• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್‌ಡೌನ್ ನಡುವೆ ತೆಲಂಗಾಣದಲ್ಲಿ ನಡೆದ ಬಾಲ್ಯ ವಿವಾಹ

|

ಹೈದರಾಬಾದ್, ಜೂನ್ 4: ಲಾಕ್‌ಡೌನ್ ನಡುವೆ ತೆಲಂಗಾಣದಲ್ಲಿ ಬಾಲ್ಯ ವಿವಾಹವೊಂದು ನಡೆದಿದೆ. ಮದುವೆ ಮಾಡಿದ ಎಲ್ಲರ ಮೇಲೆ ಪ್ರಕರಣ ದಾಖಲಾಗಿದ್ದು, ಬಾಲಕಿಯ ರಕ್ಷಣೆ ಮಾಡಿದ್ದಾರೆ.

   ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪುತ್ರನ ಜೊತೆ ನಡೆಯುತ್ತಾ ಡಿಕೆಶಿ ಮಗಳ ಮದುವೆ | DKS Daughter | Aishwarya | CCD

   ಆರನೇ ತರಗತಿ ಹುಡುಗಿಗೆ 23 ವರ್ಷದ ಹುಡುಗನೊಂದಿಗೆ ಮದುವೆ ಮಾಡಲಾಗುತ್ತಿದೆ. ಬಾಲಕಿ ಆರನೇ ತರಗತಿ ಎಂದು ಪೋಷಕರು ಹೇಳುತ್ತಿದ್ದರೂ, ಆಕೆಯ ವಯಸ್ಸು ಇನ್ನು ಕಡಿಮೆ ಇದೆ ಎಂದು ಮಕ್ಕಳ ಹಕ್ಕುಗಳ ಸಂಘಟನೆಯ ಅಚ್ಯುತ ರಾವ್ ತಿಳಿಸಿದ್ದಾರೆ.

   ಮದುವೆಯಲ್ಲಿ ಮಾಸ್ಕ್ ಧರಿಸದಿದ್ದರೆ 10,000 ರೂ. ದಂಡ!

   ಪೋಷಕರ ಪ್ರಕಾರ ಹುಡುಗಿ ಆರನೇ ತರಗತಿ ಆಗಿದ್ದರೂ, ಆಕೆಯ ವಯಸ್ಸು 16 ಆಗುತ್ತದೆ. ಹೀಗಾಗಿ, ಅವರು ಏನೇ ಹೇಳಿದರೂ, ಇದೊಂದು ಬಾಲ್ಯ ವಿವಾಹವೇ ಎಂದು ಮಕ್ಕಳ ಹಕ್ಕುಗಳ ಸಂಘಟನೆಯ ಅಚ್ಯುತ ರಾವ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

   ಮದುವೆ ಮಾಡಿದ ಪಾಲಕರು, ಮದುವೆಯಲ್ಲಿ ಭಾಗಿಯಾಗಿದ್ದ ಗ್ರಾಮಸ್ಥರು ಹಾಗೂ ಅರ್ಚಕರ ಮೇಲೆಯೂ ಕೇಸ್‌ ಬಿದ್ದಿದೆ. ಬಾಲ್ಯ ವಿವಾಹ ಅಂತ ತಿಳಿದಿದ್ದರೂ, ಮದುವೆಯಲ್ಲಿ ಭಾಗಿಯಾದವರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಅಚ್ಯುತ ರಾವ್ ಒತ್ತಾಯ ಮಾಡಿದ್ದಾರೆ.

   ಐಪಿಸಿ ಸೆಕ್ಷನ್ 37 ಪ್ರಕಾರ ಪ್ರಕರಣ ದಾಖಲಾಗಿದೆ. ಹೈದರಾಬಾದ್ ಹೊರವಲಯ ಮಲ್ಕಾಜ್ ಗಿರಿ ಮೆದ್ ಚಾಲ್ ಜಿಲ್ಲೆಯ ಗುಂಡಲಾಪೋಂಚಾಪಲ್ಲಿಯ ದೇವಸ್ಥಾನದಲ್ಲಿ ಮದುವೆ ನಡೆದಿದೆ. ವರ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

   English summary
   Child Marriage: A 23 year old man married 16 year old girl in Telangana. Child rights activists filed a complaint.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X