ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದೆ ಕಣ್ಣೀರಿಟ್ಟ ಅಮೃತಾ

|
Google Oneindia Kannada News

ಹೈದರಾಬಾದ್, ಮಾರ್ಚ್ 10: ತನ್ನ ಮಗಳು ದಲಿತ ಯುವಕನನ್ನು ಪ್ರೀತಿಸಿ ವಿವಾಹವಾದ ಕಾರಣ ಅಳಿಯನನ್ನು ಕೊಲ್ಲಿಸಿದ್ದ ಮಾರುತಿ ರಾವ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರುತಿ ರಾವ್ ಅಂತ್ಯಕ್ರಿಯೆ ನೆರವೇರಿದೆ. ಆದರೆ, ಕೊನೆಯ ಬಾರಿಗೆ ಅಪ್ಪನ ಮುಖ ಕಾಣಲಾಗದೆ ಮಗಳು ಅಮೃತಾ ಕಣ್ಣೀರಿಟ್ಟಿದ್ದಾಳೆ.

Recommended Video

ಜಯಲಲಿತಾರವರು ಯಾವತ್ತೂ ಗರ್ಭಿಣಿಯಾಗಿರಲಿಲ್ಲ | ತಮಿಳುನಾಡು ಸರ್ಕಾರ ಹೇಳಿಕೆ | Oneindia Kannada

ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಯುವುದಕ್ಕೂ ಮುನ್ನ ಮಗಳಿಗೆ ಭಾವನಾತ್ಮಕ ಸಂದೇಶ ಬರೆದಿಟ್ಟು ಹೋಗಿದ್ದರು.

ಮಾರುತಿರಾವ್ ಡೆತ್ ನೋಟ್‌; ಅಮೃತಾಗೆ ಭಾವನಾತ್ಮಕ ಸಂದೇಶ!ಮಾರುತಿರಾವ್ ಡೆತ್ ನೋಟ್‌; ಅಮೃತಾಗೆ ಭಾವನಾತ್ಮಕ ಸಂದೇಶ!

ಹೈದರಾಬಾದ್‌ನ ಖೈರತಾಬಾದ್ ಆರ್ಯವೈಶ್ಯ ಭವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಾರುತಿ ರಾವ್ ಶವ ಸಿಕ್ಕ ಸ್ಥಳದಲ್ಲೇ ಡೆತ್ ನೋಟ್ ಸಿಕ್ಕಿತ್ತು. ಮಾರುತಿರಾವ್ ಆತ್ಮಹತ್ಯೆ ಪ್ರಕರಣದ ಬಳಿಕ ಪ್ರತಿಕ್ರಿಯೆ ನೀಡಿದ್ದ ಪುತ್ರಿ ಅಮೃತಾ, "ಅವರೊಂದಿಗೆ ನಾನು ಯಾವುದೇ ಸಂಪರ್ಕ ಹೊಂದಿಲ್ಲ. ಆತ್ಮಹತ್ಯೆ ಮಾಡಿಕೊಂಡಿದ್ದರೂ ಮಾಡಿಕೊಂಡಿರಬಹುದು" ಎಂದು ಹೇಳಿಕೆ ನೀಡಿದ್ದರು.

ಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆ

ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡು ನಿವಾಸಿ ಮಾರುತಿರಾವ್ ರಿಯಲ್ ಎಸ್ಟೇಟ್ ಉದ್ಯಮಿ. 2018ರ ಸೆಪ್ಟೆಂಬರ್ 15ರಂದು ಪುತ್ರಿ ಅಮೃತಾ ಪತಿ ಪ್ರಣಯ್ ಪೆರುಮಲ್ಲಾರನ್ನು ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಅವರು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದರು.

ಮಾರುತಿರಾವ್ ಆತ್ಮಹತ್ಯೆ; 200 ಕೋಟಿ ಆಸ್ತಿ ವಿವಾದ ಕಾರಣ?ಮಾರುತಿರಾವ್ ಆತ್ಮಹತ್ಯೆ; 200 ಕೋಟಿ ಆಸ್ತಿ ವಿವಾದ ಕಾರಣ?

ಗಾಂಧಿನಗರದ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ

ಗಾಂಧಿನಗರದ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆ

ಗಾಂಧಿನಗರದ ಸ್ಮಶಾನ ಭೂಮಿಯಲ್ಲಿ ಅಂತ್ಯಕ್ರಿಯೆಗೂ ಮುನ್ನ ಸೋಮವಾರದಂದು ಪಾರ್ಥೀವ ಶರೀರದ ಅಂತಿಮ ಯಾತ್ರೆ ನಡೆಸಲಾಯಿತು. ಅಪ್ಪನ ಮುಖ ಕಾಣಲು ಹಾತೊರೆದು ಬಂದ ಅಮೃತಾಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಅಮೃತಾ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದ್ದರಿಂದ ಪೊಲೀಸರು ಎಚ್ಚರಿಕೆ ವಹಿಸಿದ್ದರು. ತನ್ನ ಮಗುವಿನೊಂದಿಗೆ ಅಮೃತಾ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಹತ್ತಾರು ಮಂದಿ ಸುತ್ತುವರೆದರು ಇವರಲ್ಲಿ ಮಾರುತಿ ರಾವ್ ಹಿತೈಷಿಗಳೇ ಅಧಿಕವಾಗಿದ್ದರು. ಅನೇಕರು ಅಮೃತಾಗೆ ಧಿಕ್ಕಾರ ಕೂಗಿದರು.

ಮಾರುತಿರಾವ್ ಸಾವಿಗೆ ನೀನೆ ಕಾರಣ ಎಂದರು

ಮಾರುತಿರಾವ್ ಸಾವಿಗೆ ನೀನೆ ಕಾರಣ ಎಂದರು

ಮಾರುತಿರಾವ್ ಸಾವಿಗೆ ನೀನೆ ಕಾರಣ ಎಂದು ಅನೇಕರು ಜರಿಯತೊಡಿದರು, ಮಾರುತಿ ರಾವ್ ಅಮರವಾಗಿರಲಿ ಎಂದು ಘೋಷಣೆ ಕೂಗಿದರು. ಇದೆಲ್ಲವನ್ನು ಲೆಕ್ಕಿಸದೆ ಅಪ್ಪನ ಪಾರ್ಥೀವ ಶರೀರವಿದ್ದ ಕಡೆಗೆ ಅಮೃತಾ ಹೆಜ್ಜೆಯಿಡತೊಡಗಿದಳು. ಆದರೆ, ಅನೇಕ ಮಂದಿ ಆಕೆಯನ್ನು ಅಲ್ಲೇ ತಡೆದರು. ನಿನ್ನ ಮುಖ ನೋಡಲು ನಿನ್ನ ಅಪ್ಪನಿಗೆ ಇಷ್ಟವಿರಲಿಲ್ಲ, ಈಗ ನೀನು ಅವರ ಮುಖ ನೋಡುವುದು ನಮಗೆ ಇಷ್ಟವಿಲ್ಲ, ಇಲ್ಲಿಂದ ಹೊರಟುಬಿಡು ಎಂದಿದ್ದಾರೆ. ಪರಿಸ್ಥಿತಿ ಕೈಮೀರಿದಾಗ ವಿಧಿಯಿಲ್ಲದೆ ಪೊಲೀಸರ ರಕ್ಷಣೆಯಲ್ಲಿ ಕಣ್ಣೀರಿಡುತ್ತಾ ಕಾರಿನತ್ತ ಹಿಂತಿರುಗಿದ್ದಾರೆ. ನಾನು ಅಗಲಿಕೆಯ ನೋವನ್ನು ಚೆನ್ನಾಗಿ ಬಲ್ಲೆ, ಏನೇ ಆದರೂ ಅವರು ನನ್ನ ಅಪ್ಪ, ಕೊನೆಯ ಬಾರಿ ಅವರ ಮುಖ ನೋಡಲು ನನಗೆ ಆಗಲಿಲ್ಲ ಎಂಬ ನೋವಿದೆ ಎಂದಿದ್ದಾರೆ

ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?ತೆಲಂಗಾಣ ಹತ್ಯೆ: ಅಮ್ಮನಿಗೆ ಮಾಡಿದ ಫೋನ್ ಕರೆಗಳೇ ಪತಿಯ ಜೀವಕ್ಕೆ ಮುಳುವಾದವೇ?

ಚಿಕ್ಕಪ್ಪನ ಕಿರುಕುಳವೇ ಕಾರಣ ಎಂದ ಅಮೃತಾ

ಚಿಕ್ಕಪ್ಪನ ಕಿರುಕುಳವೇ ಕಾರಣ ಎಂದ ಅಮೃತಾ

ಮಾರುತಿ ರಾವ್ ಅವರ ಕಿರಿಯ ಸೋದರ ಶ್ರವಣ್ ಅವರು ಮಾರುತಿರಾವ್ ಅವರ ಅಂತಿಮ ಕ್ರಿಯೆಯನ್ನು ನೆರವೇರಿಸಿದ್ದಾರೆ. ಹಿಂದೂ ರುದ್ರಭೂಮಿ, ಮಾರುತಿ ರಾವ್ ಪಾರ್ಥೀವ ಶರೀರವಿದ್ದ ಮನೆಗೆ ಅಮೃತಾ ಬಂದರೆ ಒಳಗೆ ಬಿಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು. ಅಪ್ಪನಿಗೆ ಚಿಕ್ಕಪ್ಪ ಕಿರುಕುಳ ನೀಡಿರಬಹುದು, ಅಥವಾ ಪ್ರಣಯ್ ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮಿರ್ಯಾಲಗುಡದಲ್ಲಿ ಮಾತಾನಾಡಿದ ಅಮೃತಾ ಸುದ್ದಿಗಾರರಿಗೆ ಹೇಳಿದರು.

ಪ್ರಣಯ್ ಹತ್ಯೆಗೆ 1 ಕೋಟಿ ರು ನೀಡಿದ್ದ ಮಾರುತಿರಾವ್

ಪ್ರಣಯ್ ಹತ್ಯೆಗೆ 1 ಕೋಟಿ ರು ನೀಡಿದ್ದ ಮಾರುತಿರಾವ್

ಅಮೃತಾ ಪ್ರೇಮಿಸಿದ್ದ ಪ್ರಣಯ್ ಹತ್ಯೆಗೆ ಮಾರುತಿರಾವ್ 1 ಕೋಟಿ ರು ಸುಪಾರಿ ನೀಡಿದ್ದರು ಎಂಬ ಮಾಹಿತಿಯಿದೆ. ಆರ್ಯವೈಶ್ಯ ಸಮುದಾಯಕ್ಕೆ ಸೇರಿರುವ ಮಾರುತಿರಾವ್ ಅವರು ತಮ್ಮ ಮಗಳು ಮಾಲಾ ಸಮುದಾಯದ ದಲಿತ ಯುವಕ ಪ್ರಣಯ್ ಪ್ರೇಮಿಸಿರುವುದನ್ನು ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಣಯ್ ಹತ್ಯೆಗೆ ಮುಂದಾದರು, ಮಗಳಿಂದ ಮಾನ ಹಾನಿಯಾಗಿದ್ದರಿಂದ ಈ ಕೃತ್ಯಕ್ಕೆ ಕೈ ಹಾಕಿದರು ಎಂದು ಶ್ರವಣ್ ಪ್ರತಿಕ್ರಿಯಿಸಿದ್ದಾರೆ.

English summary
Amrutha, the wife of the slain Dalit boy P Pranay, who went to the graveyard to see her father's body amidst high police security, had to return immediately after the situation turned tense at the location on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X