ವಂಚನೆ ಆರೋಪ: ಆಮ್ ವೇ ಸಿಇಒ ಮತ್ತೆ ಬಂಧನ
ಹೈದರಾಬಾದ್, ಮೇ 29: ಹಣಕಾಸು ಅವ್ಯವಹಾರದ ಆರೋಪದ ಮೇಲೆ ಮತ್ತೊಮ್ಮೆ ಆಮ್ ವೇ ಇಂಡಿಯಾ ಮುಖ್ಯಸ್ಥ ವಿಲಿಯಂ ಸ್ಕಾಟ್ ಪಿಂಕ್ನೆ ಮತ್ತು ಇತರೆ ಇಬ್ಬರು ನಿರ್ದೇಶಕರನ್ನು ಬಂಧಿಸಿ ಕಡಪ ಜೈಲಿನಲ್ಲಿಡಲಾಗಿದೆ.
ಈ ಹಿಂದೆ ಕೇರಳದಲ್ಲೂ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆಮ್ ವೇ ಸಿಇಒ ವಿಲಿಯಂರನ್ನು ಬಂಧಿಸಲಾಗಿತ್ತು. ಈಗ ಗುರ್ ಗಾಂವ್ ನಲ್ಲಿ ಬಂಧಿತನಾದ ವಿಲಿಯಂ ವಶಕ್ಕೆ ಪಡೆಯಲು ಆಂಧ್ರದ ವಿವಿಧ ಜಿಲ್ಲೆಗಳ ಪೊಲೀಸರು ಪರಸ್ಪರ ಸ್ಪರ್ಧೆಗಿಳಿದಿರುವ ಪ್ರಸಂಗ ನಡೆದಿದೆ.
ಆಮ್ ವೇ ಸಿಇಒ ಹಾಗೂ ಇತರೆ ಆರೋಪಿಗಳ ಮೇಲೆ ಸುಮಾರು 9 ಕ್ರಿಮಿನಲ್ ಕೇಸುಗಳನ್ನು ಜಡಿಯಲಾಗಿದೆ. ಜಿ ರಾಮರಾವ್ ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ ಖಮ್ಮಂ ಪೊಲೀಸರು ಬಂಧಿಸಿದ್ದರು ನಂತರ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನೂಲ್ ಪೊಲೀಸರು ವಿಲಿಯಂರನ್ನು ವಶಕ್ಕೆ ಪಡೆದುಕೊಂಡು ಕಡಪ ಜೈಲಿನಲ್ಲಿರಿಸಿದ್ದಾರೆ.

ತಮ್ಮ ವಶಕ್ಕೆ ನೀಡುವಂತೆ ಅರ್ಜಿ ಹಾಕಿದ್ದಾರೆ
ಕರ್ನೂಲ್ ಜಿಲ್ಲಾ ನ್ಯಾಯಾಲಯದಲ್ಲಿ ಆಮ್ ವೇ ಸಿಇಒ ಜಾಮೀನು ಅರ್ಜಿ ವಿಚಾರಣೆ ತಿರಸ್ಕೃತಗೊಂಡಿದ್ದು, ಐದು ದಿನಗಳ ಕಾಲ ಕರ್ನೂಲು ಪೊಲೀಸರ ವಶಕ್ಕೆ ನೀಡಲಾಗಿತ್ತು. ಆದರೆ, ಕರ್ನೂಲು ಪೊಲೀಸರು ವಶಕ್ಕೆ ಪಡೆಯುವುದಕ್ಕೆ ಮೊದಲೇ ಖಮ್ಮಂ ಪೊಲೀಸರು ಬಂದು ವಿಲಿಯಂರನ್ನು ತಮ್ಮ ವಶಕ್ಕೆ ತೆಗೆದುಕೊಂದು ವಾರಾಂಗಲ್ ಜೈಲಿಗೆ ಕರೆದೊಯ್ದರು. ಈಗ ಮತ್ತೆ ಕರ್ನೂಲು ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಅರ್ಜಿ ಹಾಕಿದ್ದಾರೆ.

ಗುರ್ ಗಾಂವ್ ನಲ್ಲಿ ಬಂಧಿತನಾದ ವಿಲಿಯಂ
ಗುರ್ ಗಾಂವ್ ನಲ್ಲಿ ಆಂಧ್ರಪ್ರದೇಶ ಪೊಲೀಸರಿಂದ ಬಂಧಿತನಾದ ವಿಲಿಯಂ ಮೇಲೆ ಗುಂಟೂರು, ವಿಜಯವಾಡ, ಪ್ರಕಾಶಂ, ಖಮ್ಮಂ, ವಾರಂಗಲ್ ಹಾಗೂ ಮೇದಕ್ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2006ರಲ್ಲಿ ಸಿಐಡಿ ಕೂಡಾ ಹೈದರಾಬಾದಿನಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

Amway ಅಂದರೆ American Way
Amway ಅಂದರೆ American Way. ಇದು ಗ್ರಾಹಕ ಉತ್ಪನ್ನಗಳ ಪ್ರಮುಖ ಮಾರಾಟ ಕಂಪನಿ.ಆದರೆ, ಇದು 'The Prize Chits and Money Circulation Schemes (Banning) Act, 1978'.ಅಡಿಗೆ ಒಳಪಟ್ಟಿಲ್ಲ, ಹೀಗಾಗಿ ಕಂಪನಿಯಿಂದ ಹೂಡಿಕೆದಾರರಿಗೆ, ಗ್ರಾಹಕರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕೇರಳದಲ್ಲೂ ಆಮ್ ವೇ ವಂಚನೆ ಹಳೆ ಕೇಸ್
ವಿಲಿಯಂ ಸ್ಕಾಟ್ ಪಿಂಕ್ನೆ (ಸಿಇಒ), ಸಂಜಯ್ ಮಲ್ಹೋತ್ರಾ ಮತ್ತು ಅಂಜು (ನಿರ್ದೇಶಕರು) ವಿರುದ್ಧ ಕೇರಳದಲ್ಲಿ ಮೂರು ಪ್ರಕರಣಗಳು ದಾಖಲಾಗಿತ್ತು. ಕಳೆದ ವರ್ಷ ಬಂಧನವಾಗಿ ನಂತರ ಬಿಡುಗಡೆಯಾಗಿತ್ತು. ರಾಜ್ಯ ಮಟ್ಟದ ವಿತರಕರೊಬ್ಬರನ್ನು ಕೇರಳದ ಕೋಯಿಕ್ಕಾಡ್ ಪೊಲೀಸರು ಬಂಧಿಸಿದ್ದರು ನಂತರ ಕೇರಳದಲ್ಲಿ ಆಮ್ ವೇ ಅಷ್ಟು ಸುದ್ದಿಯಲ್ಲಿರಲಿಲ್ಲ.












Click it and Unblock the Notifications