• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ : ಕತಾರ್ ಏರ್ ವೇಸ್ ವಿಮಾನದಲ್ಲಿ ಮಗು ದುರ್ಮರಣ

|

ಹೈದರಾಬಾದ್, ಸೆಪ್ಟೆಂಬರ್ 26: ಕತಾರ್ ಏರ್ ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ 11 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ದುರ್ಘಟನೆ ಬುಧವಾರದಂದು ನಡೆದಿದೆ. ಆದರೆ, ವಿಮಾನ ನಿಲ್ದಾಣದಲ್ಲಿ ಮಗು ಮೃತಪಟ್ಟಿಲ್ಲ ಎಂದು ಹೈದರಾಬಾದ್ ವಿಮಾನ ಪ್ರಾಧಿಕಾರ ಪ್ರತಿಕ್ರಿಯಿಸಿದೆ.

ಅರ್ಣವ್ ವರ್ಮಾ ಹೆಸರಿನ ಹಸುಗೂತನ್ನ ತಂದೆ ತಾಯಿ ಜತೆ ದೋಹಾದಿಂದ ಹೈದಾರಾಬಾದಿಗೆ ಬರುವಾಗ ಉಸಿರಾಟದ ತೊಂದರೆ ಅನುಭವಿಸಿದೆ. ಹೈದರಾಬಾದ್‌ನಲ್ಲಿ ವಿಮಾನ ಲ್ಯಾಂಡ್‌ ಆದ ಕೂಡಲೇ ಅಪೋಲೊ ಮೆಡಿಕಲ್‌ ಸೆಂಟರ್‌ಗೆ ಕರೆದೊಯ್ಯಲಾಗಿದೆ. ಆದರೆ, ವೈದ್ಯರು ಪರೀಕ್ಷಿಸಿ, ಇಲ್ಲಿಗೆ ಕರೆ ತರುವಾಗಲೆ ಮಗು ಮೃತಪಟ್ಟಿದೆ ಎಂದಿದ್ದಾರೆ.

ಸಾವಿರಾರು ಜನರು, ಪೊಲೀಸರ ಎದುರು ಕೊಡಲಿಯಿಂದ ಕಡಿದು ಕೊಂದ ಕೊಲೆಗಾರರು

'ಕತಾರ್ ಏರ್ ವೇಸ್ ಹಾಗೂ ಅಪೋಲೋ ಆಸ್ಪತ್ರೆಯ ಅಧಿಕೃತ ಹೇಳಿಕೆಗಾಗಿ ನಾವು ಕಾದಿದ್ದೇವೆ, ವಿಮಾನ ನಿಲ್ದಾಣದಲ್ಲಿ ಮಗು ಮೃತ ಪಟ್ಟಿಲ್ಲ' ಎಂದು ಹೈದರಾಬಾದ್ ವಿಮಾನ ಪ್ರಾಧಿಕಾರದ ವಕ್ತಾರರಾದ ಸಂಗೀತಾ ಸಿ. ಆರ್ ಹೇಳಿದ್ದಾರೆ.

ಯುಎಸ್‌ ಪಾಸ್‌ಪೋರ್ಟ್‌ ಹೊಂದಿದ್ದ ಮಗುವಿನ ತಂದೆ ಅನಿಲ್‌ ವರ್ಮಾ ಭಾರತೀಯ ಪಾಸ್‌ಪೋರ್ಟ್‌ನ್ನು ಹೊಂದಿದ್ದಾರೆ. ಕತಾರ್‌ ಏರ್‌ವೇಸ್‌ನ ವಿಮಾನ SR-500ನಲ್ಲಿ ಪ್ರಯಾಣಿಸುತ್ತಿದ್ದರು.

English summary
An 11-month-old baby who arrived on Qatar Airways from Doha died at Hyderabad airport in the early hours of Wednesday, the airline said. However, Hyderabad airport authorities denied that the baby died at the airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X