ಹೈದ್ರಾಬಾದ್: ನಾಲ್ವರು ಇಂಜಿನಿಯರ್ ವಿದ್ಯಾರ್ಥಿಗಳು ನೀರು ಪಾಲು

Posted By:
Subscribe to Oneindia Kannada

ಹೈದ್ರಾಬಾದ್, ಜನವರಿ 8: ಈಜಲು ದೊಡ್ಡ ಕೆರೆಗೆ ತೆರಳಿದ್ದ ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕೆ. ಹರಿಕೃಷ್ಣ ರಾಜು, ಕೋಟಾ ಸಾಯಿ, ಪರಸುಮನ್, ವಿಜಯ್ ಶಂಕರ್ ಮೃತ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ತಿಗಳು ಹೈದ್ರಾಬಾದ್ ನಿಂದ 330 ಕಿ.ಮೀ ದೂರದಲ್ಲಿರುವ ಈಲ್ಲೂರಿನ ರಾಮಚಂದ್ರ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ದೇವರಹಿಪ್ಪರಗಿ ಕೆರೆಯಲ್ಲಿ ಈಜಲು ಹೋಗಿ ಮೂವರು ನೀರು ಪಾಲು

ಈಜಾಡಲು ಎಂದು ಕೆರೆಗೆ ಜಿಗಿದ ವಿದ್ಯಾರ್ಥಿಗಳು ಈಜಲು ಬರದೇ ಸಾವನ್ನಪಿದ್ದು, ನಾಲ್ವರ ಮೃತ ದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

4 Engineering Students, On An Outing, Drown In Andhra Pradesh

5 ಸಾವು, 15 ಕಾರ್ಮಿಕರಿಗೆ ಗಾಯ: ರೆದ ಬೊಲೆರೋ ಕಾರ್ ವೊಂದು ಪಲ್ಟಿ ಹೊಡೆದ ಪರಿಣಾಮ ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ಗದ್ವಾಲ್ ಜಿಲ್ಲೆಯ ಜೋಗುಲಾಂಬದಲ್ಲಿ ಸೋಮವಾರ ಸಂಭವಿಸಿದೆ.

ಇಂದು ಬೆಳಗ್ಗೆ ಕೆಸಲಕ್ಕೆಂದು ಸುಮರು 36 ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ತೆರೆದ ಬೊಲೆರೋ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಬೊಲೆರೋ ಕಾರಿನಲ್ಲಿದ್ದವರೆಲ್ಲರು ಗದ್ವಾಲ್ ಜಿಲ್ಲೆಯವರು ಎಂದು ತಿಳಿದುಬಂದಿದ್ದು, ಮೃತರ ಹೆಸರು ವಿಳಾಸ ತಿಳಿದುಬಂದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four engineering students have drowned in a large pond in West Godavari district in Andhra Pradesh. The undergraduate students had gone for an outing on Saturday, during which they decided to jump into the water for a quick swim, police said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ