ಮಳೆಗೆ ಆಂಧ್ರದ ಗುಂಟೂರು ಜಲಾವೃತ: ಪ್ರವಾಹಕ್ಕೆ 8 ಮಂದಿ ಬಲಿ!

Written By: Ramesh
Subscribe to Oneindia Kannada

ಹೈದರಾಬಾದ್ ಸೆ. 23 : ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಇದರಿಂದ ಆಂಧ್ರಪದ್ರೇಶದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.

ಈ ಮಳೆಗೆ 8 ಜನ ಸಾವನ್ನಪ್ಪಿದ್ದು, ಹಲವರು ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಮೃತರೆಲ್ಲ ಗಂಟೂರು ಜಿಲ್ಲೆಗೆ ಸೇರಿದವರಾಗಿದ್ದು, ಪ್ರವಾಹದಲ್ಲಿ ಸಿಲುಕಿದವರನ್ನ ರಕ್ಷಿಸಲು ಎನ್‍ ಡಿಆರ್ ಎಫ್ ಸೇನೆಯನ್ನ ಮುಖ್ಯಂತ್ರಿ ಚಂದ್ರಶೇಖರ್ ರಾವ್ ಕರೆಸಿದ್ದಾರೆ. ಪ್ರವಾಹದಿಂದಾಗಿ ತಗ್ಗು ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಗುಂಟೂರು, ಹೈದರಬಾದ್ ಸೇರಿದಂತೆ ಆಂಧ್ರಪ್ರದೇಶದ ಬಹುತೇಕ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಫೋಷಿಸಲಾಗಿದೆ. ಗುಂಟೂರು ಜಿಲ್ಲೆ ಸಂಪೂರ್ಣ ಮಳೆ ನೀರಿನಿಂದ ತುಂಬಿಹೋಗಿದ್ದು, ರಸ್ತೆಗಳಲ್ಲಿ ನೀರು ಆವರಿಸಿಕೊಂಡಿದ್ದು, ಜನ ಜಲಪ್ರಳಯದ ಭೀತಿಯಲ್ಲಿದ್ದಾರೆ.

ನಗರ ರಸ್ತೆಗಳು ಸೇರಿದಂತೆ, ರೈಲ್ವೆ ಹಳಿಗಳು ಕೂಡ ಜಲಾವೃತಗೊಂಡಿದ್ದು ಮುಂದಿನ 30 ಗಂಟೆಗಳ ಕಾಲ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಗುರುವಾರ ಸಂಜೆ 5.30ದಿಂದ ಇಂದು ಮಳೆ ಸುರಿಯಾಗುತ್ತಿದೆ, ಹೈದರಾಬಾದ್, ರಂಗ ರೆಡ್ಡಿ, ಅದಿಲಾಬಾ, ನಿಜಾಮ್‍ಬಾದ್, ಕರೀಂ ನಗರ, ವರಾಂಗಲ್, ನಲಗೊಂಡ, ಇನ್ನಿತರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ

ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗುಂಟೂರು, ಹೈದರಬಾದ್ ಸೇರಿದಂತೆ ಆಂಧ್ರಪ್ರದೇಶದ ಬಹುತೇಕ ಎಲ್ಲಾ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಫೋಷಿಸಲಾಗಿದೆ. ಇನ್ನು ಐಟಿ ಕಂಪನಿ ನೌಕರರಿಗೆ ಮನೆಯಿಂದ ಕೆಲಸ ನಿರ್ವಹಿಸಲು ಐಟಿ ಕಂಪನಿಗಳು ತಿಳಿಸಿವೆ.

ಸಿಕ್ರಿಂದ್ರಬಾದ್-ಗುಂಟೂರು ನಡುವೆ ರೈಲ್ವೆ ಸಂಚಾರ ಸ್ಥಗಿತ

ಸಿಕ್ರಿಂದ್ರಬಾದ್-ಗುಂಟೂರು ನಡುವೆ ರೈಲ್ವೆ ಸಂಚಾರ ಸ್ಥಗಿತ

ನಗರದ ರಸ್ತೆಗಳು ಸೇರಿದಂತೆ, ರೈಲ್ವೆ ಹಳಿಗಳು ಕೂಡ ಜಲಾವೃತಗೊಂಡಿದ್ದು ಮುಂದಿನ 30 ಗಂಟೆಗಳ ಕಾಲ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.

ಎನ್‍ ಡಿಆರ್ ಎಫ್ ಸೇನೆ ಬುಲಾವ್

ಎನ್‍ ಡಿಆರ್ ಎಫ್ ಸೇನೆ ಬುಲಾವ್

ಆಂದ್ರಪ್ರದೇಶದಲ್ಲಿ ಜಲಪ್ರಳಯ ಎದುರಾಗಿದ್ದರಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಎನ್‍ ಡಿಆರ್ ಎಫ್ ಸೇನೆಯ ಕರೆಸಿಕೊಂಡಿದ್ದು. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಹಾಗೂ ರಾಜ್ಯದ್ಯಾಂತ ಹೈಅಲರ್ಟ್ ಘೋಷಿಸಲಾಗಿದೆ.

ಮೃತ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ

ಮೃತ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ, ಈ ಮಳೆಗೆ 8 ಜನ ಸಾವನ್ನಪ್ಪಿದ್ದು. ಆ ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರುಗಳನ್ನು ಸರ್ಕಾರ ಘೋಷಿಸಿದೆ.

ತಗ್ಗುಪ್ರದೇಶಗಳಿಗೆ ನೀರು

ತಗ್ಗುಪ್ರದೇಶಗಳಿಗೆ ನೀರು

ಈ ಮಳೆಯಿಂದಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವರು ಮನೆಗಳಿಗೆ ನೀರು ನುಗ್ಗಿದ್ದು ಆಸ್ತಿಗಳಿಗೆ ಅಪಾರ ಹಾನಿ ಉಂಟಾಗಿದೆ.

ಹೈಅಲರ್ಟ್ ಘೋಷಣೆ

ಹೈಅಲರ್ಟ್ ಘೋಷಣೆ

ಹೈದರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಇನ್ನು ಎರಡು ದಿನಗಳ ವರೆಗೆ ಭಾರೀ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಇದರಿಂದ ರಾಜ್ಯದ್ಯಾಂತ ಹೈಅಲರ್ಟ್ ಘೋಷಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least eight people have died in flood-hit Guntur district in Andhra Pradesh after two days of heavy downpour. A high alert was sounded in Hyderabad after the Met office has forecast more rain in the next few days.
Please Wait while comments are loading...