ಎಲ್ಲಾ ಮಸೀದಿಗಳಿಗೆ 'ಅಲ್ಲಾ' ಮಾಲೀಕ: ಹೈದರಾಬಾದ್ ಎಂಪಿ ಓವೈಸಿ

ಎಲ್ಲಾ ಮಸೀದಿಗಳಿಗೆ ಅಲ್ಲಾನೇ ಮಾಲೀಕ ಎಂದ ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ. ರಾಮಜನ್ಮಭೂಮಿ ಹತ್ತಿರದಲ್ಲೇ ಶಿಯಾ ಮಸೀದಿ ಕಟ್ಟಲು ಶಿಯಾ ಪಂಗಡ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಕ್ಕೆ ಆಕ್ಷೇಪ.

ಹೈದರಾಬಾದ್, ಆಗಸ್ಟ್ 14: ಉತ್ತರ ಪ್ರದೇಶದ ವಿವಾದಿತ ಸ್ಥಳವಾದ ರಾಮಜನ್ಮಭೂಮಿಗೆ ಸನಿಹದಲ್ಲೇ ಇರುವ ಅತಿ ಹೆಚ್ಚು ಮುಸ್ಲಿಮರು ವಾಸಿಸುವ ಪ್ರದೇಶದಲ್ಲಿ ಶಿಯಾ ಪಂಗಡಕ್ಕೆ ಸೇರಿದ ಮಸೀದಿಯೊಂದನ್ನು ನಿರ್ಮಿಸುವ ಬಗ್ಗೆ ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿರುವ ಕುರಿತಂತೆ ಹೈದರಾಬಾದ್ ನ ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೇಹದುಲ್ ಮುಸ್ಲಿಮೀನ್ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಿಡಿ ಕಾರಿದ್ದಾರೆ.

ಇತ್ತೀಚೆಗೆ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದ ವಕ್ಫ್ ಮಂಡಳಿಯು, ರಾಮಜನ್ಮಭೂಮಿಯ ವಿವಾದಿದ ಭೂಮಿಯಲ್ಲಿ ಈ ಹಿಂದಿದ್ದ ಬಾಬ್ರಿ ಮಸೀದಿಯು ಶಿಯಾ ಪಂಗಕ್ಕೆ ಸೇರಿದ ಮಸೀದಿಯಾಗಿತ್ತು. ಇದೀಗ, ಅದರ ನಾಶವಾಗಿರುವುದರಿಂದ ಶಿಯಾ ಪಂಗಡದ ಜನರ ಪ್ರಾರ್ಥನೆಗಾಗಿ ಪ್ರತ್ಯೇಕ ಮಸೀದಿಯೊಂದನ್ನು ಕಟ್ಟಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಅದು ಕೋರಿತ್ತು.

'Allah Is Owner Of Mosques': AIMIM's Asaduddin Owaisi Slams Clerics' Body

ಇದರ ವಿರುದ್ಧ ಕಿಡ ಕಾರಿರುವ ಓವೈಸಿ, ''ಮಸೀದಿಗಳಿಗೆ ಯಾರೂ ಒಡೆಯರಲ್ಲ. ಹಾಗಾಗಿ, ಮಸೀದಿ ನಮ್ಮದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಎಲ್ಲಾ ಮಸೀದಿಗಳಿಗೂ ಅಲ್ಲಾ (ದೇವರು) ಒಡೆಯ. ಮಸೀದಿಗಳನ್ನು ಶಿಯಾ, ಸುನ್ನಿ, ಬರೆಲ್ವಿ, ಸೂಫಿ, ದಿಯೋಬಂದಿ, ಸಲಾಫಿ, ಬೊಹ್ರಿ ಸಮುದಾಯದವರು ನೋಡಿಕೊಳ್ಳುವ ಪದ್ಧತಿಯಿದೆ. ಅವರು ಕೇವಲ ನಿರ್ವಹಣೆ ಮಾಡಬೇಕೇ ಹೊರತು ಮಸೀದಿಗೆ ತಾವೇ ಒಡೆಯರು ಎಂಬಂತೆ ಮಾತನಾಡಬಾರದು'' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+