ಮಹಿಳೆಯರ ವಿರುದ್ಧ ಡೈಲಾಗ್ , ತೆಲುಗು ನಟ ಬಾಲಕೃಷ್ಣ ವಿರುದ್ಧ ದೂರು

Posted By:
Subscribe to Oneindia Kannada

ಹೈದರಾಬಾದ್, ಮಾರ್ಚ್ 08: ತೆಲುಗು ಚಿತ್ರರಂಗದ ಜನಪ್ರಿಯ ನಟ, ತೆಲುಗುದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಅವರ ವಿರುದ್ಧ ದೂರು ದಾಖಲಾಗಿದೆ. ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.

ಹಿಂದೂಪುರದ ಶಾಸಕ ಬಾಲಕೃಷ್ಣ ಅವರು ಸಾವಿತ್ರಿ ಎಂಬ ತೆಲುಗು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವಾಗ ಬಾಲಕೃಷ್ಣ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. [ಮಹಿಳೆಗೆ ಅನುಕಂಪದ ನುಡಿಗಳು ಬೇಡ, ಗೌರವ ಬೇಕು]

'ನನ್ನ ಫ್ಯಾನ್ಸಿಗೆ ನಾನು ಸುಮ್ಮನೆ ಹೀರೋಯಿನ್ ಗಳ ಹಿಂದೆ ಮುಂದೆ ಸುತ್ತುವುದು ಇಷ್ಟವಾಗುವುದಿಲ್ಲ. ನಾನು ಅವರಿಗೆ ಕಿಸ್ ಮಾಡಬೇಕು ಅಥವಾ ಅವರು ಗರ್ಭಧರಿಸುವಂತೆ ಮಾಡಬೇಕು' ಆಗ ಮಾತ್ರ ಮೆಚ್ಚುತ್ತಾರೆ ಎಂದು ಬಾಲಕೃಷ್ಣ ಅವರು ಹೇಳಿದ್ದರು. ಈ ಹೇಳಿಕೆಯನ್ನು ಖಂಡಿಸಿ ವಕೀಲರ ಸಮೂಹ ಬಾಲಕೃಷ್ಣ ಅವರ ವಿರುದ್ಧ ದೂರು ನೀಡಿದೆ.

Balakrishna booked for 'must kiss or get them pregnant' comment

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಹತ್ತಿರದ ಸಂಬಂಧಿ, ಮಾಜಿ ಮುಖ್ಯಮಂತ್ರಿ, ನಟ ಎನ್ ಟಿ ರಾಮರಾವ್ ಅವರ ಪುತ್ರ ಬಾಲಕೃಷ್ಣ ಅವರ ವಿರುದ್ಧ ದೂರು ಬಂದಿದೆ.

ಸಿನಿಮಾವೊಂದರ ಕಾರ್ಯಕ್ರಮದಲ್ಲಿ ಅವರ ನೀಡಿದ ಹೇಳಿಕೆಯ ಧ್ವನಿ ಮುದ್ರಣ ಪ್ರತಿಗಳನ್ನು ನೀಡಲಾಗಿದೆ. ಈ ಬಗ್ಗೆ ಕಾನೂನು ತಜ್ಞರು ಹಾಗೂ ಸಾಕ್ಷಿಗಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಸರಗೂರು ಪೊಲೀಸ್ ಇನ್ಸ್ ಪೆಕ್ಟರ್ ಎಸ್ ಲಿಂಗಯ್ಯ ಪ್ರತಿಕ್ರಿಯಿಸಿದ್ದಾರೆ.

ನರಾ ರೋಹಿತ್ ಅಭಿನಯದ ಬಿಡುಗಡೆಗೆ ಸಿದ್ದವಾಗಿರುವ ಸಾವಿತ್ರಿ ಚಿತ್ರದ ಆಡಿಯೋ ಕಾರ್ಯಕ್ರಮ 3 ದಿನಗಳ ಹಿಂದೆ ನಡೆದಿತ್ತು ಈ ವೇಳೆ ಇಂಥ ಹೇಳಿಕೆ ಕೊಟ್ಟು ಬಾಲಕೃಷ್ಣ ಅವರು ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಸರೂರ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಕೃಷ್ಣ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ನಟಿ ಹಾಗು ವೈಎಸ್‍ಆರ್ ಪಕ್ಷದ ಶಾಸಕಿ ರೋಜಾ, ಸಿಎಂ ಚಂದ್ರಬಾಬುನಾಯ್ಡು ಹಾಗು ಬಾಲಕೃಷ್ಣ ಅವರು ಬಹಿರಂಗವಾಗಿ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Noted Telugu actor Balakrishna invited trouble by passing vulgar comments against women at a movie function. A police complaint has been filed against the Telugu actor who is also a TDP MLA from Hindupur constituency in Andhra Pradesh.
Please Wait while comments are loading...