ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ.15ರಿಂದ 23ರವರೆಗೆ ತಿರುಮಲದಲ್ಲಿ ಪದ್ಮಾವತಿ ದೇವಿ ಬ್ರಹ್ಮೋತ್ಸವ

|
Google Oneindia Kannada News

ತಿರುಪತಿ, ನವೆಂಬರ್ 15 : ಪದ್ಮಾವತಿ ದೇವಿಯ ವಾರ್ಷಿಕ ನವಾಹ್ನಿಕ ಕಾರ್ತೀಕ ಬ್ರಹ್ಮೋತ್ಸವ ನವೆಂಬರ್ 15ರಿಂದ ಆರಂಭವಾಗಿದೆ. ಇದೇ ತಿಂಗಳ 23ರವರೆಗೆ ಅದ್ಧೂರಿಯಾಗಿ ಹಾಗೂ ಭಕ್ತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಕಾರ್ತೀಕ ಮಾಸದಲ್ಲಿ ಶುಕ್ರವಾರ ಪಂಚಮಿಯಂದು ಮಹಾಲಕ್ಷ್ಮಿ ಅವತರಿಸಿದಳು ಎಂಬುದು ನಂಬಿಕೆ.

ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲುತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು

ಸಾವಿರ ದಳಗಳ ಕಮಲದ ಹೂವಿನ ಮೇಲೆ ಹದಿನಾರು ವರ್ಷದ ಸುಂದರ ಹೆಣ್ಣಿನ ರೂಪದಲ್ಲಿ ಪದ್ಮ ಸರೋವರದಲ್ಲಿ ಅವತಾರ ಮಾಡಿದಳು. ಆಕೆ ಚಿನ್ನದ ಕಮಲದ ಮೇಲೆ ಕಂಡಬಂದಿದ್ದರಿಂದ ಪದ್ಮಾಲಯೇ, ಪದ್ಮಹಸ್ತೆ, ಪದ್ಮಪ್ರಿಯೆ, ಪದ್ಮಿನಿ, ಪದ್ಮಾಸಿನಿ, ಪದ್ಮಾವತಿ, ಪದ್ಮಜಾ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.

All set for Padmavati annual fest in Tirumala

ವಿವಿಧ ವಾಹನಗಳಲ್ಲಿ ವೈಭವಯುತವಾಗಿ ಪದ್ಮಾವತಿ ತಿರುಮಲದಲ್ಲಿ ಸಂಚರಿಸುತ್ತಾಳೆ. ಅದನ್ನು ನೋಡುವುದೇ ಭಕ್ತರ ಕಣ್ಣಿಗೆ ಹಬ್ಬ. ಈ ಒಂಬತ್ತು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಕಾರ್ಯಕ್ರಮದಲ್ಲಿ ಆ ತಾಯಿ ವೈಭವದಿಂದ ಕಾಣಿಸಿಕೊಳ್ಳುತ್ತಾಳೆ. ಇದರ ಸಲುವಾಗಿ ಟಿಟಿಡಿಯಿಂದ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಿಗಿ ಮಾಡಲಾಗಿದೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಸೇರಿದಂತೆ ದೇಶ- ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.

English summary
The annual Navahnika Kartika Brahmotsavam of Goddess Sri Padmavati Devi is all set commence from November 15 which will last up to November 23 showcasing her divine splendour and grandeur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X