ಮಹಾರಾಷ್ಟ್ರ ಕೋರ್ಟಿನಿಂದ ಆಂಧ್ರ ಸಿಎಂ ನಾಯ್ಡು ವಿರುದ್ಧ ಬಂಧನ ವಾರೆಂಟ್

ಹೈದರಾಬಾದ್, ಸೆಪ್ಟೆಂಬರ್ 14: ಮಹಾರಾಷ್ಟ್ರ ನ್ಯಾಯಾಲಯವೊಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. 2010ರ ಬಬ್ಲಿ ಯೋಜನೆ ಗಲಭೆಗೆ ಸಂಬಂಧಿಸಿದಂತೆ ನಾಯ್ಡು ಹಾಗೂ ಇನ್ನಿತರ 15 ಮಂದಿ ವಿರುದ್ಧ ವಾರೆಂಟ್ ಜಾರಿಯಾಗಿದೆ.

ಧರ್ಮಾಬಾದ್ ಎಫ್ ಸಿ ಜೆಎಂ ನ್ಯಾಯಾಲಯವು, ನಾಯ್ಡು ಸೇರಿದಂತೆ ಎಲ್ಲಾ ಆರೋಪಿಗಳನ್ನು ಸೆಪ್ಟೆಂಬರ್ 21ರಂದು ವಿಚಾರಣೆಗೆ ಖುದ್ದು ಹಾಜರು ಪಡಿಸುವಂತೆ ಆದೇಶ ನೀಡಿದೆ.

Arrest warrant issued against Chandrababu Naidu in connection with Babli project agitation

2010ರಲ್ಲಿ ಮಹಾರಾಷ್ಟ್ರ ದ ಬಬ್ಲಿ ಯೋಜನೆ ತಾಣದಲ್ಲಿ ಪ್ರತಿಭಟನೆಗೆ ನಡೆಸಿ ಬಂಧನಕ್ಕೊಳಗಾಗಿದ್ದ ನಾಯ್ಡು ಅವರನ್ನು ಪುಣೆ ಜೈಲಿಗೆ ಕಳಿಸಲಾಗಿತ್ತು. ನಾಯ್ಡು ಅಲ್ಲದೆ, ಜಲಸಂಪನ್ಮೂಲ ಸಚಿವ ದೇವಿನೇನಿ ಉಮಾ ಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್ ಆನಂದ್ ಬಾಬು, ಮಾಜಿ ಶಾಸಕ ಜಿ ಕಮಲಾಕರ್ ಹಾಗೂ ಇನ್ನಿತರ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಕಾರ್ಯಕರ್ತರನ್ನು ಅಂದು ಬಂಧಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+