ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ ಚುನಾವಣೆಗೆ ಸ್ಪರ್ಧಿಸಿದ್ದ ತೃತೀಯಲಿಂಗಿ ಅಭ್ಯರ್ಥಿ ನಾಪತ್ತೆ!

|
Google Oneindia Kannada News

ಹೈದರಾಬಾದ್, ನವೆಂಬರ್ 28: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧ ಸ್ಪರ್ಧಿಸಿದ್ದ ಕೆ.ದಿನೇಶ್ ಚಕ್ರವರ್ತಿ ಎಮಬುವವರು ನಾಪತ್ತೆಯಾದ ಬೆನ್ನಲ್ಲೇ, ಪ್ರಪ್ರಥಮ ತೃತೀಯ ಲಿಂಗಿ ಅಭ್ಯರ್ಥಿ ಚಂದ್ರಮುಖಿ ಎಂಬುವವರೂ ನಾಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ.

ಸಿಎಂ ವಿರುದ್ಧ ಚುನಾವಣೆ ಸ್ಪರ್ಧಿಸಿದ್ದ ವ್ಯಕ್ತಿ ನಾಪತ್ತೆ, ರಾಜಕೀಯ ಕೈವಾಡ ಶಂಕೆ ಸಿಎಂ ವಿರುದ್ಧ ಚುನಾವಣೆ ಸ್ಪರ್ಧಿಸಿದ್ದ ವ್ಯಕ್ತಿ ನಾಪತ್ತೆ, ರಾಜಕೀಯ ಕೈವಾಡ ಶಂಕೆ

ಡಿಸೆಂಬರ್ 7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಇಲ್ಲಿನ ಗೋಶಮಹಲ್ ಕ್ಷೇತ್ರದಿಂದ ಬಹುಜನ್ ಲೆಫ್ಟ್ ಫ್ರಂಟ್ ಪಕ್ಷದಿಂದ ಸ್ಪರ್ಧಿಸಿರುವ ಚಂದ್ರಮುಖಿ ಮುವ್ವಾಲಾ, ಮಂಗಳವಾರ ಬೆಳಿಗ್ಗೆ ಸುಮಾರು 8.25 ರಿಂದ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

ನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣನಾನು ಅವನಲ್ಲ ಅವಳು... ಆರ್ ಜೆ ಪ್ರಿಯಾಂಕ ಜೀವನ ಪಯಣ

ತೆಲಂಗಾಣದ ಬಂಜರಾ ಹಿಲ್ಸ್ ನ ತಮ್ಮ ನಿವಾಸದಿಂದ ಅವರು ನಾಪತ್ತೆಯಾಗಿದ್ದಾರೆ. ಹೈದರಾಬಾದಿನ ತೃತೀಯ ಲಿಂಗಿ ಸಮುದಾಯದಲ್ಲಿ ಚಂದ್ರಮುಖಿ ಅವರ ಹೆಸರು ಬಹು ಪ್ರಸಿದ್ಧವಾಗಿದ್ದು, ಅವರು ಬಿಜೆಪಿಯ ರಾಜಾ ಸಿಂಗ್ ಮತ್ತು ಕಾಂಗ್ರೆಸ್ಸಿನ ಮುಖೇಶ್ ಗೌಡ್ ಅವರ ವಿರುದ್ಧ ಸ್ಪರ್ಧಿಸಿದ್ದರು.

A transgender candidate of Telangana assembly elections missing

ಚಂದ್ರಮುಖಿ ಅವರು ಎಷ್ಟು ಸಮಯವಾದರೂ ಬಾರದೆ ಇದ್ದಾಗ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಲಾಗಿದ್ದು, ಅವರ ಮನೆಯ ಸಮೀಪದ ಸಿಸಿಟಿವಿ ಫೂಟೇಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
Telangana assembly elections 2018: Chandramukhi Muvvala, a trans woman who is contesting the upcoming Telangana polls, has gone missing on Tuesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X