• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಗ ಪೊಲೀಸ್ ಅಧಿಕಾರಿ ಈಗ ಸಂಸದ, ಹಿರಿಯ ಅಧಿಕಾರಿಗಳಿಂದ ಸೆಲ್ಯೂಟ್

|

ಹೈದರಾಬಾದ್, ಮೇ 27 : ಆತ ತನ್ನ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ. ಈಗ ಆತ ರಾಜಕಾರಣಿಯಾಗಿ ಬದಲಾಗಿದ್ದು, ಹಿರಿಯ ಅಧಿಕಾರಿಗಳು ಸೆಲ್ಯೂಟ್ ಹೊಡೆಯಲು ಆರಂಭಿಸಿದ್ದಾರೆ. ಪೊಲೀಸ್ ಅಧಿಕಾರಿ ರಾಜಕಾರಣಿಯಾಗಿ ಬದಲಾದ ಕಥೆ ಇದು.

ಆಂಧ್ರ ಪ್ರದೇಶದ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಗೋರಂಟ್ಲಿ ಮಾಧವ್ 2019ರ ಲೋಕಸಭಾ ಚುನಾವಣೆಗೆ ನಿಂತು ಜಯಗಳಿಸಿದ್ದಾರೆ. ಜಿ.ಮಾಧವ್‌ರಿಂದ ಸೆಲ್ಯೂಟ್ ಹೊಡೆಸಿಕೊಳ್ಳುತ್ತಿದ್ದ ಅಧಿಕಾರಿಗಳು ಈಗ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

ಅನಂತಪುರ ಜಿಲ್ಲೆಯ ಹಿಂದೂಪುರ ಕ್ಷೇತ್ರದಿಂದ ವೈಎಸ್‌ಆರ್‌ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜಿ.ಮಾಧವ್ 1,40,748 ಮತಗಳ ಅಂತರದಿಂದ ಟಿಡಿಪಿ ಅಭ್ಯರ್ಥಿಯನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ. ಖಾಕಿ ತೊಟ್ಟಿದ್ದ ಅವರು ಈಗ ಖಾದಿ ತೊಟ್ಟು ಜನ ಸೇವೆಗೆ ಮುಂದಾಗಿದ್ದಾರೆ.

ಮೋದಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ ಜಗನ್

ಜಿ.ಮಾಧವ್ ಅವರಿಗೆ ಹಿರಿಯ ಅಧಿಕಾರಿ ಸಿಐಡಿಯ ಡಿಎಸ್‌ಪಿ ಮೆಹಬೂಬ್ ಬಾಷಾ ಅವರು ಸೆಲ್ಯೂಟ್ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿ.ಮಾಧವ್ ಅವರು ಬಾಷಾ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು. ಆದರೆ, ಚುನಾವಣೆ ಬಳಿಕ ಎಲ್ಲಾ ಬದಲಾಗಿದೆ.

ಜಗನ್ ರೆಡ್ಡಿ ದಿಗ್ವಿಜಯದ ಹಿಂದಿನ ಶಕ್ತಿ ಪ್ರಶಾಂತ್ ಕಿಶೋರ್

'ನಾನು ಮೊದಲು ನಮ್ಮ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದೆ. ಬಳಿಕ ಅವರು ನನಗೆ ಸೆಲ್ಯೂಟ್ ಹೊಡೆದರು. ನಾವು ಪರಸ್ಪರರನ್ನು ಗೌರವಿಸಿದ್ದೇವೆ' ಎಂದು ಜಿ.ಮಾಧವ್ ಸ್ಪಷ್ಟನೆ ನೀಡಿದ್ದಾರೆ.

ಹಲವು ಕಷ್ಟ ಎದುರಿಸಿದರು : 2018ರ ಡಿಸೆಂಬರ್‌ನಲ್ಲಿ ಜಿ.ಮಾಧವ್ ಸರ್ಕಲ್ ಇನ್ಸ್‌ಪೆಕ್ಟರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಬಯಸಿದ್ದರು. ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಆದರೆ, ಸರ್ಕಾರದಿಂದ ಅವರ ರಾಜೀನಾಮೆ ಅಗೀಕಾರವಾಗಲಿಲ್ಲ.

ಜನವರಿಯಲ್ಲಿ ವೈಎಸ್ಆರ್‌ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವುದಾಗಿ ಘೋಷಣೆ ಮಾಡಿತು. ಆದರೆ, ಅವರ ರಾಜೀನಾಮೆ ಅಂಗೀಕಾರವಾಗದ ಕಾರಣ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕರಿಸಿತು.

ಕೊನೆಗೆ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋದರು ಜಿ.ಮಾಧವ್. ಅರ್ಜಿಯ ವಿಚಾರರಣೆ ನಡೆಸಿದ ನ್ಯಾಯಮಂಡಳಿ ರಾಜೀನಾಮೆ ಅಂಗೀಕರಿಸಿ, ಸೇವೆಯಿಂದ ಅವರನ್ನು ಬಿಡುಗಡೆಗೊಳಿಸಿ ಎಂದು ಐಜಿಪಿಗೆ ಸೂಚನೆ ನೀಡಿತು.

English summary
Photo of CID DSP Mahboob Basha saluting to Gorantla Madhav goes viral on social media. Former Andhra Pradesh Circle Inspector Gorantla Madhav won the lok sabha elections 2019 from Hindupur seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X