ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!

Posted By:
Subscribe to Oneindia Kannada

ಹೈದರಾಬಾದ್,ಮಾರ್ಚ್.17: ತಾಯಿ ತನ್ನ ಮಕ್ಕಳನ್ನೇ ಕೊಲೆಗೈದು 'ಮಕ್ಕಳನ್ನು ಸಾಯಿಸಿ ಅವರನ್ನು ಭಯದಿಂದ ಮುಕ್ತಗೊಳಿಸಿಬಿಟ್ಟೆ' ಎಂದಿದ್ದಾಳೆ. ಈ ಮಾತು ಕೇಳಿ ಆ ತಾಯಿಯ ಹೃದಯ ಕಲ್ಲಾಗಲು ಕಾರಣವೇನು? ಮಕ್ಕಳು ಮಾಡಿದ ತಪ್ಪಾದರೂ ಏನು? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ತಾಯಿಯಾದ ರಜಿನಿ (41) ತನ್ನ ಇಬ್ಬರು ಮಕ್ಕಳಾದ ಅಶ್ವಿತ (8) ಹಾಗೂ ಸಾನ್ಚಿತ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆಗೈದಿರುವ ಘಟನೆ ಹೈದರಾಬಾದಿನ ಸಿಕಂದರಾಬಾದಿನಲ್ಲಿ ಬುಧವಾರ ಸಂಜೆ ನಡೆದಿದೆ.[ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]

A mother killed her daughters in Hyderabad

ತಾಯಿಯೇ ಮಕ್ಕಳನ್ನು ಕೊಲೆ ಮಾಡಲು ಕಾರಣವೇನು?

ರಜಿನಿಗೆ ಅಶ್ವಿತ ಮತ್ತು ಸಾನ್ಚಿತ ಎಂಬ ಇಬ್ಬರು ಮಕ್ಕಳು. ಈ ಎರಡು ಮಕ್ಕಳು ತನ್ನ ತಂದೆಯಿಂದಲೇ ಲೈಂಗಿಕ ಕಿರುಕುಳ ಒಳಗಾಗುತ್ತಿವೆ ಎಂಬ ವಿಚಾರ ತಿಳಿದಿದೆ. ಇದರಿಂದ ಬೇಸತ್ತ ತಾಯಿ ಮನೆಯ ಕಿಟಕಿಯ ಗಾಜನ್ನು ತೆಗೆದುಕೊಂಡು ಮಕ್ಕಳ ಕುತ್ತಿಗೆ ಕತ್ತರಿಸಿ ಕೊಲೆಗೈದಿದ್ದಾಳೆ.[ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?]

ಗಂಡ ಮನೆಯಲ್ಲಿ ಇಲ್ಲದಿರುವ ಸಮಯ ಕಾದ ಈಕೆ ಸಿಕಂದರಾಬಾದಿನ ತನ್ನ ಮನೆಯ ಬೆಡ್ ರೂಮಿನಲ್ಲಿ ಈ ಕೃತ್ಯ ಎಸಗಿ ಮತಿ ಭ್ರಮಣೆಯಾದಂತೆ ನಟಿಸಿದ್ದಾಳೆ. ಕೊಲೆಗೈದ ಬಳಿಕ ತನ್ನ ಸ್ನೇಹಿತೆಗೆ ಮಕ್ಕಳನ್ನು ಸಾಯಿಸಿ ಅವರನ್ನು ಭಯದಿಂದ ಮುಕ್ತಗೊಳಿಸಿಬಿಟ್ಟೆ ಎಂದು ಸಂದೇಶ ಕಳುಹಿಸಿದ್ದಾಳೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿಕಂದರಾಬಾದಿನ ಪೊಲೀಸರು ತಾಯಿ ರಜಿನಿಯನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ ೩೦೨ರ ಅನ್ವಯ ಕೇಸು ದಾಖಲಿಸಿದ್ದಾರೆ. [ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A mother Rajini killed her daughters Aswitha, Sanvitha in Secunderabad, near Hyderabad. Her husband sexual abusing her own daughters.
Please Wait while comments are loading...