ರಾಹುಲ್ ಗಾಂಧಿ ವಯನಾಡಿನಲ್ಲಿ ಗೆದ್ದಿದ್ದೇ ಮುಸ್ಲಿಮರಿಂದ: ಓವೈಸಿ

ಹೈದರಾಬಾದ್, ಜೂನ್ 10: ಕೇರಳದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೆರವಾಗಿದ್ದು ಅಲ್ಲಿನ ಮುಸ್ಲಿಂ ಮತಗಳು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಕೇರಳದಲ್ಲಿರುವ ಶೇ 40ರಷ್ಟು ಮುಸ್ಲಿಮರ ಮತಗಳಿಂದ ಅವರು ಗೆದ್ದಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.

'ಕಾಂಗ್ರೆಸ್ ನಾಯಕ (ರಾಹುಲ್ ಗಾಂಧಿ) ಸ್ವತಃ ಅಮೇಥಿಯಿಂದ ಸೋಲು ಕಂಡು, ವಯನಾಡ್‌ನಲ್ಲಿ ಗೆದ್ದಿದ್ದಾರೆ. ವಯನಾಡಿನ ಶೇ 40ರಷ್ಟು ಜನಸಂಖ್ಯೆ ಮುಸ್ಲಿಮರಲ್ಲವೇ?' ಎಂದು ಭಾನುವಾರ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಅಸಾದುದ್ದೀನ್ ಓವೈಸಿ ಹೇಳಿದರು.

ಹೈದರಾಬಾದ್, ಜೂನ್ 10: ಕೇರಳದ ವಯನಾಡು ಲೋಕಸಭೆ ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೆರವಾಗಿದ್ದು ಅಲ್ಲಿನ ಮುಸ್ಲಿಂ ಮತಗಳು ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಕೇರಳದಲ್ಲಿರುವ ಶೇ 40ರಷ್ಟು ಮುಸ್ಲಿಮರ ಮತಗಳಿಂದ ಅವರು ಗೆದ್ದಿದ್ದಾರೆ ಎಂದು ಓವೈಸಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ (ರಾಹುಲ್ ಗಾಂಧಿ) ಸ್ವತಃ ಅಮೇಥಿಯಿಂದ ಸೋಲು ಕಂಡು, ವಯನಾಡ್‌ನಲ್ಲಿ ಗೆದ್ದಿದ್ದಾರೆ. ವಯನಾಡಿನ ಶೇ 40ರಷ್ಟು ಜನಸಂಖ್ಯೆ ಮುಸ್ಲಿಮರಲ್ಲವೇ? ಎಂದು ಭಾನುವಾರ ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ಅಸಾದುದ್ದೀನ್ ಓವೈಸಿ ಹೇಳಿದರು. 1947ರ ಆಗಸ್ಟ್ 15ರಂದು ನಮ್ಮ ಹಿರೀಕರು ಇದು ಹೊಸ ಭಾರತ ಆಗಲಿದೆ ಎಂದು ಭಾವಿಸಿದ್ದರು. ಈ ಭಾರತ ಆಜಾದ್, ನೆಹರೂ, ಗಾಂಧಿ, ಅಂಬೇಡ್ಕರ್ ಮತ್ತು ಅವರ ಕೋಟ್ಯಂತರ ಹಿಂಬಾಲಕರದ್ದಾಗಲಿದೆ ಎಂದು ಭಾವಿಸಿದ್ದರು. ನಮ್ಮ ದೇಶದಲ್ಲಿ ನಮ್ಮ ಸ್ಥಾನಕ್ಕಾಗಿ ಈಗಲೂ ನಾನು ಭರವಸೆ ಹೊಂದಿದ್ದೇನೆ. ನಮಗೆ ನಿಮ್ಮ ಧರ್ಮಭಿಕ್ಷೆ ಬೇಡ. ನೀವು ಕೊಡುವ ಸೌಲಭ್ಯಗಳ ಅಡಿಯಲ್ಲಿ ನಾವು ಬದುಕುವುದು ನಮಗೆ ಬೇಡ ಎಂದರು.

'1947ರ ಆಗಸ್ಟ್ 15ರಂದು ನಮ್ಮ ಹಿರೀಕರು ಇದು ಹೊಸ ಭಾರತ ಆಗಲಿದೆ ಎಂದು ಭಾವಿಸಿದ್ದರು. ಈ ಭಾರತ ಆಜಾದ್, ನೆಹರೂ, ಗಾಂಧಿ, ಅಂಬೇಡ್ಕರ್ ಮತ್ತು ಅವರ ಕೋಟ್ಯಂತರ ಹಿಂಬಾಲಕರದ್ದಾಗಲಿದೆ ಎಂದು ಭಾವಿಸಿದ್ದರು. ನಮ್ಮ ದೇಶದಲ್ಲಿ ನಮ್ಮ ಸ್ಥಾನಕ್ಕಾಗಿ ಈಗಲೂ ನಾನು ಭರವಸೆ ಹೊಂದಿದ್ದೇನೆ. ನಮಗೆ ನಿಮ್ಮ ಧರ್ಮಭಿಕ್ಷೆ ಬೇಡ. ನೀವು ಕೊಡುವ ಸೌಲಭ್ಯಗಳ ಅಡಿಯಲ್ಲಿ ನಾವು ಬದುಕುವುದು ನಮಗೆ ಬೇಡ' ಎಂದರು.

ನೀವು ಕಾಂಗ್ರೆಸ್ ಅಥವಾ ಇತರೆ ಜಾತ್ಯತೀತ ಪಕ್ಷಗಳನ್ನು ಬಿಡುವ ಅಗತ್ಯವಿಲ್ಲ. ಆದರೆ, ಅವರಲ್ಲಿ ಶಕ್ತಿ, ಚಿಂತನೆಗಳಿಲ್ಲ ಎಂಬುದನ್ನು ನೆನಪಿಡಿ. ಅವರು ಕಠಿಣ ಕೆಲಸ ಮಾಡುವುದಿಲ್ಲ. ಬಿಜೆಪಿ ಸೋತಿದ್ದು ಎಲ್ಲಿ? ಪಂಜಾಬ್‌ನಲ್ಲಿ. ಅಲ್ಲಿ ಇರುವುದು ಯಾರು? ಸಿಖ್ಖರು. ಭಾರತದಲ್ಲಿ ಬಿಜೆಪಿ ಮತ್ತೆಲ್ಲಿಯೂ ಏಕೆ ಸೋತಿಲ್ಲ? ಅಲ್ಇರುವ ಪ್ರಾದೇಶಿಕ ಪಕ್ಷಗಳಿಂದಲೇ ಹೊರತು ಕಾಂಗ್ರೆಸ್‌ನಿಂದ ಅಲ್ಲ. ಕಾಂಗ್ರೆಸ್ ನಾಯಕನೇ ಅಮೇಥಿಯಲ್ಲಿ ಸೋತು ವಯನಾಡಿನಲ್ಲಿ ಗೆದ್ದಿದ್ದಾರೆ. ವಯನಾಡಿನ ಶೇ 40ರಷ್ಟು ಮುಸ್ಲಿಂ ಜನಸಂಖ್ಯೆಯಿಂದಲ್ಲವೇ? ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+