ಚಿತ್ತೂರು: ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ, ಸ್ಥಳದಲ್ಲೇ 20 ಬಲಿ

Subscribe to Oneindia Kannada

ಹೈದರಾಬಾದ್, ಏಪ್ರಿಲ್ 21: ಜನಸಂದಣಿಯ ಮೇಲೆ ಲಾರಿ ಹರಿದ ಪರಿಣಾಮ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ದುರಂತ ಘಟನೆ ತಿರುಪತಿಯಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಚಿತ್ತುರು ಜಿಲ್ಲೆಗೆ ಸೇರಿದ ಯೆರ್ಪೆಡು ಎಂಬಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ಕರೆಂಟ್ ಕಂಬಕ್ಕೆ ಗುದ್ದಿ ನಂತರ ಜನಜಂಗುಳಿಯ ಮೇಲೆ ಹರಿದಿದೆ. ಪರಿಣಾಮ 20ಕ್ಕೂ ಹೆಚ್ಚು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳ ತಿರುಪತಿಯಿಂದ 20 ಕಿಲೋಮೀಟರ್ ದೂರದಲ್ಲಿದೆ.[ತೆಲಂಗಾಣದಲ್ಲಿ ಬಿಸಿಲಿಗೆ 30ಬಲಿ, ಆಂಧ್ರದಲ್ಲೂ ಜೀವ ಹಾನಿ]

At least 20 killed after lorry ran over crowd near Tirupati

ಪ್ರತ್ಯಕ್ಷದರ್ಶಿಗಳ ಪ್ರಕಾರ ಆರಂಭದಲ್ಲಿ ಲಾರಿ ಕರೆಂಟ್ ಕಂಬಕ್ಕೆ ಗುದ್ದಿದೆ. ಇದರಿಂದ ಕರೆಂಟ್ ಶಾಕ್ ಗೆ ಒಳಗಾಗಿ 14ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತದನಂತರ ಲಾರಿ ಅಂಗಡಿಯೊಂದರ ಮೇಲೆ ನುಗ್ಗಿದೆ. ಈ ಅಂಗಡಿ ಮುಂಭಾಗ ಜನ ಸೇರಿದ್ದರು. ಇದರಿಂದ ಕನಿಷ್ಟ 6 ಜನ ಸಾವನ್ನಪ್ಪಿದ್ದಾರೆ.[ಬೀದರ್ ನಲ್ಲಿ ಹಳಿ ತಪ್ಪಿದ ರೈಲು: ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ]

ಸದ್ಯದ ಮಾಹಿತಿ ಪ್ರಕಾರ 20 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಿರುಪತಿ ಮತ್ತು ಕಾಳಹಸ್ತಿಯ ಸರಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
More than 20 people have been killed and as many injured after a lorry first hit an electric pole and then rammed into a crowd at Yerpedu in Chittoor district of Andhra Pradesh which is 20 kilometer away from Tirupathi.
Please Wait while comments are loading...