45 ರೂಪಾಯಿಗೆ ಸೀರೆ! ಮುಗಿಬಿದ್ದ ಮಹಿಳೆಯರು

ಗುಂಟೂರು, ಸೆಪ್ಟೆಂಬರ್ 27: ನಲವತ್ತೈದು ರೂಪಾಯಿಗೆ ಕೆ.ಜಿ ಈರುಳ್ಳಿಯೇ ಬಾರದೇ ಇರುವ ಈ ಸಮಯದಲ್ಲಿ 45 ಸೀರೆ ಕೊಟ್ಟರೆ!

ಹೌದು, ಆಂಧ್ರಪ್ರದೇಶದ ಗುಂಟೂರು ಜಿಲ್ಲೆ ವಿನುಕೊಂಡದಲ್ಲಿ ವಾಸವಿ ಹೆಸರಿನ ಸೀರೆ ಅಂಗಡಿಯೊಂದು ಕೇವಲ 45 ರೂಪಾಯಿಗೆ ಸೀರೆ ಕೊಡುತ್ತೇವೆಂದು ಜಾಹೀರಾತು ಪ್ರಕಟಿಸಿದೆ.

45 ರೂಪಾಯಿಗೆ ಬ್ಲೌಸ್ ಕೂಡ ಸಿಗದ ಈ ದಿನಗಳಲ್ಲಿ ಸೀರೆಯೇ 45 ರೂಪಾಯಿಗೆ ಸಿಗುತ್ತದೆಂದರೆ ಬಿಡಲಾಗುವುದೆ. ಬೆಳಕು ಹರಯುವ ಮುನ್ನವೇ ಅಂಗಡಿ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.

45 rs Per Saree In Andhra Pradeshs Guntur

ಅಂಗಡಿ ತೆಗೆಯಬೇಕೆಂದರೆ ಅಂಗಡಿಯವರು ಪೊಲೀಸರನ್ನು ಕರೆಸಬೇಕಾಯಿತು. ಮಹಿಳೆಯರ ನೂಕಾಟ ತಳ್ಳಾಟ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಸಹ ಮಾಡಬೇಕಾಯಿತು. ಅಂಗಡಿ ಮುಂದೆ ಸಂಚಾರ ದಟ್ಟಣೆ ಉಂಟಾಗಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಅಂಗಡಿಯಲ್ಲಿ ಇಂಚೂ ಜಾಗವಿಲ್ಲದೆ ಮಹಿಳೆಯರು ತುಂಬಿ ಹೋಗಿದ್ದರು. 45 ರೂಪಾಯಿಗೆ ಮಾರಲಿಟ್ಟಿದ್ದ ಸೀರೆಗಳ ಜೊತೆಗೆ ಬೇರೆ ಹೆಚ್ಚಿನ ಬೆಲೆಯ ಸೀರೆಗಳೂ ಮಾಯವಾದುವೆಂದು ಸೀರೆ ಅಂಗಡಿ ಮಾಲೀಕರು ಹಣೆ ಚಚ್ಚಿಕೊಂಡಿದ್ದಾರೆ.

ಆಂಧ್ರ ತೆಲಂಗಾಣದಲ್ಲಿ ಹೊಸದಾಗಿ ತೆರೆಯುವ ಸೀರೆ ಅಂಗಡಿಗಳು, ಶಾಪಿಂಗ್ ಮಾಲ್‌ಗಳು ಹೀಗೆ ಅತ್ಯಂತ ಕಡಿಮೆ ಬೆಲೆಗೆ ಸೀರೆಗಳನ್ನು ಮಾರುವುದು ಸಾಮಾನ್ಯ. ಹೀಗೆ ಕಡಿಮೆ ಬೆಲೆಗೆ ಸೀರೆ ಮಾರುವ ವ್ಯಾಪಾರ ತಂತ್ರಕ್ಕೆ ವಿರೋಧವೂ ವ್ಯಕ್ತವಾಗಿತ್ತು.

ಕಡಿಮೆ ಬೆಲೆಗೆ ಸೀರೆ ಮಾರುವುದಾಗಿ ಮಾಡುವ ವ್ಯಾಪಾರ ತಂತ್ರ ಮಹಿಳೆಯರ ಬಲಹೀನತೆಯನ್ನು ಬಳಸಿ ಪ್ರಚಾರ ಪಡೆಯುವ ತಂತ್ರವಾಗಿದೆ ಎಂದು ಕೆಲವು ವಿಚಾರವಂತರು ವಾದಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+