ಹಿಂದೂ ದೇವರುಗಳ ಅವಹೇಳನ: ವ್ಯಕ್ತಿ ವಿರುದ್ಧ ಕೇಸ್

Posted By:
Subscribe to Oneindia Kannada

ಹೈದರಾಬಾದ್, ಸೆಪ್ಟೆಂಬರ್ 8: ಹಿಂದೂ ದೇವರುಗಳಿಗೆ ಅಪಮಾನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಹೇರ್ ಕಟಿಂಗ್ ಸಲೂನ್ ನ ಮಾಲೀಕನ ವಿರುದ್ಧ ಸಯೀದಾಬಾದ್ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ.

ಹಿಂದೂ ದೇವರುಗಳಿಗೆ ವಿವಿಧ ಹೇರ್ ಸ್ಟೈಲ್ ಗಳನ್ನು ಜೋಡಿಸಿರುವ ಚಿತ್ರಗಳನ್ನು ತನ್ನ ಸೆಲೂನ್ ನಲ್ಲಿ ಹಾಕಿದ್ದ ಜಾವೇದ್ ಹಬೀಬ್ ಎಂಬಾತ, ತನ್ನ ಹೇರ್ ಸ್ಟೈಲ್ ಸಲೂನ್ ಗೆ ದೇವರುಗಳೂ ಬಂದು ಹೋಗುತ್ತಾರೆಂದು ಅಡಿಬರಹವನ್ನೂ ಹಾಕಿದ್ದ.

Case Registered Against Jawed Habib For 'Insulting' Hindu Gods

ಇದರ ವಿರುದ್ಧ ಸಯೀದಾಬಾದ್ ಪೊಲೀಸ್ ಠಾಣೆಯಲ್ಲಿ ಕೆ. ಕರುಣಾ ಸಾಗರ್ ಎಂಬ ವಕೀಲರು ಕೇಸು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಪ್ರಚೋದನಾಕಾರಿ ಕೃತ್ಯ ಮಾಡಿರುವುದು) ಪ್ರಕಾರ, ಜಾವೇದ್ ವಿರುದ್ಧ ಕೇಸು ದಾಖಲಾಗಿದೆ.

ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ''ನಾವು ಈ ಬಗ್ಗೆ ಕಾನೂನಾತ್ಮಕ ಸಲಹೆಗಳನ್ನು ಪಡೆಯುತ್ತೇವೆ. ಆನಂತರ, ಅವರ ವಿರುದ್ಧ ಯಾವ ಕ್ರಮಗೊಳ್ಳಬೇಕೋ ಅದೇ ಕ್ರಮಕ್ಕಾಗಿ ಆಗ್ರಹಿಸುತ್ತೇವೆ'' ಎಂದು ಕರುಣಾ ಸಾಗರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A case on Friday was registered against hair stylist Jawed Habib following a complaint accusing him of "insulting and demeaning" Hindu Gods in a newspaper advertisement for his salon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ