ಶಿಕ್ಷಕರ ಕಿರುಕುಳ: ಹೈದರಾಬಾದಿನ 10 ನೇ ತರಗತಿಯ ಬಾಲಕಿ ಆತ್ಮಹತ್ಯೆಗೆ ಯತ್ನ

Posted By:
Subscribe to Oneindia Kannada

ಹೈದರಾಬಾದ್, ನವೆಂಬರ್ 6: ಶಿಕ್ಷಕರ ಕಿರುಕುಳ ತಡೆಯಲಾರದೆ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಶಾಲೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಶಿಕ್ಷಕರ ಕಿರುಕುಳ ತಾಳಲಾರದೆ ಕೇರಳದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಇಲ್ಲಿನ ಪಲಮಕುಲ ಕಸ್ತೂರ್ ಬಾ ರೆಸಿಡೆನ್ಷಿಯಲ್ ಶಾಲೆಯಲ್ಲಿ ಓದುತ್ತಿರುವ ರೇಣುಕಾ ಎಂಬ ಬಾಲಕಿ ಆಕೆಯ ಗಣಿತ ಶಿಕ್ಷಕರು ನೀಡುತ್ತಿದ್ದ ನಿರಂತರ ಕಿರುಕುಳವನ್ನು ತಡೆಯಲಾರದೆ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಿಕ್ಷಕಿಯು ಪ್ರತಿದಿನವೂ ತರಗತಿಯಲ್ಲಿರುವ ಎಲ್ಲರ ಮುಂದೆಯೂ ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರು. ಇದರಿಂದ ನನಗೆ ಮಾನಸಿಕವಾಗಿ ತೀರಾ ನೋವಾಗಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

10th student attempts suicide after repeated harassment by teacher in Hyderabad

ಮಕ್ಕಳ ಹಕ್ಕು ಸಂಘಟನೆಯ ಕಾರ್ಯಕರ್ತರು ಶಾಲೆಗೆ ತೆರಳಿ ಮಗುವಿಗೆ ಆಪ್ತಸಮಲೆ ನೀಡುವುದಾಗಿಯೂ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿಯೂ ಹೇಳಿದ್ದಾರೆ. ಇತ್ತೀಚೆಗಷ್ಟೇ, ಕೇರಳದಲ್ಲಿ ಶಿಕ್ಷಕರ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿಯೋರ್ವಳು ಶಾಲೆಯ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Class X student of a government school in Hyderabad attempted suicide by jumping off the second floor of the school building after alleged and repeated harassment by her Mathematics teacher.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ