ವಿದ್ಯಾರ್ಥಿ ಚಕ್ರಾಧರ್ ವಿನ್ಯಾಸದ ಬುಲೆಟ್ ಟ್ರೈನ್ ಲೋಗೋ ಕಥೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 30: ಪ್ರಧಾನಿ ಮೋದಿ ಸರ್ಕಾರದ ಸ್ವಚ್ಛ ಭಾರತ, ಬೇಟಿ ಬಚಾವೋ ಸೇರಿದಂತೆ ವಿವಿಧ ಯೋಜನೆಗಳಿಗೆ ಲೋಗೊ ವಿನ್ಯಾಸಗೊಳಿಸಿ ಕಳಿಸಿದ್ದ ಆ ವಿದ್ಯಾರ್ಥಿಗೆ ನಿರಾಶೆಯಾಗಿತ್ತು.

ಸತತ 30 ಬಾರಿ ವೈಫಲ್ಯ ಕಂಡ ಬಳಿಕ ಈಗ ಮೊದಲು ಯಶಸ್ಸು ಕಂಡಿದ್ದೇನೆ ಎಂದು ವಿದ್ಯಾರ್ಥಿ ಚಕ್ರಾಧರ್ ಸಂತಸದಿಂದ ಹೇಳಿದ್ದಾರೆ.

After 30 attempts, bullet train logo winner got it right with ‘Cheetah on a Loco’

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ 'ಬುಲೆಟ್‌ ಟ್ರೈನ್‌' ಯೋಜನೆಗೆ ಅಹಮದಾಬಾದಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಡಿಸೈನ್‌ ಸಂಸ್ಥೆಯ ವಿದ್ಯಾರ್ಥಿ ಚಕ್ರಾಧರ್ ಎಂಬಾತ ರೂಪಿಸಿರುವ ವಿಶಿಷ್ಟ ಲೋಗೋ ಆಯ್ಕೆಯಾಗಿದೆ.

ಲೋಗೋ ಮ್ಯಾನ್: ಚಕ್ರಾಧರ್ ನ ಸ್ನೇಹಿತರು, ಕುಟುಂಬಸ್ಥರು ಲೋಗೋ ಮ್ಯಾನ್ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಇವರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದು, ತಾಯಿ ಶಾಲೆಯೊಂದರ ಪ್ರಿನ್ಸಿಪಾಲ್‌ ಆಗಿದ್ದಾರೆ. '30 ಲೋಗೋ ಸ್ಪರ್ಧೆಗಳಲ್ಲಿ ಭಾಗವಹಿಸಿ ಫೇಲಾಗಿದ್ದೆ. ಬುಲೆಟ್ ಟ್ರೈನ್‌ಗೆ ಸೆಲೆಕ್ಟ್ ಆಗಿದ್ದು ನನ್ನ ಮೊದಲ ಜಯ' ಎಂದಿದ್ದಾರೆ ಚಕ್ರಾಧರ್.

ಹೈದ್ರಾಬಾದ್ ಮೂಲದ 27 ವರ್ಷದ ಚಕ್ರಾಧರ್ ಅಹಮದಾಬಾದ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಡಿಸೈನ್‌ ಸಂಸ್ಥೆಯಲ್ಲಿ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಬುಲೆಟ್‌ ಟ್ರೈನ್‌ಗೆ ನಾನು ವಿನ್ಯಾಸಗೊಳಿಸಿದ ಚಿರತೆ ಆಕಾರಾದ ಲೋಗೋ ಆಯ್ಕೆ ಆಗಿದೆ. ಇದು ಸಿಂಪಲ್ ಆಗಿ ಕಾಣುತ್ತದೆ. ಆದ್ರೆ ಈ ಲೋಗೋದಲ್ಲಿ ಬುಲೆಟ್ ಟ್ರೈನ್ ಸಂಬಂಧ ಹಲವು ಅಂಶಗಳು ಸೇರಿದ್ದು, ಅರ್ಥವತ್ತಾಗಿದೆ.

ಇಂಜಿನ್ ಜೊತೆಗೆ ಓಡುತ್ತಿರುವ ಚಿರತೆ, ಕೆಂಫು ಮತ್ತು ನೀಲಿ ಗೆರೆಗಳು ಚಕ್ರಾಧರ್ ವಿನ್ಯಾಸಿತ ಲೋಗೋದಲ್ಲಿದೆ. ಚೀತಾ ವೇಗವನ್ನು, ಕೆಂಪು ಬಣ್ಣ ಪ್ರಶಾಂತತೆ ಹಾಗೂ ನೀಲಿ ಬಣ್ಣ ವಿಶ್ವಾಸಾರ್ಹತೆಯನ್ನು ಪ್ರತಿನಿಧಿಸಲಿದೆ ಎಂದು ಚಕ್ರಾಧರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After 30 unsuccessful attempts Chakradhar Aalla hit the bulls eye with his design of a Cheetah for the ambitious bullet train project.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ