ಹಾಡಹಗಲೇ 20 ಲಕ್ಷ ರೂ, ಮೌಲ್ಯದ ಆಭರಣ ಲೂಟಿ
ಹೈದರಾಬಾದ್, ಜನವರಿ 18: ವ್ಯಾಪಾರಿಯೊಬ್ಬರು ಬೈಕ್ ನಲ್ಲಿರಿಸಿದ್ದ ಸುಮಾರು 20 ಲಕ್ಷ ರೂ, ಮೊತ್ತದ ಚಿನ್ನ, ಬೆಳ್ಳಿ ಮತ್ತು ನಗದನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಿಗ್ಗೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ನಿಜಾಮಾಬಾದ್ ಜಿಲ್ಲೆಯ ಡಿಚ್ ಪಲ್ಲಿ ಎಂಬಲ್ಲಿ ಚಿನ್ನಾಭರಣ ಅಂಗಡಿ ಹೊಂದಿರುವ ಶ್ರವಣ್ ಎಂಬುವವರೇ ಆಭರಣ ಕಳೆದುಕೊಂಡವರಾಗಿದ್ದಾರೆ. ಶ್ರವಣ್ ಅವರು ಶ್ರೀ ಶಿವಸಾಯಿ ಜುವೆಲ್ಲರ್ಸ್ ಅಂಗಡಿಯನ್ನು ನಡೆಸುತಿದ್ದು, ಎಂದಿನಂತೆ ತಮ್ಮ ಬೈಕ್ ನಲ್ಲಿ ಬೆಳಿಗ್ಗೆ ೧೦.೩೦ ಘಂಟೆಗೆ ಅಂಗಡಿಗೆ ಬಂದಿದ್ದಾರೆ.
Recommended Video
ಬೈಕ್ ನ್ನು ನಿಲ್ಲಿಸಿ ಅಂಗಡಿಯ ಶಟರ್ ಗೆ ಹಾಕಿದ್ದ ಬೀಗಗಳನ್ನು ತೆರೆಯುತ್ತಿರುವಾಗಲೇ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಶ್ರವಣ್ ಅವರು ಬೈಕ್ ನಲ್ಲಿರಿಸಿದ್ದ ಚಿನ್ನಾಭರಣಗಳ ಬ್ಯಾಗ್ ನ್ನು ಕ್ಷಣ ಮಾತ್ರದಲ್ಲಿ ಎಗರಿಸಿ ಪರಾರಿ ಆಗಿದ್ದಾರೆ. ಈ ದೃಶ್ಯ ಪಕ್ಕದ ಅಂಗಡಿಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

300 ಗ್ರಾಂ ಚಿನ್ನ ಮತ್ತು 13 ಕೆ.ಜಿ ಬೆಳ್ಳಿ ಮತ್ತು 2 ಲಕ್ಷ ನಗದು ಕಳೆದುಕೊಂಡಿರುವುದಾಗಿ ಅಂಗಡಿಯ ಮಾಲೀಕ ಶ್ರವಣ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು, ಒಟ್ಟು ೨೦ ಲಕ್ಷ ರುಪಾಯಿ ಮೌಲ್ಯ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸುತಿದ್ದಾರೆ.












Click it and Unblock the Notifications