌ ರಿಂದ ಹಣ ಪಡೆದುಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

   ಇನ್ನ ಹುಡುಗಿಯರ ಮೇಲೆ ಖಾಜಿಗಳು ಮಾತ್ರವಲ್ಲದೆ ಬೇರೆ ಪುರುಷರೂ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ತಿಳಿದು ಬಂದಿದೆ.

   ದಾಳಿಯಲ್ಲಿ 12 ಬಾಲಕಿಯರನ್ನು ರಕ್ಷಣೆ ಮಾಡಲಾಗಿದ್ದು, 20 ಜನರನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಭಾರತೀಯ ದಂಡ ಸಂಹಿತೆ 420 , 370, ಅತ್ಯಾಚಾರ, ಫೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Hyderabad police have busted a racket of 'contract marriage' of local women and minor girls with men from the Middle East and Gulf countries in the city. The police have arrested 20 persons, including eight foreign nationals, in this connection, a senior official said.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ