ಮೋದಿ ಹೊಗಳಿದ್ದ ಪವನ್ ವಿರುದ್ಧ ಬಿಜೆಪಿಗೇಕೆ ಸಿಟ್ಟು?

Posted By:
Subscribe to Oneindia Kannada

ಹೈದರಾಬಾದ್, ಡಿಸೆಂಬರ್ 21: ಪ್ರಧಾನಿ ಮೋದಿ ಅವರಿಂದ ಹೊಗಳಿಸಿಕೊಂಡಿದ್ದ ಜನಸೇನಾ ಮುಖ್ಯಸ್ಥ ಮತ್ತು ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ.

ನೋಟುಗಳ ನಿಷೇಧ, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ನೀತಿ, ದಲಿತರ ಮೇಲಿನ ದೌರ್ಜನ್ಯ, ರೋಹಿತ್ ವೆಮುಲಾ ಪ್ರಕರಣ ಸೇರಿದಂತೆ ಅನೇಕ ವಿಷಯಗಳಲ್ಲಿ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ತೀವ್ರವಾಗಿ ಖಂಡಿಸಿ ಪವನ್ ಕಲ್ಯಾಣ್ ಅವರು ಟ್ವೀಟ್ ಮಾಡಿದ್ದರು.[ಪವನ್ ಮೀಟ್ ಮಾಡೋಕೆ ಬಂದಿದ್ದೆ ಬ್ರದರ್: ಎಚ್ಡಿಕೆ]

ಬಿಜೆಪಿ ವಿರುದ್ಧ ಹರಿಹಾಯ್ದಿದ್ದ 'ಪವರ್ ಸ್ಟಾರ್' ಪವನ್ ಕಲ್ಯಾಣ್ ವಿರುದ್ಧ ಆಂಧ್ರಪ್ರದೇಶ ಬಿಜೆಪಿ ಉಸ್ತುವಾರಿ ಸಿದ್ದಾರ್ಥ್ ನಾಥ್ ಸಿಂಗ್ ಅವರು ತಿರುಗಿಬಿದ್ದಿದ್ದಾರೆ. [ಪವರ್ ಸ್ಟಾರ್ ಗೆ ಮೋದಿಯಿಂದ ಭಾರಿ 'ಗಿಫ್ಟ್'?]

ಅವರು ಮೊದಲು ತನ್ನ ಮೂಲಭೂತ ಹಕ್ಕನ್ನು ಪಡೆಯಲು ಪ್ರಯತ್ನಿಸಲಿ, ಸಮಸ್ಯೆ ಬಗ್ಗೆ ಸರಿಯಾದ ಅರಿವು ಪಡೆದುಕೊಂಡು ಮಾತನಾಡಲಿ, ಸಂವಿಧಾನ, ಸರ್ಕಾರದ ಬಗ್ಗೆ ತಿಳಿದುಕೊಳ್ಳಲಿ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ಯಾಕೇಜ್ ಬಗ್ಗೆ ಮಾತನಾಡಿದ್ದ ಪವನ್ ಅವರು ನಂತರ ವಿಷಯಾಂತರ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್

ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್

ಆಂಧ್ರದಲ್ಲಿ ಟಿಡಿಪಿ ಗೆಲುವಿಗೆ ಕಾರಣರಾಗಿದ್ದ ಪವನ್ ಅವರು ಜನ ಸೇನಾ ಪಕ್ಷದ ಮೂಲಕ ರಾಜ್ಯದ ಹಿತಾಸಕ್ತಿಗಾಗಿ ದುಡಿಯುತ್ತಿದ್ದಾರೆ. ಆದರೆ, ಬಿಜೆಪಿ ಟಿಕೆಟ್ ಕೂಡಾ ನಿರಾಕರಿಸಿ ಚುನಾವಣೆ ಸ್ಪರ್ಧಿಸದೇ ಜನ ಹಿತಕ್ಕಾಗಿ ಸಮಾವೇಶಗಳನ್ನು ನಡೆಸಿದ್ದಾರೆ. ಮೋದಿ ಅವರಿಂದಲೂ ಹೊಗಳಿಕೆ ಪಡೆದುಕೊಂಡಿದ್ದ ಪವನ್ ಗೆ ಈಗ ಬಿಜೆಪಿ ಪಂಚ್ ನೀಡಿದೆ.

ಊರ್ಜಿತ್ ಪಟೇಲ್ ವಿರುದ್ಧ ಟ್ವೀಟ್ ಮಾಡಿದ್ದ ಪವನ್

ಊರ್ಜಿತ್ ಪಟೇಲ್ ವಿರುದ್ಧ ಟ್ವೀಟ್ ಮಾಡಿದ್ದ ಪವನ್

ಬ್ಯಾಂಕಿನಿಂದ ಹಣ ಪಡೆಯಲು ಕ್ಯೂ ನಲ್ಲಿ ನಿಂತು ಮೃತಪಟ್ಟ ಕರ್ನೂಲ್ ಜಿಲ್ಲೆಯ ಬಾಲರಾಜು ಎಂಬಾತನ ಬಗ್ಗೆ ಉದಾಹರಣೆ ನೀಡುತ್ತಾ, ಊರ್ಜಿತ್ ಪಟೇಲ್ ಅವರ ವಿರುದ್ಧ ಪವನ್ ಕಿಡಿ ಕಾರಿದ್ದಾರೆ.ನೋಟುಗಳ ಅಮಾನ್ಯತೆಯಿಂದಾಗಿ ಜನ ಸಾಮಾನ್ಯರಿಗೆ ಆಗಿರುವ ತೊಂದರೆಗಳನ್ನು ವಿವರಿಸಿದ್ದಾರೆ.

ಆಂಧ್ರದ ಪವನ್ ಕಲ್ಯಾಣ್ ಟ್ವೀಟ್

ಆಂಧ್ರಪ್ರದೇಶದ ಸ್ಥಿತಿ ಗತಿ ಪವನ್ ಕಲ್ಯಾಣ್ ಟ್ವೀಟ್

ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡಿ

ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ಏನಾಯ್ತು ಎಂದು ಪ್ರಶ್ನಿಸಿರುವ ಪವನ್

ನೋಟ್ ಬ್ಯಾನ್ ಬಗ್ಗೆ ಪವನ್ ಟ್ವೀಟ್

ನೋಟ್ ಬ್ಯಾನ್ ಬಗ್ಗೆ ಪವನ್ ಟ್ವೀಟ್

ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಟ್ವೀಟ್

ಕೇಂದ್ರ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳ ಸಮರ ಸಾರಿದ ಪವನ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bharatiya Janata Party hit back at actor and Jana Sena chief Pawan Kalyan for attacking attacked the Centre on various issues including demonetization, suicide of Dalit scholar Rohit Vemula and other issues.
Please Wait while comments are loading...