99 ಸಾವಿರ ನಕಲಿ ಮತಗಳನ್ನು ಡಿಲೀಟ್ ಮಾಡಿದ್ದೇವೆ: ಹುಬ್ಬಳ್ಳಿ ಜಿಲ್ಲಾಧಿಕಾರಿ ಸ್ಪಷ್ಟನೆ
ಹುಬ್ಬಳ್ಳಿ, ಡಿಸೆಂಬರ್, 02: ಆ್ಯಪ್ ಮೂಲಕ ಮತದಾರರ ಸರ್ವೇ ಪ್ರಕರಣ ಕುರಿತಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ಹಾಗೂ ಪಾಲಿಕೆ ಆಯುಕ್ತ ಗೋಪಾಲ ಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನಿನ್ನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ್ಯಪ್ ಮೂಲಕ ಸರ್ವೇ ಮಾಡಿದ ಹಿನ್ನೆಲೆಯಲ್ಲಿ ವಿರೇಶ್, ಮಂಜುನಾಥ್, ನಿತೇಶ್ ಎಂಬುವವರ ವಿರುದ್ದ ದೂರು ದಾಖಲಾಗಿತ್ತು. ಹಾಗೆಯೇ ಜಿಲ್ಲೆಯಲ್ಲಿ 99 ಸಾವಿರ ನಕಲಿ ಮತಗಳು ಡಿಲೀಟ್ ಆಗಿವೆ. ನಕಲಿ ಮತದಾರರು ಇರುವುದರಿಂದ ಅವುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ಮಾಹಿತಿ ನೀಡಿದರು.
3 ಜನರ ವಿರುದ್ಧ ಎಫ್‌ಐಆರ್
ದೆಹಲಿ ಮೂಲದ ಎಎಸ್‌ಆರ್ ರಿಸರ್ಚ್ ಆ್ಯಂಡ್ ಕನ್ಸಲ್ಟಿಂಗ್ ಕಂಪನಿ ಹೆಸರಿನಲ್ಲಿ ಸರ್ವೇ ಮಾಡಿದ್ದ ಟೀಮ್ ಇದಾಗಿದೆ. ಆ್ಯಪ್ ಮೂಲಕ ಸರ್ವೇ ಮಾಡುತ್ತಿದ್ದ ಟೀಮ್ ವಿರುದ್ಧ ದೂರು ಕಾಂಗ್ರೆಸ್ ಮುಖಂಡರು ದೂರು ನೀಡಿದ್ದರು. ಈ ಹಿನ್ನೆಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಹಾಗೂ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ನೀಡಿದವರ ಬಳಿ ಮಾಹಿತಿಯನ್ನು ಪಡೆದುಕೊಂಡರು. ನಿನ್ನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಏಜೆನ್ಸಿಯವರು ಮತದಾರರ ಮಾಹಿತಿ ಸಂಗ್ರಹ ಮಾಡುತ್ತಾರೆ ಅಂತಾ ದೂರು ಬಂದಿತ್ತು. ಮಾಹಿಸಿ ಸಂಗ್ರಹದಿಂದ ಮತದಾರರ ಹೆಸರು ಡಿಲೀಟ್ ಆಗುವ ಚಾನ್ಸ್ ಇದೆ ಎಂದು ದೂರು ನೀಡಿದ್ದರು. ಆಗ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 3 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ತಿಳಿಸಿದರು.
ಹುಬ್ಬಳ್ಳಿ: ಶೇ. 40 ಆಯ್ತು, ಈಗ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಶೇ. 25 ಕಮಿಷನ್ ಆರೋಪ
ಜಿಲ್ಲೆಯಲ್ಲಿ 99 ಸಾವಿರ ಮತಗಳ ಡಿಲೀಟ್
ಹೀಗಾಗಿ ಎಲೆಕ್ಷನ್ ಕಮೀಷನ್‌ನಿಂದ ನಮಗೆ ರಿಪೋರ್ಟ್ ಕೇಳಿದ್ದಾರೆ. ನಾನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದೇನೆ. ಆದಷ್ಟು ಬೇಗ ನಾನು ಮಾಹಿತಿ ಕೊಡುತ್ತೇನೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ತಿಳಿಸಿದರು. ನಮ್ಮ ಜಿಲ್ಲೆಯಲ್ಲಿ 99 ಸಾವಿರ ಮತಗಳನ್ನು ಡಿಲೀಟ್ ಆಗಿವೆ. ನಕಲಿ ಮತದಾರರು ಇರುವುದರಿಂದ ಅವುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಅದರಲ್ಲಿ 47 ಸಾವಿರ ಡುಪ್ಲಿಕೇಟ್ ವೋಟರ್ಸ್ ಇವೆ. ಇನ್ನೂ ಕೆಲವು ಮೃತರಾದವರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಹೀಗೆ ಧಾರಾವಾಡ ಜಿಲ್ಲೆಯಲ್ಲಿ 99 ಸಾವಿರ ಮತಗಳು ಡಿಲೀಟ್ ಆಗಿವೆ ಎಂದು ಮಾಹಿತಿ ನೀಡಿದರು.

ಯಾವುದೇ ಏಜೆನ್ಸಿಗಳಿಗೆ ಅನುಮತಿ ನೀಡಿಲ್ಲ
ಡಿಲೀಟ್ ಮಾಡಿರುವ ಮಾಹಿತಿಯನ್ನು ನಾವೇ ರಾಜಕೀಯ ಪಕ್ಷಗಳಿಗೆ ನೀಡಿದ್ದೇವೆ. ತಪ್ಪಾಗಿ ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್ ಆಗಿದ್ದರೆ ಅಂತಹರ ಹೆಸರು ಕೊಡಿ. ನಾವು ಅದನ್ನು ಸರಿ ಮಾಡಿಸುತ್ತೇವೆ. ಯಾವುದೇ ಏಜೆನ್ಸಿಗಳಿಗೆ ಅನುಮತಿ ನೀಡಿಲ್ಲ. ಏಜೆನ್ಸಿ ಅವರು ಇಂಡಿಪೆಂಡೆಂಟ್ ಆಗಿ ಸರ್ವೇ ಮಾಡುತ್ತಿದ್ದಾರೆ. ನಾವು ಡಿಟೇಲ್ ರಿಪೋರ್ಟ್ ಅನ್ನು ಎಲೆಕ್ಷನ್ ಕಮೀಷನ್‌ಗೆ ಒಪ್ಪುಸುತ್ತೇವೆ. ಸದ್ಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯಾದ ಬಳಿಕ ಇವರ ಹೊರತಾಗಿ ಯಾರೇ ಆರೋಪಿಗಳು ಇದ್ದರೂ ಅವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.