ಬಾಲಕೃಷ್ಣ, ಚಂದ್ರಬಾಬು ನಾಯ್ಡು ಮೊಮ್ಮಗನಿಗೆ ನಾಮಕಾರಣ
ಹೈದರಾಬಾದ್, ಮೇ.29: ನಟ ಬಾಲಕೃಷ್ಣ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಮೊಮ್ಮಗನಿಗೆ ಮುದ್ದಾದ ಹೆಸರಿಡಲಾಗಿದೆ. ದಿವಂಗತ ಎನ್ ಟಿ ರಾಮರಾವ್ ಅವರ ಜನ್ಮ ವಾರ್ಷಿಕೋತ್ಸವದ ನೆನಪಿನಲ್ಲಿ ಅವರ ಮರಿ ಮಗನಿಗೆ 'ದೇವಾಂಶ್' ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಅವರ ಪುತ್ರ ರಿತೇಶ್ ದೇಶ್ ಮುಖ್ ಅವರು ತಮ್ಮ ಪುತ್ರ ರಿಯಾನ್ ಚಿತ್ರಗಳನ್ನು ಸಾರ್ವಜನಿಕವಾಗಿ ಹೊರ ಹಾಕಿದ್ದರು. [ರಿತೇಶ್-ಜೆನಿಲಿಯಾ ಪ್ರೀತಿಯ ಸಂಕೇತ ರಿಯಾನ್]

ಇದೇ ರೀತಿಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಜನಪ್ರಿಯ ನಟರಾಗಿದ್ದ ದಿವಂಗತ ಎನ್ ಟಿ ರಾಮರಾವ್ ಅವರ 92ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಮಗುವಿಗೆ ಹೆಸರಿಡಲಾಗಿದೆ.
ನಟ ಬಾಲಕೃಷ್ಣ ಅವರ ಹಿರಿಯ ಪುತ್ರಿ ಬ್ರಾಹ್ಮಿಣಿ ಹಾಗೂ ಚಂದ್ರಬಾಬು ನಾಯ್ಡು ಅವರ ಮಗ ಲೋಕೇಶ್ ಅವರ ಮಗುವಿಗೆ ಹೆಸರಿಡುವ ಮುನ್ನ ಅನೇಕ ಬಾರಿ ಯೋಚಿಸಿ, ಅನೇಕ ಜ್ಯೋತಿಷಿಗಳ ಸಲಹೆ ಪಡೆದು ಮುತ್ತಜ್ಜನ ಜನ್ಮ ದಿನದಂದೇ ನಾಮಕಾರಣ ಮಾಡಲಾಗಿದೆ. [ಬಿಜೆಪಿ ಕೈಹಿಡಿದ ಎನ್ ಟಿ ರಾಮರಾವ್ ಪುತ್ರಿ ಪುರಂದರೇಶ್ವರಿ]

ಮೊಮ್ಮಗ ಹುಟ್ಟಿದ ನಂತರ ಬದುಕು ಬಂಗಾರವಾಯಿತು ಎಂದು ಅಜ್ಜ ನಂದಮೂರಿ ಬಾಲಕೃಷ್ಣ ಹಾಗೂ ಚಂದ್ರಬಾಬು ನಾಯ್ಡು ನಂಬಿದ್ದಾರೆ. ತಾರೆಗಳ ಕುಟುಂಬದಲ್ಲಿ ಜನಿಸಿರುವ ದೇವಾಂಶ್ ಮುಂದೆ ಸಿನಿಮಾ ರಂಗ ಹಾಗೂ ರಾಜಕೀಯ ರಂಗ ಎರಡರಲ್ಲೂ ಬೆಳಗಲಿ ಎಂದು ಅಜ್ಜಂದಿರು ಆಶೀರ್ವದಿಸಿದ್ದಾರೆ.
ಇದಕ್ಕೂ ಮುನ್ನ ತೆಲುಗು ದೇಶಂ ಪಾರ್ಟಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಬಾಲಕೃಷ್ಣ ಅವರು ಹೈದರಾಬಾದಿನ ಗಂಡಿಪೇಟ್ ನಲ್ಲಿರುವ ಮಹಾನಾಡು ಕಚೇರಿಯ ಬಳಿ ದಿವಂಗತ ಎನ್ಟಿಆರ್ ಅವರ 92ನೇ ಜನ್ಮ ದಿನೋತ್ಸವ ಆಚರಿಸಲಾಯಿತು.












Click it and Unblock the Notifications