ತೆಲಂಗಾಣದಲ್ಲಿ ಕೆಸಿಆರ್ ಗೆ ಬೆಂಬಲ ಸೂಚಿಸಿದ ಅಸಾದುದ್ದಿನ್ ಓವೈಸಿ
Recommended Video

ಹೈದರಾಬಾದ್, ಡಿಸೆಂಬರ್ 11: ತೆಲಂಗಾಣ ವಿಧಾನಸಭೆ ಚುನಾವಣೆಯ ನಂತರ ಮತ್ತು ಫಲಿತಾಂಶಕ್ಕೂ ಮುನ್ನಾದಿನ ತೆಲಂಗಾಣದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಐಎಂಐಎಂ ಮುಖಂಡ ಮತ್ತು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ, ತಾವು ತೆಲಂಗಾಣ ರಾಷ್ಟ್ರ ಸಮಿತಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಮೊದಲಿನಿಂದಲೂ ಕೆಸಿಆರ್ ಜೊತೆ ಉತ್ತಮ ಬಾಂಧವ್ಯವನ್ನೇ ಹೊಂದಿರುವ ಓವೈಸಿ, ಚುನಾವಣೆಯ ಪ್ರಚಾರದ ಸಮಯದಲ್ಲೂ ಟಿಆರ್ ಎಸ್ ವಿರುದ್ಧ ಹೆಚ್ಚು ಮಾತನಾಡಿರಲಿಲ್ಲ.
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತೆಲಂಗಾಣದಲ್ಲಿ ಟಿಆರ್ ಎಸ್ ಗೆಲುವು ಸಾಧಿಸುವುದು ಖಚಿತ ಎಂದಿವೆ. ರಾಜಕೀಯ ಪಂಡಿತರ ಲೆಕ್ಕಾಚಾರವೂ ಅದೇ.

ಸೋಮವಾರ ತಮ್ಮ ಬುಲೆಟ್ ನಲ್ಲಿ ತೆರಳಿ ಕೆಸಿಆರ್ ಅವರನ್ನು ಭೇಟಿ ಮಾಡಿದ ಓವೈಸಿ ಬುಲೆಟ್ ಮೂಲಕ ಸುದ್ದಿಯಾಗಿದ್ದರು.
ಒಟ್ಟು 119 ಕ್ಷೇತ್ರಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 60. ಅದನ್ನು ಟಿಆರ್ ಎಸ್ ಸುಲಭವಾಗಿ ಪಡೆಯಬಹುದು. ಅಕಸ್ಮಾತ್ ಪಡೆಯದಿದ್ದರೂ, ಟಿಆರ್ ಎಸ್ ಗೆ ಬೆಂಬಲ ನೀಡುವ ಸೂಚನೆಯನ್ನು ಈಗಾಗಲೇ ಬಿಜೆಪಿಯೇ ನೀಡಿದೆ. ಜೊತೆಗೆ ಓವೈಸಿ ಬೆಂಬಲವೂ ಸಿಕ್ಕಿದೆ.
ತೆಲಂಗಾಣದಲ್ಲಿ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದರಿಂದ ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆದಿದೆ.
ಕಾಂಗ್ರೆಸ್ ಮತ್ತು ಟಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ತೆಲಂಗಾಣದಲ್ಲಿ ಬಹುಮತ ಪಡೆಯಲು ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.












Click it and Unblock the Notifications